ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್
From Wikipedia, the free encyclopedia
ಅಂತರಜಾಲ ಆಧಾರಿತ ಕರೆ ಪ್ರೋಟೋಕಾಲ್ (VoIP ) ಎಂಬುದು ಅಂತರಜಾಲ ಅಥವಾ ಇನ್ನಿತರ ಅಂಶ-ವ್ಯವಸ್ಥಿತ ಜಾಲಗಳಂತಹಾ IP ಜಾಲಗಳ ಮೂಲಕ ಕರೆ ಸಂವಹನದ ಬಟವಾಡೆಗಾಗಿ ಬಳಸುವ ಸಂವಹನ ತಂತ್ರಜ್ಞಾನಗಳಿಗೆ ಬಳಸುವ ಸಾಮಾನ್ಯೀಕರಿಸಿದ ಪದವಾಗಿದೆ. ಆಗಾಗ್ಗೆ ಬಳಸಲಾಗುವ ಇನ್ನಿತರ ಪದಗಳೆಂದರೆ VoIPಗೆ ಸಮಾನವಾದ ಹಾಗೂ IP ದೂರವಾಣಿ ವ್ಯವಸ್ಥೆ , ಅಂತರ್ಜಾಲ ದೂರವಾಣಿ ವ್ಯವಸ್ಥೆ , ಬ್ರಾಡ್ಬ್ಯಾಂಡ್ (VoBB) ಆಧಾರಿತ ಕರೆ , ಬ್ರಾಡ್ಬ್ಯಾಂಡ್ ದೂರವಾಣಿ ವ್ಯವಸ್ಥೆ , ಮತ್ತು ಬ್ರಾಡ್ಬ್ಯಾಂಡ್ ದೂರವಾಣಿ .
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2009) |
This article needs attention from an expert in law. (November 2008) |
ಅಂತರಜಾಲ ದೂರವಾಣಿ ವ್ಯವಸ್ಥೆಯೆಂದರೆ — ಕರೆ, ಫ್ಯಾಸಿಮಿಲಿ/ಫ್ಯಾಕ್ಸ್, ಮತ್ತು/ಅಥವಾ ಧ್ವನಿ-ಸಂದೇಶ ಅನ್ವಯಗಳಂತಹಾ ಸಂವಹನಾ ಸೇವೆಗಳನ್ನು ಸಾರ್ವಜನಿಕ ಅಂಶವ್ಯವಸ್ಥಿತ ದೂರವಾಣಿ ಜಾಲ (PSTN)ದ ಬದಲಿಗೆ ಅಂತರಜಾಲದ ಮೂಲಕ ರವಾನಿಸುವುದು. ಅಂತರಜಾಲ ದೂರವಾಣಿ ಕರೆಯನ್ನು ಆರಂಭಿಸಲು ಕೈಗೊಳ್ಳಬೇಕಾದ ಮೂಲಭೂತ ಹೆಜ್ಜೆಗಳೆಂದರೆ ಅನಲಾಗ್ ಕರೆ ಸಂಜ್ಞೆಗಳನ್ನು ಅಂತರಜಾಲದ ಮೂಲಕ ಸಂವಹನವಾಗಲು ಅನುವಾಗುವಂತೆ ಅಂಕಿಕ/ಅಂಕೀಯ/ಸಾಂಖ್ಯಿಕ ಸ್ವರೂಪಕ್ಕೆ ಪರಿವರ್ತಿಸಿ, ನಂತರ ಸಂಜ್ಞೆಯನ್ನು ಅಂತರಜಾಲ ಪ್ರೋಟೋಕಾಲ್ (IP) ದತ್ತಾಂಶಗಳಾಗಿ ಸಂಕೋ/ಸಂಕು)ಚಿಸಿ/ಪರಿವರ್ತಿಸಿರಬೇಕು; ಸ್ವೀಕರಿಸುವ ತುದಿಯಲ್ಲಿ ಇದರ ವಿರುದ್ಧ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.[1] VoIP ವ್ಯವಸ್ಥೆಗಳು ಕರೆಗಳನ್ನು ಸ್ಥಾಪಿಸಲು ಹಾಗೂ ಕೊನೆಗೊಳಿಸಲು ಜೊತೆಗೆ ಮಾತುಗಳನ್ನು ಶ್ರವ್ಯ ಸಂಕೇತಕಗಳನ್ನಾಗಿ ಮಾರ್ಪಡಿಸಿ IP ಜಾಲದ ಮೂಲಕ ಸಾಂಖ್ಯಿಕ ಧ್ವನಿಸಂಕೇತವನ್ನು ಧ್ವನಿವಾಹಿನಿಯ ಮೂಲಕ ಪ್ರವಹಿಸಲು ಅನುವಾಗುವಂತೆ ಅವಧಿ ನಿಯಂತ್ರಣ ಪ್ರೋಟೋಕಾಲ್ಗಳನ್ನು ಬಳಸುತ್ತವೆ. ಸಂಕೇತಕಗಳ ಬಳಕೆಯು VoIPಯ ವಿವಿಧ ಸಜ್ಜುಗೊಳಿಕೆಗಳಲ್ಲಿ ವ್ಯತ್ಯಾಸವಾಗಿರುತ್ತದೆ (ಹಾಗೂ ಅನೇಕ ರೀತಿಯ ಸಂಕೇತಕಗಳನ್ನು ಬಳಸಲಾಗುತ್ತದೆ); ಕೆಲ ಸಜ್ಜುಗೊಳಿಕೆಗಳು ನ್ಯಾರೋಬ್ಯಾಂಡ್ನ ಮೇಲೆ ಆಧಾರಿತವಾಗಿದ್ದು ಸಂಕುಚಿತ ಧ್ವನಿಗಳನ್ನು ಬಳಸಿದರೆ ಉಳಿದವು, ಹೆಚ್ಚಿನ ಯಥಾರ್ಥ ಗುಣಮಟ್ಟದ ಸ್ಟೀರಿಯೋ ಸಂಕೇತಕಗಳನ್ನು ಬೆಂಬಲಿಸುತ್ತವೆ.