ಆಸ್ಪಿರಿನ್
From Wikipedia, the free encyclopedia
ಆಸಿಟಿಲ್ಸ್ಯಾಲಿಸಿಲಿಕ್ ಆಮ್ಲ (pronounced /əˌsɛtɪlsælɪˌsɪlɪk ˈæsɪd/ ಸಂಕ್ಷಿಪ್ತ ರೂಪದಲ್ಲಿ ASA ) ಎಂದೂ ಕರೆಲ್ಪಡುವ ಆಸ್ಪಿರಿನ್ (USAN) ಒಂದು ಸ್ಯಾಲಿಸಿಲೇಟ್(=ಸ್ಯಾಲಿಸಿಲಿಕ್ ಆಮ್ಲದಿಂದ ಉತ್ಪನ್ನವಾದುದು) ಔಷಧ. ಸಣ್ಣಪುಟ್ಟ ನೋವು ವೇದನೆಗಳಿಂದ ಮುಕ್ತಿ ಪಡೆಯಲು ನೋವು ಶಾಮಕವನ್ನಾಗಿಯೂ, [[ಜ್ವರ ನಿವಾರಕವನ್ನಾಗಿಯೂ|ಜ್ವರ ನಿವಾರಕವನ್ನಾಗಿಯೂ]] ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಉರಿ ಶಮನದ ಔಷಧವಾಗಿಯೂ ಇದನ್ನು ಬಳಸುವುದುಂಟು. ಆಸ್ಪಿರಿನ್ ತ್ರೋಂಬೊಕ್ಸೇನ್ ಉತ್ಪತ್ತಿಯನ್ನು ನಿರ್ಬಂಧಿಸಿ ಕಿರುಬಿಲ್ಲೆ (=ಪ್ಲೇಟ್ಲೆಟ್=ರಕ್ತ ಗರಣೆ ಕಟ್ಟುವುದರಲ್ಲಿ ಪಾತ್ರವಹಿಸುವುದು) ಪ್ರತಿರೋಧಕ ಪರಿಣಾಮವನ್ನು ಉಂಟುಮಾಡುತ್ತದೆ. ತ್ರೋಂಬೊಕ್ಸೇನ್ ಸಾಮಾನ್ಯ ಸ್ಥಿತಿಯಲ್ಲಿ ರಕ್ತ ನಾಳಗಳೊಳಗಿನ ಭಿತ್ತಿಯು ಹಾನಿಗೊಳಗಾದಾಗ ಅದಕ್ಕೆ ತೇಪೆ ಹಾಕಲು ಕಿರುಬಿಲ್ಲೆ ಅಣುಗಳನ್ನು ಒಟ್ಟಿಗೆ ಸೇರಿಸುವ ಕೆಲಸ ಮಾಡುತ್ತದೆ. ಕಿರುಬಿಲ್ಲೆಗಳ ತೇಪೆಯು ತುಂಬಾ ದೊಡ್ಡದಾಗಬಹುದು ಅಲ್ಲದೆ ಅದು ರಕ್ತದ ಕೆಳ ಹರಿವಿಗೆ ತಡೆಯೊಡ್ಡಬಹುದು. ಇದರ ಪರಿಣಾಮವಾಗಿ ಉಂಟಾಗಬಹುದಾದ ಹೃದಯಾಘಾತ, ಪಾರ್ಶ್ವವಾಯುವಿನ ಹೊಡೆತವನ್ನು ತಡೆಗಟ್ಟಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಗುರಿಯಾಗುವವರನ್ನು ಅದರ ಅಪಾಯದಿಂದ ಪಾರು ಮಾಡಲು ಅಲ್ಪ ಪ್ರಮಾಣದ ಆಸ್ಪಿರಿನ್ಅನ್ನು ದೀರ್ಘಾವಧಿ ಬಳಸಲಾಗುತ್ತದೆ.[1] ಹೃದಯಾಘಾತವಾದ ತಕ್ಷಣ ಅಲ್ಪ ಪ್ರಮಾಣದ ಆಸ್ಪಿರಿನ್ ನೀಡಲಾಗುತ್ತದೆ. ಇದರಿಂದ ಮತ್ತೊಮ್ಮೆ ಆಘಾತವಾಗುವ ಅಥವಾ ಹೃದಯದ ಅಂಗಾಶ ಸಾಯುವ ಅಪಾಯವನ್ನು ತಗ್ಗಿಸ ಬಹುದೆಂಬುದು ದೃಢ ಪಟ್ಟಿದೆ.[2][3] ಜಠರಗರುಳಿನ ಹುಣ್ಣು, ಜಠರ ರಕ್ತಸ್ರಾವ ಮತ್ತು ಕಿವಿಮೊರೆತ ಆಸ್ಪಿರಿನ್ನ ಹೆಚ್ಚಿನ ಪ್ರಮಾಣದ ಬಳಕೆಯಿಂದಾಗುವ ಮುಖ್ಯವೂ, ಅನಪೇಕ್ಷಣೀಯವೂ ಆದ ಅಡ್ಡ ಪರಿಣಾಮಗಳು. ರೇಯೆ ರೋಗ ಲಕ್ಷಣಗಳ ಸಂಯೋಗದ ಅಪಾಯ ಎದುರಾಗಬಹುದೆಂದು ನಿರೀಕ್ಷಿಸಿ ಮಕ್ಕಳಲ್ಲಿ ಮತ್ತು ಹರೆಯದವರಲ್ಲಿ ಆಸ್ಪಿರಿನ್ಅನ್ನು ಫ್ಲು-ರೀತಿಯ ಲಕ್ಷಣಗಳು, ದಡಾರ ಲಕ್ಷಣಗಳು[[ಅಥವಾ ಇತರ ವೈರಾಣುವಿನಿಂದ ಅಡರಿರುವ ಕಾಯಿಲೆಗಳನ್ನು ನಿಯಂತ್ರಿಸಲು ಬಳಸುವುದಿಲ್ಲ.]][4] [[ಸ್ಟಿರೋಯ್ಅನ್ನು ಒಳಗೊಳ್ಳದ (=non-steroidal) ಉರಿ ಪ್ರತಿರೋಧಕ ಔಷಧಗಳು (NSAIDs= non-steroidal anti-inflammatory drugs) ಎಂಬ ವರ್ಗದಲ್ಲಿ ಆವಿಷ್ಕರಿಸಲಾದ ಮೊದಲ ಔಷಧಿ ಆಸ್ಪಿರಿನ್. ಈ ವರ್ಗದಲ್ಲಿ ಎಲ್ಲವೂ ಸಮರೂಪದ ಪರಿಣಾಮಗಳನ್ನು ಹೊಂದಿದ್ದರೂ ಹಾಗೂ ಹೆಚ್ಚಿನವುಗಳು ಅವುಗಳ ಕ್ರಿಯೆಯಿಂದಾಗಿ ಎಂಜೈಮ್ ಸೈಕ್ಲೊಆಕ್ಸಿಜನೇಸ್|ಸ್ಟಿರೋಯ್ಅನ್ನು ಒಳಗೊಳ್ಳದ (=non-steroidal) ಉರಿ ಪ್ರತಿರೋಧಕ ಔಷಧಗಳು[[(NSAIDs= non-steroidal anti-inflammatory drugs) ಎಂಬ ವರ್ಗದಲ್ಲಿ ಆವಿಷ್ಕರಿಸಲಾದ ಮೊದಲ ಔಷಧಿ ಆಸ್ಪಿರಿನ್. ಈ ವರ್ಗದಲ್ಲಿ ಎಲ್ಲವೂ ಸಮರೂಪದ ಪರಿಣಾಮಗಳನ್ನು ಹೊಂದಿದ್ದರೂ ಹಾಗೂ ಹೆಚ್ಚಿನವುಗಳು ಅವುಗಳ ಕ್ರಿಯೆಯಿಂದಾಗಿ ಎಂಜೈಮ್ ಸೈಕ್ಲೊಆಕ್ಸಿಜನೇಸ್ಗೆ ಅಡ್ಡಿಪಡಿಸಿದರೂ ಎಲ್ಲವೂ ಸ್ಯಾಲಿಸಿಲೇಟ್ಗಳಲ್ಲ. ಪ್ರಪಂಚದಲ್ಲಿ ಇಂದು ಆಸ್ಪಿರಿನ್ ಅತೀ ವ್ಯಾಪಕವಾಗಿ ಬಳಸುವ ಔಷಧವಾಗಿದ್ದು, ಪ್ರತೀ ವರ್ಷ ಸುಮಾರು 40,000 ಟನ್ಗಳಷ್ಟು ಉಪಯೋಗಿಸಲ್ಪಡುತ್ತದೆ ಎಂಬುದೊಂದು ಅಂದಾಜು.[5] ಬೇಯರ್ ಒಡೆತನದಿಂದ ಟ್ರೇಡ್ಮಾರ್ಕ್ ಪಡೆದ ರಾಷ್ಟ್ರಗಳಲ್ಲಿ ಆಸ್ಪಿರಿನ್ ನ ಕುಲ ನಾಮ ಆಸಿಟಿಲ್ಸ್ಯಾಲಿಸಿಲಿಕ್ ಆಮ್ಲ (ASA) ಎಂದಿದೆ.[6][7]
Systematic (IUPAC) name | |
---|---|
2-acetoxybenzoic acid | |
Clinical data | |
ಗರ್ಭಧಾರಣೆಯ ವರ್ಗ | C (AU) D (US) |
ಕಾನೂನು ಸ್ಥಿತಿ | Unscheduled (AU) GSL (UK) OTC (US) |
Routes | Most commonly oral, also rectal. Lysine acetylsalicylate may be given IV or IM |
Pharmacokinetic data | |
Bioavailability | Rapidly and completely absorbed |
Protein binding | 99.6% |
ಚಯಾಪಚಯ | Hepatic |
Half-life | 300–650 mg dose: 3.1–3.2 h 1 g dose: 5 h 2 g dose: 9 h |
ವಿಸರ್ಜನೆ | Renal |
Identifiers | |
CAS ಸಂಖ್ಯೆ | 50-78-2 |
ATC ಕೋಡ್ | A01AD05 B01AC06 (WHO), N02BA01 (WHO) |
ಪಬ್ಕೆಮ್ | CID 2244 |
ಡ್ರಗ್ ಬ್ಯಾಂಕ್ | APRD00264 |
ಕೆಮ್ಸ್ಪೈಡರ್ | 2157 |
Synonyms | 2-acetyloxybenzoic acid acetylsalicylate acetylsalicylic acid O-acetylsalicylic acid |
Chemical data | |
ರಾಸಾಯನಿಕ ಸೂತ್ರ | C9H8O4 |
Mol. mass | 180.157 g/mol |
SMILES
| |
Physical data | |
ಸಾಂದ್ರತೆ | 1.40 g/cm³ |
ಕರಗುವ ಬಿಂದು | 135 °C (275 °F) |
ಕುದಿಯುವ ಬಿಂದು | 140 °C (284 °F) (decomposes) |
ನೀರಿನಲ್ಲಿ ಕರಗುವಿಕೆ | 3 mg/mL (20 °C) |
Y (what is this?) (verify) |