ಕಾಲ್ಪನಿಕ ಕಥೆ
From Wikipedia, the free encyclopedia
ಮಕ್ಕಳ ಕಥೆಗಳು (ಫೇರಿ ಟೇಲ್) ಫೇರಿ ಟೇಲ್ ಒಂದು ಇಂಗ್ಲಿಷ್ ಶಬಧ , ಇದು ಒಂದು ಪ್ರಕಾರದ ಸಣ್ಣ ನಿರೂಪಕ ಕಥೆಯಾಗಿದೆ. ಇದು ಪ್ರೆಂಚ್ ನುಡಿಗಟ್ಟು ಕಾಂಟೆ ಡಿ ಫಿ (conte de fee), ಜರ್ಮನ್ ಪದ ಮೆರ್ಕನ್ (Marchen), ಇಟಾಲಿಯನ್ ಫಿಯಾಬ (fiaba), ಪೋಲಿಷ್ ಬಾಸ್ನ್ (basn) ಅಥವಾ ಸ್ವೀಡಿಶ್ ಭಾಷೆಯ ಸಾಗಾ (saga) ಪದಗಳಿಗೆ ಸದೃಶವಾಗಿದೆ. ಹೀಗೆ ಸೂಚಿಸಿದ ಕೆಲವೇ ಕೆಲವು ಕಥೆಗಳು ಮಾತ್ರ ಸ್ಪಷ್ಟವಾಗಿ ಯಕ್ಷಯಕ್ಷಿಣಿಯ ಕಥೆಗಳ ಬಗ್ಗೆ ತಿಳಿಸುತ್ತವೆ. ಈ ಕಥೆಗಳನ್ನು ಉಳಿದ ಪ್ರಕಾರದ ದಂತ ಕಥೆಗಳು,ಸಾಂಪ್ರದಾಯಿಕ (ಇಂಥ ಕಥೆಗಳು ತಿಳಿಸಲಾದ ಅಂಶಗಳಲ್ಲಿ ಅಡಗಿರುವ ಸತ್ಯದಲ್ಲಿ ಸಾಮಾನ್ಯವಾಗಿ ನಂಬಿಕೆ ಒಳಗೊಂಡಿದೆ)[1] ಕಥೆಗಳಿಂದ, ನೀತಿ ಪಾಠ ಹೇಳುವ ಕಥೆಗಳಿಂದ ಮತ್ತು ಪ್ರಾಣಿಗಳ ಕಾಲ್ಪನಿಕ ಕಥೆಗಳಿಂದ ವಿಭಿನ್ನ ಎಂದು ಹೇಳಬಹುದಾಗಿದೆ. ಈ ಕಾಲ್ಪನಿಕ ಕಥೆಗಳು ಸಾಮಾನ್ಯವಾಗಿ ಜನಪದಪಾತ್ರಗಳ ಲಕ್ಷಣಗಳಿಂದ ಕೂಡಿದೆ. ಯಕ್ಷಯಕ್ಷಿಣಿಯರು, ತುಂಟ ಪಿಶಾಚಿಗಳು, ಕಾಲ್ಪನಿಕ ಅತಿಮಾನುಷ ಜೀವಿಗಳು, ಗವಿಯಲ್ಲಿ ವಾಸಿಸುವ ಕುಳ್ಳ ಜೀವಿಗಳು,ದೈತ್ಯರು ಅಥವಾ ಕುಬ್ಜ ಪಿಶಾಚಿಗಳು ಮತ್ತು ಸಾಮಾನ್ಯವಾಗಿಜಾದೂ ಅಥವಾ ಮಾಟಗಾರಿಕೆಗಳು ಮುಂತಾದವು. ಈ ಪ್ರಕಾರದ ಕಥೆಗಳು ಹೆಚ್ಚಾಗಿ ಕಾಲ್ಪನಿಕ ಘಟನೆಗಳ ಸರಮಾಲೆಯನ್ನು ಒಳಗೊಂಡಿರುತ್ತವೆ.
ತಾಂತ್ರಿಕವಾಗಿ ಹೇಳುವುದಾದರೆ, ಫೇರಿ ಟೇಲ್ ಎಂಬ ಪದವನ್ನು "ಫೇರಿ ಟೇಲ್ನ ಮುಕ್ತಾಯ" (ಸುಖಾಂತ್ಯ)[2] ಅಥವಾ "ಫೇರಿ ಟೇಲ್ ಭಾವಪ್ರಧಾನ" (ಎಲ್ಲ ಕಾಲ್ಪನಿಕ ಕಥೆಗಳು ಸುಖಾಂತ್ಯವನ್ನು ಹೊಂದುವುದಿಲ್ಲ). ಆಡು ಭಾಷೆಯಲ್ಲಿ ಹೇಳಬೇಕೆಂದರೆ, ಒಂದು "ಫೇರಿ ಟೇಲ್" ಅಥವಾ "ಕಾಲ್ಪನಿಕ ಕಥೆ "ಯ ಇನ್ನೊಂದು ಅರ್ಥವೆಂದರೆ, ವಾಸ್ತವಕ್ಕೆ ದೂರವಾದ ಕಥೆ ಅಥವಾ ನಂಬಲು ಅಸಾಧ್ಯವಾದ ಕಾಲ್ಪನಿಕತೆಯಿಂದ ಕೂಡಿರುವ ಕಥೆ.
ಕೆಲವು ಸಮಾಜಗಳಲ್ಲಿ ರಾಕ್ಷಸರು ಮತ್ತು ಮಾಟಗಾತಿಯರನ್ನು ನಿಜ ಎಂದು ನಂಬಲಾಗುತ್ತದೆ. ಅಂತಹ ಸ್ಥಳಗಳಲ್ಲಿ ಈ ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆಗಳು ದಂತ ಕಥೆಗಳ ಅಂದರೆ ಪ್ರಸಿದ್ಧ ಕಥೆಗಳಲ್ಲಿ ಸೇರಿಹೊಗಬಹುದು. ಇಲ್ಲಿ ಹೇಳಲಾದ ಕಥೆಯನ್ನು ಹೇಳುವವರು ಮತ್ತು ಕೇಳುವವರು ಇಬ್ಬರೂ ಐತಿಹಾಸಿಕವಾಗಿ ನಿಜವೆಂದು ಗ್ರಹಿಸುತ್ತಾರೆ. ದಂತ ಕಥೆಗಳು ಮತ್ತು ಮಹಾಕಾವ್ಯಗಳಲ್ಲಿ ಧರ್ಮ, ನಿಜವಾಗಿಯೂ ಇರುವಂತಹ ಸ್ಥಳಗಳು ಮತ್ತು ಘಟನೆಗಳ ಬಗ್ಗೆ ಉಲ್ಲೇಖವಿದ್ದು ಅವು ಸತ್ಯಕ್ಕೆ ಸಮೀಪವಿರುತ್ತವೆ. ಆದರೆ,ಕಾಲ್ಪನಿಕ ಕಥೆಗಳಲ್ಲಿ ಧರ್ಮ,ನಿಜವಾದ ಸ್ಥಳಗಳು, ಜನರು ಮತ್ತು ಘಟನೆಗಳ ಬಗ್ಗೆ ತೋರಿಕೆಯ ಉಲ್ಲೇಖವಿರುತ್ತದೆ. ಇಲ್ಲಿ ಎಲ್ಲ ಕಥೆಗಳು ವಾಸ್ತವ ಕಾಲಗಳಲ್ಲಿ ಪ್ರಾರಂಭವಾಗದೆಒಂದಾನೊಂದು ಕಾಲದಲ್ಲಿ ಪ್ರಾರಂಭವಾಗುತ್ತವೆ.[3]
ಫೇರಿ ಟೆಲ್ ಅಥವಾ ಕಾಲ್ಪನಿಕ ಕಥೆಗಳು ಸಾಹಿತ್ಯಕ ರೂಪದಲ್ಲಿ ಮತ್ತು ಮೌಖಿಕ ರೂಪದಲ್ಲಿ ಇರುತ್ತವೆ. ಕೇವಲ ಸಾಹಿತ್ಯಕ ರೂಪದಲ್ಲಿ ಈ ಕಥೆಗಳು ದೊರಕಿರುವುದರಿಂದ, ಕಾಲ್ಪನಿಕ ಕಥೆಗಳ ಇತಿಹಾಸವನ್ನು ಕಂಡು ಹಿಡಿಯುವುದು ಬಹಳ ಕಠಿಣವಾದ ಕೆಲಸವಾಗಿದೆ. ಒಂದು ಪ್ರಕಾರ ಅಥವಾ ವರ್ಗವಾಗಿ ಗುರುತಿಸದೆ ಹೋದರೂ, ಸಾಹಿತ್ಯಕ ರೂಪದಲ್ಲಿ ಸಿಕ್ಕ ಕೃತಿಗಳ ಸಾಕ್ಷ್ಯಾಧಾರದಿಂದ ಕಾಲ್ಪನಿಕ ಕಥೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಸೂಚಿಸುತ್ತವೆ. ಈ ಕಾಲ್ಪನಿಕ ಕಥೆಗಳಿಗೆ "ಫೇರಿ ಟೆಲ್" ಎಂದು ಮೊದಲ ಬಾರಿಗೆ ಹೆಸರು ಕೊಟ್ಟವರು ಮ್ಯಾಡಮ್ ಡಿ'ಆಲ್ನಾಯ್ (Madame d'Aulnoy)ಎಂಬುವರು. ಇಂದು ಕಂಡು ಬರುವ ಅನೇಕ ಕಾಲ್ಪನಿಕ ಕಥೆಗಳು ನೂರಾರು ವರ್ಷ ಹಳೆಯ ಕಥೆಗಳಿಂದ ಹುಟ್ಟಿಕೊಂಡಿದ್ದು, ಆಯಾ ದೇಶಗಳ ಸಂಸ್ಕೃತಿಗಳಿಗೆ ತಕ್ಕಂತೆ ಬೇರೆ ಬೇರೆ ಪ್ರಕಾರದ ಕಥೆಗಳಾಗಿ ರೂಪ ಪಡೆದುಕೊಂಡಿವೆ.[4] ಇಂದಿಗೂ ಸಹ ಕಾಲ್ಪನಿಕ ಕಥೆಗಳು ಮತ್ತು ಅವುಗಳಿಂದ ಸ್ಫೂರ್ತಿ ಪಡೆದ ಕೃತಿಗಳನ್ನು ಬರೆಯಲಾಗುತ್ತಿದೆ.
ಅತಿ ಹಳೆಯದಾದ ಕಾಲ್ಪನಿಕ ಕಥೆಗಳ ಉದ್ದೇಶ ಪ್ರೌಢವಯಸ್ಕರು ಮತ್ತು ಚಿಕ್ಕ ಮಕ್ಕಳು ಇಬ್ಬರನ್ನೂ ಗುರಿಯಾಗಿಟ್ಟುಕೊಳ್ಳುವುದು. ಆದರೆ ಪ್ರೀಸಿಯೂಸಸ್ ಪೂರ್ವದ ಬರವಣಿಗೆಗಳು ಮತ್ತು ಬ್ರದರ್ಸ್ ಗ್ರಿಮ್ ತಮ್ಮ ಕಥಾ ಸಂಗ್ರಹವನ್ನು ಚಿಲ್ಡ್ರೆನ್ಸ್ ಅಂಡ್ ಹೌಸ್ ಹೋಲ್ಡ್ ಟೇಲ್ಸ್ ಎಂದು ಹೆಸರಿಸಿದ ಕಾಲದಿಂದಲೂ ಮಕ್ಕಳ ಜತೆ ಸಂಬಂಧ ಹೊಂದಿದೆ ಹಾಗೂ ಮಕ್ಕಳ ಜತೆ ಕಾಲ್ಪನಿಕ ಕಥೆಗಳ ನಂಟು ಕಾಲಕ್ರಮೇಣ ಇನ್ನೂ ದೃಢವಾಗಿ ಬೆಳೆಯಿತು.
ಜನಪದ ಸಾಹಿತೈಗಳು ಕಾಲ್ಪನಿಕ ಕಥೆಗಳನ್ನ ಅನೇಕ ಪ್ರಕಾರವಾಗಿ ವಿಂಗಡಿಸಿದ್ದಾರೆ. ಈ ವಿಂಗಡಣೆಗಳಲ್ಲಿ ಅತ್ಯಂತ ಪ್ರಮುಖ ಎಂದರೆ, ಆರ್ನೆ-ಥಾಮ್ಪ್ಸನ್ ವರ್ಗೀಕರಣ ಪದ್ಧತಿ ಮತ್ತು ವ್ಲಾಡಿಮಿರ್ ಪ್ರಾಪ್ ರ ಶಬ್ದರೂಪ ರಚನಾಶಾಸ್ತ್ರದ ವಿಶ್ಲೇಷಣೆ. ಇತರ ಜನಪದ ಸಾಹಿತಿಗಳು ಈ ಕಾಲ್ಪನಿಕ ಕಥೆಗಳ ಪ್ರಾಮುಖ್ಯತೆ ಬಗ್ಗೆ ವ್ಯಾಖ್ಯಾನ ನೀಡಿದ್ದರೂ ಇಂಥ ಕಥೆಗಳ ಅರ್ಥ ಹೇಳಲು ಒಂದು ನಿರ್ದಿಷ್ಟವಾದ ಸಿದ್ಧಾಂತಗಳ ಅಥವಾ ವಿಧ್ವಂಶರ ತಂಡ ಸ್ಥಾಪಿಸಲಾಗಿಲ್ಲ.