ಕೈಲಾ ಬ್ಯಾರನ್
From Wikipedia, the free encyclopedia
ಕೈಲಾ ಜೇನ್ ಬ್ಯಾರನ್ರವರು ಜಲಾಂತರ್ಗಾಮಿ ಯುದ್ಧ ಅಧಿಕಾರಿ, ಇಂಜಿನಿಯರ್ ಮತ್ತು ನಾಸಾ(NASA)ದ ಗಗನಯಾತ್ರಿಯಾಗಿದ್ದಾರೆ. ಬ್ಯಾರನ್ರವರು ಜೂನ್ ೨೦೧೭ ರಲ್ಲಿ ನಾಸಾ ಗಗನಯಾತ್ರಿ ಗುಂಪು ೨೨ ರ ಸದಸ್ಯರಾಗಿ ಆಯ್ಕೆಯಾದರು ಮತ್ತು ನಂತರ ೨೦೨೦ ರಲ್ಲಿ ಗಗನಯಾತ್ರಿಯಾಗಿ ಅರ್ಹತೆ ಪಡೆದರು.[1] ನವೆಂಬರ್ ೧೦, ೨೦೨೧ ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆಯಾದ ಎಕ್ಸ್ಪೆಡಿಶನ್ 66/67 ರ ಸಿಬ್ಬಂದಿಯ ಭಾಗವಾಗಿ ಬ್ಯಾರನ್ ತನ್ನ ಮೊದಲ ಬಾಹ್ಯಾಕಾಶ ಯಾನ, ಸ್ಪೇಸ್ಎಕ್ಸ್ ಕ್ರ್ಯೂ-೩ ನಲ್ಲಿ ಭಾಗವಹಿಸಿದರು. ನಾಸಾಗೆ ಸೇರುವ ಮೊದಲು, ಬ್ಯಾರನ್ ಜಲಾಂತರ್ಗಾಮಿ ಯುದ್ಧ ಅಧಿಕಾರಿ ಮತ್ತು ನೌಕಾ ಅಕಾಡೆಮಿಯಲ್ಲಿ ಅಧೀಕ್ಷಕರಿಗೆ ಧ್ವಜ ಸಹಾಯಕರಾಗಿದ್ದರು.