ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್ ರವರು ಜರ್ಮನಿಯ ಜೀವಶಾಸ್ತ್ರಜ್ಞೆ.(ಜನನ- ೨೦ ಅಕ್ಟೋಬರ್ ೧೯೪೨).[5]
ಇವರು ತುಬಿಂಗನ್ ವಿಶ್ವವಿದ್ಯಾನಿಲಯದಿಂದ ೧೯೪೭ ರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು,ಅಲ್ಲಿ ಅವರು ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಿದರು. ಫಿಸಿಯೋಲಜಿ/ಮೆಡಿಸಿನ್ ನಲ್ಲಿ ಭ್ರೂಣದ ಬೆಳವಣಿಗೆಯ ಅನುವಂಶಿಕ ನಿಯಂತ್ರಣದ ಕುರಿತಾದ ಸಂಶೋಧನೆಗಾಗಿ ಅವರು ೧೯೯೫ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.[6]
Quick Facts ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್, ಜನನ ...
ಕ್ರಿಶ್ಚಿಯಾನೆ ನುಸ್ಲೀನ್ ವೊಲ್ಹಾರ್ಡ್
ಜನನ
(1942-10-20) ೨೦ ಅಕ್ಟೋಬರ್ ೧೯೪೨ (ವಯಸ್ಸು೮೧) ಮ್ಯಾಗ್ಡೆಬರ್ಗ್, ಜರ್ಮನಿ
ವಾಸಸ್ಥಳ
ಜರ್ಮನಿ
ರಾಷ್ಟ್ರೀಯತೆ
ಜರ್ಮನ್
ಕಾರ್ಯಕ್ಷೇತ್ರ
ಜೆನೆಟಿಕ್ಸ್
ಭ್ರೂಣಶಾಸ್ತ್ರ
ಸಂಸ್ಥೆಗಳು
ಯುರೋಪಿಯನ್ ಮಾಲಿಕ್ಯುಲರ್ ಬಯೋಲಜಿ ಲ್ಯಾಬರೋಟರಿ
ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಫಾರ್ ಡೆವೆಲಪ್ಮೆಂಟಲ್ ಬಯೋಲಜಿ
ನುಸ್ಲೀನ್ ವೊಲ್ಹಾರ್ಡ್ ರವರು ಮ್ಯಾಗ್ಡೆಬರ್ಗ್ ನಲ್ಲಿ ೨೦ ಅಕ್ಟೋಬರ್ ೧೯೪೨ ರಂದು ಜನಿಸಿದರು. ಅವರ ತಂದೆ ವಾಸ್ತುಶಿಲ್ಪಿಯಾಗಿದ್ದರಿಂದ ಆಕೆ ಕಲಾಕೃತಿಗೆ ಒಡ್ಡಿಕೊಂಡರು, ಹಾಗಾಗಿ ವಿಷಯಗಳನ್ನು ನೋಡುವುದರಲ್ಲಿ ಮತ್ತು ವಿಷಯಗಳನ್ನು ಗುರುತಿಸುವುದರಲ್ಲಿ ತರಬೇತಿ ನೀಡಲಾಯಿತು.[7]
ನುಸ್ಲೀನ್ ವೊಲ್ಹಾರ್ಡ್ ರವರು ತುಬಿಂಗನ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು. ಅವರು ೧೯೭೪ ನಲ್ಲಿ ಪ್ರೋಟೀನ್ - ಡಿಎನ್ಎ ನಲ್ಲಿನ ಪರಸ್ಪರ ಕ್ರಿಯೆಗಳ ಸಂಶೋಧನಕ್ಕಾಗಿ ಪಿಎಚ್ಡಿ ಮಾಡಿದರು.[8]
ಜರ್ಮನ್ ರಿಸರ್ಚ್ ಫೌಂಡೇಶನ್ ನ ಗಾಟ್ಫ್ರೈಡ್ ವಿಲ್ಹೆಲ್ಮ್ ಲಿಬ್ನೆಜ್ ಪ್ರಶಸ್ತಿ - ೧೯೮೬.
ಗೈಸೆನ್ ವಿಶ್ವವಿದ್ಯಾಲಯದ ಫ್ರಾಂಜ್ ವೋಗ್ಟ್ ಪ್ರಶಸ್ತಿ - ೧೯೮೬.
ಬೇಸಿಕ್ ಮೆಡಿಕಲ್ ರಿಸರ್ಚ್ ಗಾಗಿ ಆಲ್ಬರ್ಟ್ ಲಸ್ಕರ್ ಪ್ರಶಸ್ತಿ - ೧೯೯೧.
ಉಟ್ರೆಕ್ಟ್ ವಿಶ್ವವಿದ್ಯಾನಿಲಯದಿಂದ ಗೌರವಾನ್ವಿತ ಡಾಕ್ಟರೇಟ್ ಪದವಿ - ೧೯೯೧.
ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ - ೧೯೯೧.
ಆಲ್ಫ್ರೆಡ್ ಪಿ. ಸ್ಲೋನ್ ಜೂನಿಯರ್ ಪ್ರಶಸ್ತಿ - ೧೯೯೨.
ಮೆಡಿಸಿನ್ ಗಾಗಿ ಲೂಯಿಸ್ ಜೀನ್ಟೆಟ್ ಪ್ರಶಸ್ತಿ - ೧೯೯೨.
ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಲೂಯಿಸಾ ಗ್ರಾಸ್ ಹೊರ್ವಿಟ್ಜ್ ಪ್ರಶಸ್ತಿ - ೧೯೯೨.
ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಜಿಗಾಗಿ ಜರ್ಮನ್ ಸೊಸೈಟಿಯ ವೊಟ್ಟೊ ವಾರ್ಬರ್ಗ್ ಪದಕ - ೧೯೯೨.
ಫ್ರೈಬರ್ಗ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ - ೧೯೯೩.
ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ - ೧೯೯೩.
ಯುರೋಪಿಯನ್ ಬಯೋಕೆಮಿಕಲ್ ಸೊಸೈಟೀಸ್ ವತಿಯಿಂದ ಸರ್ ಹ್ಯಾನ್ಸ್ ಕ್ರೆಬ್ಸ್ ಮೆಡಲ್ - ೧೯೯೩.
ಅರ್ನ್ಸ್ಟ್ ಶೆರಿಂಗ್ ಪ್ರಶಸ್ತಿ - ೧೯೯೩.
ಮೆರಿಟ್ ಕ್ರಾಸ್ ಆಫ್ ದಿ ಫೆಡರಲ್ ರಿಪ್ಲಬಿಕ್ ಆಫ್ ಜರ್ಮನಿ - ೧೯೯೪.