ಗಜ್ಜರಿ
From Wikipedia, the free encyclopedia
[ಕೊಂಡಿಗಳನ್ನು ಸರಿಪಡಿಸಿ]
ಗಜ್ಜರಿಯು (ಕ್ಯಾರಟ್) (ಡಾಕಸ್ ಕ್ಯಾರೋಟಾ ಉಪಜಾತಿ. ಸಟೈವಸ್) ಸಾಮಾನ್ಯವಾಗಿ ಕಿತ್ತಳೆ, ನೇರಳೆ, ಕೆಂಪು, ಬಿಳಿ, ಅಥವಾ ಹಳದಿ ಬಣ್ಣವುಳ್ಳ, ತಾಜಾ ಇದ್ದಾಗ ಗರಿಗರಿ ರಚನೆ ಹೊಂದಿರುವ ಒಂದು ಗಡ್ಡೆ ತರಕಾರಿ. ಗಜ್ಜರಿಯ ತಿನ್ನಲರ್ಹವಾದ ಭಾಗವು ಒಂದು ತಾಯಿಬೇರಾಗಿದೆ. ಅದು ಯೂರಪ್ ಮತ್ತು ನೈಋತ್ಯ ಏಷ್ಯಾಕ್ಕೆ ಸ್ಥಳೀಯವಾದ ಕಾಡು ಗಜ್ಜರಿ ಡಾಕಸ್ ಕ್ಯಾರೋಟಾದ ಒಂದು ದೇಶೀಯ ಪ್ರಕಾರ. ಪರ್ಷಿಯಾದಲ್ಲಿ ಮೂಲತಃ ಇದರ ಕೃಷಿಯನ್ನು ಅದರ ಎಲೆಗಳು ಮತ್ತು ಬೀಜಗಳಿಗಾಗಿ ಮಾಡುತ್ತಿದ್ದರು. ಸಾಮಾನ್ಯವಾಗಿ ಇದರ ಗೆಡ್ಡೆಗಳು ತರಕಾರಿಯಾಗಿ ಬಳಕೆಯಾಗುತ್ತಿದ್ದರೂ ಇದರ ಹಸಿರೆಲೆಗಳನ್ನೂ ಕೆಲವೊಮ್ಮೆ ಬಳಸುತ್ತಾರೆ.
ಅಪಿಯಾಸಿಯೆ (Apiaceae) ಕುಟುಂಬದಲ್ಲಿ ಕ್ಯಾರೆಟ್ ಒಂದು ದ್ವೈವಾರ್ಷಿಕ ಸಸ್ಯ. ಇದು ಗೆಡ್ಡೆಗಳಾಗಿ ಬೆಳೆಯುವ ಮೊದಲು ನೆಲಕ್ಕೆ ಹತ್ತಿರದಲ್ಲಿಯೇ ವೃತ್ತಾಕಾರದ ಎಲೆಗಳನ್ನು ಹೋಲುವ ರಚನೆಗಳಾಗಿ ಬೆಳೆಯುತ್ತದೆ. ಬೇಗನೆ ಬೆಳೆಯುವ ತಳಿಗಳು ಬೀಜವನ್ನು ಬಿತ್ತಿದ ೯೦ ದಿನಗಳಲ್ಲಿ ಕಟಾವಿಗೆ ಬಂದರೆ ನಿಧಾನವಾಗಿ ಬೆಳೆಯುವ ತಳಿಗಳು ೧೨೦ ದಿನಗಳನ್ನು ತೆಗೆದುಕೊಳ್ಳುತ್ತವೆ. ಇದರ ಗಡ್ಡೆಗಳು ಅತ್ಯುತ್ತಮವಾದ ಆಲ್ಫಾ ಮತ್ತು ಬೀಟಾ ಕ್ಯಾರೋಟೀನ್ ಗಳನ್ನು ಹೊಂದಿರುತ್ತವೆ. ಇವು ವಿಟಮಿನ್ ಕೆಮತ್ತು ವಿಟಮಿನ್ ಬಿ೬ ಗಳ ಉತ್ತಮವಾದ ಮೂಲವಾಗಿವೆ.