ದೃಗ್ವಿಜ್ಞಾನ
From Wikipedia, the free encyclopedia
ದೃಗ್ವಿಜ್ಞಾನ ಎನ್ನುವುದು ಬೆಳಕಿನ ವರ್ತನೆ ಮತ್ತು ಲಕ್ಷಣಗಳನ್ನು, ವಸ್ತುವಿನ ಜೊತೆಗೆ ಅದರ ಸಂವಹನ ಮತ್ತು ಅದನ್ನು ಬಳಸುವ ಅಥವಾ ಶೋಧಿಸುವ ಉಪಕರಣಗಳ ರಚನೆಯನ್ನು ಅಧ್ಯಯಿಸುವ ಭೌತಶಾಸ್ತ್ರದ ಒಂದು ಶಾಖೆ.[1] ದೃಗ್ವಿಜ್ಞಾನವು ಸಾಮಾನ್ಯವಾಗಿ ದೃಷ್ಟಿಗೋಚರವಾದ, ಅತಿನೇರಳೆ, ಮತ್ತು ಅತಿಗೆಂಪು ಬೆಳಕಿನ ಬಗೆಗೆ ವಿವರಿಸುತ್ತದೆ. ಬೆಳಕು ವಿದ್ಯುದಯಸ್ಕಾಂತ ತರಂಗ ಆಗಿರುವುದರಿಂದ, ವಿದ್ಯುದಯಸ್ಕಾಂತ ವಿಕಿರಣದ ಇತರ ರೂಪಗಳು ಉದಾಹರಣೆಗೆ ಕ್ಷ-ಕಿರಣಗಳು, ಸೂಕ್ಷ್ಮತರಂಗಗಳು, ಮತ್ತು ರೇಡಿಯೋ ತರಂಗಗಳು ಇದೇ ರೀತಿಯ ಲಕ್ಷಣಗಳನ್ನು ತೋರುತ್ತದೆ.[1]
This article may be too long to read and navigate comfortably. (September 2009) |
ದೃಗ್ವಿಜ್ಞಾನದ ಅನೇಕ ಸ್ವರೂಪಗಳು ಬೆಳಕಿನ ಶಾಸ್ತ್ರೀಯ ವಿದ್ಯುದಯಸ್ಕಾಂತ ವಿವರಣೆಯನ್ನು ಬಳಸುವುದರಿಂದಲೇ ಆಗಿವೆ ಎನ್ನಬಹುದು. ಏನಾದರೂ, ಬೆಳಕಿನ ವಿದ್ಯುದಯಸ್ಕಾಂತ ವಿವರಣೆಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವುದು ಅನೇಕ ವೇಳೆ ಕಷ್ಟಕರ. ಪ್ರಾಯೋಗಿಕ ದೃಗ್ವಿಜ್ಞಾನವನ್ನು ಸಾಮಾನ್ಯವಾಗಿ ಸರಳೀಕರಿಸಿದ ಮಾದರಿಗಳೊಂದಿಗೆ ಸಾಧಿಸಲಾಗುತ್ತದೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾದ, ರೇಖಾಗಣಿತದ ದೃಗ್ವಿಜ್ಞಾನವು ಬೆಳಕನ್ನು ಸರಳರೇಖೆಯಲ್ಲಿ ಚಲಿಸುವ ಮತ್ತು ಮೇಲ್ಮೈಗಳ ಮೂಲಕ ಹಾದುಹೋದಾಗ ಅಥವಾ ಅವುಗಳಿಂದ ಪ್ರತಿಫಲನಗೊಂಡಾಗ ಬಾಗುವ ಒಂದು ಕಿರಣಗಳ ಸಮೂಹ ಎಂದು. ಭೌತಿಕ ದೃಗ್ವಿಜ್ಞಾನವು ಹೆಚ್ಚು ಸಮಗ್ರವಾದ ಬೆಳಕಿನ ಮಾದರಿ. ಇದು ರೇಖಾಗಣಿತದ ದೃಗ್ವಿಜ್ಞಾನದಲ್ಲಿ ಕಂಡುಬರದ ತರಂಗ ಪರಿಣಾಮಗಳಾದ ಪಥಪಲ್ಲಟ ಮತ್ತು ಅಡ್ಡಬರುವಿಕೆಗಳನ್ನು ಒಳಗೊಂಡಿದೆ. ಐತಿಹಾಸಿಕವಾಗಿ, ಕಿರಣ-ಆಧಾರಿತ ಬೆಳಕಿನ ಮಾದರಿಯನ್ನು ಮೊದಲು ಅಭಿವೃದ್ಧಿಪಡಿಸಲಾಯಿತು, ತದನಂತರ ತರಂಗ-ಆಧಾರಿತ ಬೆಳಕಿನ ಮಾದರಿ. 19ನೇ ಶತಮಾನದಲ್ಲಾದ ವಿದ್ಯುದಯಸ್ಕಾಂತ ತತ್ತ್ವದ ಬೆಳವಣಿಗೆಯಿಂದ ಬೆಳಕಿನ ತರಂಗಗಳು ನಿಜದಲ್ಲಿ ವಿದ್ಯುದಯಸ್ಕಾಂತ ವಿಕಿರಣವೇ ಆಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಯಿತು.ತರಂಗದಂತಹ ಮತ್ತು ಅಣುವಿನಂತಹ ಲಕ್ಷಣಗಳನ್ನು ಬೆಳಕು ಹೊಂದಿದೆ ಎಂಬ ಸತ್ಯದ ಮೇಲೆ ಕೆಲವು ಸ್ವರೂಪಗಳು ಅವಲಂಬಿತವಾಗಿವೆ. ಈ ಪರಿಣಾಮಗಳನ್ನು ವಿವರಿಸಲು ಪರಿಮಾಣ ಯಂತ್ರಶಾಸ್ತ್ರ ಬೇಕಾಗುತ್ತದೆ. ಬೆಳಕಿನ ಅಣುವಿನಂತಹ ಲಕ್ಷಣಗಳನ್ನು ಪರಿಗಣಿಸುವಾಗ, ಬೆಳಕನ್ನು "ಫೋಟಾನ್ಗಳು" ಎನ್ನುವ ಅಣುಗಳ ಸಮೂಹ ಎಂದು ಪರಿಭಾವಿಸಲಾಗುತ್ತದೆ. ಪರಿಮಾಣ ದೃಗ್ವಿಜ್ಞಾನವು ಆಪ್ಟಿಕಲ್ ವ್ಯವಸ್ಥೆಗಳಲ್ಲಿ ಪರಿಮಾಣ ಯಂತ್ರಶಾಸ್ತ್ರಗಳ ಉಪಯೋಗಗಳಿಗೆ ಸಂಬಂಧಿಸಿದುದಾಗಿದೆ.ಆಪ್ಟಿಕಲ್ ವಿಜ್ಞಾನವು ಖಗೋಳಶಾಸ್ತ್ರ, ವಿವಿಧ ಇಂಜಿನಿಯರಿಂಗ್ ಕ್ಷೇತ್ರಗಳು, ಛಾಯಾಗ್ರಹಣ, ಮತ್ತು ವೈದ್ಯಕೀಯ (ವಿಶೇಷವಾಗಿ ನೇತ್ರವಿಜ್ಞಾನ ಮತ್ತು ಆಪ್ಟೋಮೆಟ್ರಿ) ಕ್ಷೇತ್ರಗಳನ್ನು ಒಳಗೊಂಡಂತೆ ಅನೇಕ ಸಂಬಂಧಿತ ಶಿಸ್ತುಗಳಿಗೆ ಪ್ರಸ್ತುತವೆನಿಸುತ್ತದೆ ಮತ್ತು ಆ ಕ್ಷೇತ್ರಗಳಲ್ಲಿ ಇದರ ಅಧ್ಯಯನ ನಡೆಸಲಾಗುತ್ತದೆ. ಕನ್ನಡಿಗಳು, ಮಸೂರಗಳು, ದೂರದರ್ಶಕಗಳು, ಸೂಕ್ಷ್ಮದರ್ಶಕಗಳು, ಲೇಸರ್ಗಳು, ಮತ್ತು ಫೈಬರ್ ಆಪ್ಟಿಕ್ಸ್ ಒಳಗೊಂಡಂತೆ ವೈವಿಧ್ಯಮಯ ತಂತ್ರಜ್ಞಾನಗಳಲ್ಲಿ ಮತ್ತು ದಿನಬಳಕೆಯ ವಸ್ತುಗಳಲ್ಲಿ ದೃಗ್ವಿಜ್ಞಾನದ ಉಪಯೋಗಗಳನ್ನು ಕಾಣಬಹುದು.