ಫ್ರಾಂಕ್ ಲಾಯ್ಡ್ ರೈಟ್
From Wikipedia, the free encyclopedia
ಫ್ರಾಂಕ್ ಲಾಯ್ಡ್ ರೈಟ್ (ಜನ್ಮನಾಮ: ಫ್ರಾಂಕ್ ಲಿಂಕನ್ ರೈಟ್ , ಜೂನ್ 8, 1867 – ಏಪ್ರಿಲ್ 9, 1959) ಅಮೆರಿಕಾದ ಓರ್ವ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕಾರ, ಬರಹಗಾರ ಮತ್ತು ಶಿಕ್ಷಣತಜ್ಞನಾಗಿದ್ದ. 1,000ಕ್ಕೂ ಹೆಚ್ಚಿನ ಯೋಜನೆಗಳನ್ನು ಇವನು ವಿನ್ಯಾಸಗೊಳಿಸಿದ್ದು, ಅವುಗಳ ಪೈಕಿ 500ಕ್ಕೂ ಹೆಚ್ಚಿನ ಯೋಜನೆಗಳು ಸಂಪೂರ್ಣಗೊಂಡ ಕೆಲಸಗಳಲ್ಲಿ ಹೊರಹೊಮ್ಮಿದವು.[1] ರೈಟ್ನಿಂದ ಪ್ರವರ್ತಿಸಲ್ಪಟ್ಟ ಸುಸಂಘಟಿತ ವಾಸ್ತುಶೈಲಿಯು (ಫಾಲಿಂಗ್ವಾಟರ್ನ ನಿದರ್ಶನದ ಮೂಲಕ ಇದು ನಿರೂಪಿಸಲ್ಪಟ್ಟಿದೆ), ಪ್ರೈರೀ ಪಂಥದ ವಾಸ್ತುಶೈಲಿಯ ಆಂದೋಲನದ (ರೋಬೀ ಹೌಸ್, ವೆಸ್ಕಾಟ್ ಹೌಸ್, ಮತ್ತು ಡಾರ್ವಿನ್ D. ಮಾರ್ಟಿನ್ ಹೌಸ್ ಇವೇ ಮೊದಲಾದ ನಿದರ್ಶನಗಳ ಇದು ಮೂಲಕ ನಿರೂಪಿಸಲ್ಪಟ್ಟಿದೆ) ಒಂದು ಅಗ್ರಗಣ್ಯನಾಗಿತ್ತು, ಮತ್ತು ಉಸೋನಿಯಾ ಶೈಲಿಯ ಮನೆಯ ಪರಿಕಲ್ಪನೆಯನ್ನು (ರೋಸೆನ್ಬೌಮ್ ಹೌಸ್ ನಿದರ್ಶನದ ಮೂಲಕ ಇದು ನಿರೂಪಿಸಲ್ಪಟ್ಟಿದೆ) ಇದು ಅಭಿವೃದ್ಧಿಪಡಿಸಿತು. ಅನೇಕ ವಿಭಿನ್ನ ಬಗೆಯ ಕಟ್ಟಡಗಳ ಮೂಲ ಮತ್ತು ಪರಿವರ್ತನಾಶೀಲ ಉದಾಹರಣೆಗಳನ್ನು ಅವನ ಕೆಲಸವು ಒಳಗೊಂಡಿದ್ದು, ಕಚೇರಿಗಳು, ಚರ್ಚುಗಳು, ಶಾಲೆಗಳು, ಗಗನಚುಂಬಿಗಳು, ಹೊಟೇಲುಗಳು, ಮತ್ತು ವಸ್ತುಸಂಗ್ರಹಾಲಯಗಳು ಅದರಲ್ಲಿ ಸೇರಿವೆ. ಪೀಠೋಪಕರಣಗಳು ಮತ್ತು ರಂಗುಹಾಕಿದ ಗಾಜಿನಂಥ, ತನ್ನ ಕಟ್ಟಡಗಳ ಅನೇಕ ಒಳಾಂಗಣ ಅಂಶಗಳನ್ನೂ ಸಹ ರೈಟ್ ಅನೇಕಬಾರಿ ವಿನ್ಯಾಸಗೊಳಿಸಿದ. 20 ಪುಸ್ತಕಗಳು ಮತ್ತು ಅನೇಕ ಲೇಖನಗಳನ್ನು ರೈಟ್ ಬರೆದಿದ್ದೇ ಅಲ್ಲದೇ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಯುರೋಪ್ನಲ್ಲಿ ಅವನೊಬ್ಬ ಜನಪ್ರಿಯ ಉಪನ್ಯಾಸಕನಾಗಿದ್ದ. ಅವನ ವರ್ಣರಂಜಿತ ವೈಯಕ್ತಿಕ ಜೀವನವು ಅನೇಕವೇಳೆ ಸುದ್ಧಿಗೆ ಗ್ರಾಸವನ್ನೊದಗಿಸಿತು; ಅದರಲ್ಲೂ, ಅವನ ಟ್ಯಾಲೀಸಿನ್ ಸ್ಟುಡಿಯೊದಲ್ಲಿ 1914ರಲ್ಲಿ ಸಂಭವಿಸಿದ ಬೆಂಕಿ ದುರಂತ ಹಾಗೂ ಕೊಲೆಗಳು ಈ ಪೈಕಿ ಅತ್ಯಂತ ಗಮನಾರ್ಹವಾಗಿದ್ದವು. ತನ್ನ ಜೀವಿತಾವಧಿಯಲ್ಲಾಗಲೇ ಸುಪರಿಚಿತನಾಗಿದ್ದ ರೈಟ್, 1991ರಲ್ಲಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಸಂಸ್ಥೆಯಿಂದ "ಅಮೆರಿಕಾದ ಮಹೋನ್ನತ ಸಾರ್ವಕಾಲಿಕ ವಾಸ್ತುಶಿಲ್ಪಿ" ಎಂದು ಗುರುತಿಸಲ್ಪಟ್ಟ.[1]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |