ಬಫಲೋ, ನ್ಯೂಯಾರ್ಕ್
From Wikipedia, the free encyclopedia
ನ್ಯೂಯಾರ್ಕ್ ರಾಜ್ಯದಲ್ಲಿ, ನ್ಯೂಯಾರ್ಕ್ ನಗರದ ನಂತರ, ಬಫಲೋ (pronounced /ˈbʌfəloʊ/) ಎರಡನೇ ಅತಿ ಹೆಚ್ಚು ಜನಭರಿತ ನಗರ ವಾಗಿದೆ.[1] ಪಶ್ಚಿಮ ನ್ಯೂಯಾರ್ಕ್ನ ಎರಿ ಸರೋವರದ ಪೂರ್ವದ ದಡದ ಮೇಲೆ ಮತ್ತು ನಯಾಗರಾ ನದಿಯ ಮೇಲುಭಾಗದಲ್ಲಿ ಈ ನಗರವಿದೆ. ಫೋರ್ಟ್ ಎರಿ, ಒಂಟಾರಿಯೋದ ಇನ್ನೊಂದು ಕಡೆ ಇರುವ ಬಫಲೋ , ಎರಿ ಕೌಂಟಿ[5] ಯ ಆಡಳಿತಾತ್ಮಕ ಕಚೇರಿ ಮತ್ತು ಬಫಲೋ-ನಯಾಗರಾ ಫಾಲ್ಸ್ ಮೆಟ್ರೋಪಾಲಿಟನ್ ಪ್ರದೇಶದ ಪ್ರಧಾನ ನಗರವೂ ಹೌದು. (ಇದು ಪಶ್ಚಿಮ ನ್ಯೂಯಾರ್ಕ್ನ ಅತಿದೊಡ್ಡ ನಗರ ಮತ್ತು ಅತಿ ದೊಡ್ಡ ಅಪ್ಸ್ಟೇಟ್ ನ್ಯೂಯಾರ್ಕ್ ) ಕೂಡ ಹೌದು. ಡೌನ್ಟೌನ್ ಬಫಲೋ ಅಂದರೆ ಬಫಲೋನಗರದ ಕೇಂದ್ರಭಾಗವು ನಯಾಗರಾ ಫಾಲ್ಸ್ನಿಂದ ದಕ್ಷಿಣಕ್ಕೆ 17 ಮೈಲುಗಳ (27 ಕಿ.ಮೀ) ದೂರದಲ್ಲಿದೆ ಮತ್ತು ಟೊರಾಂಟೋ, ಒಂಟಾರಿಯೋ (ಕೆನಡಾದ ಅತಿದೊಡ್ಡ ನಗರ)ದ ಆಗ್ನೇಯಕ್ಕೆ 59 ಮೈಲುಗಳ (95 ಕಿ.ಮೀ.)ದೂರದಲ್ಲಿದೆ. ಜೊತೆಗೆ ಈ ನಗರವು ತ್ವರಿತಗತಿಯಲ್ಲಿ ಬೆಳೆಯುತ್ತಿರುವ, 8 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದಕ್ಷಿಣ ಒಂಟಾರಿಯೋದ ಗೋಲ್ಡನ್ ಹಾರ್ಸ್ಶೂ ಪ್ರದೇಶದಲ್ಲಿದೆ. ಬಫಲೋ ನಗರದಲ್ಲಿಯೇ 270,919 (ಜುಲೈ 1, 2009ರ ಅಂದಾಜು) ಜನಸಂಖ್ಯೆ ಇದೆ,[1] ಮತ್ತು ಬಫಲೋ–ನಯಾಗರಾ–ಕ್ಯಾಟರಾಗಸ್ ಕಂಬೈನ್ಡ್ ಸ್ಟ್ಯಾಟಿಸ್ಟಿಕಲ್ ಪ್ರದೇಶದಲ್ಲಿ ಸುಮಾರು 1,203,997 ಜನ ನಿವಾಸಿಗಳು ಇದ್ದಾರೆ. ಪಕ್ಕದ ಕೆನಡಾದಲ್ಲಿಯೇ ಇರುವ ನಯಾಗರಾದ ಪ್ರಾದೇಶಿಕ ಮುನ್ಸಿಪಾಲಿಟಿ ಯನ್ನು ಸೇರಿಸಿದರೆ, ಜನಸಂಖ್ಯೆ ಬೃಹತ್ ಬಫಲೋ-ನಯಾಗರಾ ಪ್ರದೇಶದ ಜನಸಂಖ್ಯೆ 1,631,418 ಆಗುತ್ತದೆ.
City of Buffalo | |
---|---|
City | |
Nickname(s): The City of Good Neighbors, The City of Dreams, The Queen City, The Nickel City, Queen City of the Lakes, City of Light | |
Country | United States |
State | New York |
County | Erie |
First Settled | 1789 |
Founded | 1801 |
Incorporated (City) | 1832 |
Government | |
• Mayor | Byron Brown (D) |
• Common Council | Members' List
|
Area | |
• City | ೫೨.೫ sq mi (೧೩೬.೦ km2) |
• Land | ೪೦.೬ sq mi (೧೦೫.೨ km2) |
• Water | ೧೧.೯ sq mi (೩೦.೮ km2) |
Elevation | ೬೦೦ ft (೧೮೩ m) |
Population (July 1, 2009) | |
• City | ೨,೭೦,೨೪೦ (೭೦th in U.S.) |
• Density | ೭,೦೭೫.೦/sq mi (೨,೭೮೪.೨/km2) |
• Urban | ೯,೭೬,೭೦೩ (೩೮th in U.S.) |
• Metro | ೧೧,೨೪,೩೦೯ (೫೦th in U.S.) |
• CSA | ೧೨,೦೩,೯೯೭ (೩೯th in U.S.) |
[1][2] | |
Demonym | Buffalonian |
Time zone | UTC−5 (EST) |
• Summer (DST) | UTC−4 (EDT) |
Area code | 716 |
FIPS code | 36-11000 |
GNIS feature ID | 0973345 |
Website | www.city-buffalo.com |
[3][4] |
ಬಫಲೋ ಕ್ರೀಕ್[3] ಎಂದು ಕರೆಯಲಾಗುವ ಒಂದು ಸಣ್ಣ ವ್ಯಾಪಾರಿ ಸಮುದಾಯವಾಗಿ 1789ರ ಸುಮಾರಿಗೆ ಆರಂಭಗೊಂಡ ಬಫಲೋ ಮುಂದೆ 1825ರಲ್ಲಿ ಎರಿ ಕಾಲುವೆ ಶುರುವಾದೊಡನೆ, ನಗರದ ಪಶ್ಚಿಮದ ಕೊನೆದಾಣ(ಟರ್ಮಿನಸ್) ಆಗಿ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದಿತು. 1900ರ ಸುಮಾರಿಗೆ, ಬಫಲೋ ದೇಶದಲ್ಲಿ 8ನೇ ದೊಡ್ಡ ನಗರವಾಗಿತ್ತು,[6] ಮತ್ತು ಪ್ರಮುಖ ರೈಲ್ವೆಜಾಲವಾಗಿ[7] ಬೆಳೆಯಿತು. ಜೊತೆಗೆ ದೇಶದಲ್ಲಿ ಅತಿದೊಡ್ಡ ಧಾನ್ಯ- ಮಿಲ್ಗಳ ಕೇಂದ್ರವಾಗಿ ಬೆಳೆಯಿತು.[8] 20ನೇ ಶತಮಾನದ ನಂತರದಲ್ಲಿ ಅದೃಷ್ಟ ತಿರುವುಮುರುವಾಯಿತು :ಗ್ರೇಟ್ ಲೇಕ್ಸ್ ಹಡಗುಸಾಗಣೆಯು ಮಾರ್ಗವನ್ನು ಸೇಂಟ್ ಲಾರೆನ್ಸ್ ಸೀವೇಯ ಮೂಲಕ ಪುನಾರಚಿಸಲಾಯಿತು ಮತ್ತು ಸ್ಟೀಲ್ ಮಿಲ್ಗಳು ಹಾಗೂ ಇನ್ನಿತರ ಭಾರ ಉದ್ಯಮಗಳನ್ನು ಚೀನಾ ಮತ್ತಿತರ ಕಡೆ ಸ್ಥಳಾಂತರಿಸಲಾಯಿತು.[9] 1970ರಲ್ಲಿ ಅಮ್ಟ್ರಾಕ್ನ ಆರಂಭದೊಡನೆ, ಬಫಲೋ ಕೇಂದ್ರ ಟರ್ಮಿನಸ್ ಅನ್ನು ಕೂಡ ಕೈಬಿಡಲಾಯಿತು. ರೈಲುಗಳನ್ನು ಹತ್ತಿರದ ಡೆಪ್ಯು, ನ್ಯೂಯಾರ್ಕ್ , (ಬಫಲೋ-ಡೆಪ್ಯು) ಮತ್ತು ಎಕ್ಸ್ಚೇಂಜ್ ಸ್ಟ್ರೀಟ್ ಸ್ಟೇಶನ್ ಮಾರ್ಗಗಳ ಮೂಲಕ ಬಿಡಲಾರಂಭಿಸಿದರು. 1990ರ ಸುಮಾರಿಗೆ ನಗರದಲ್ಲಿ ಜನಸಂಖ್ಯೆಯು 1900ರಲ್ಲಿ ಇದ್ದಿದ್ದ ಪ್ರಮಾಣಕ್ಕೆ ಇಳಿಯಿತು. ನಗರವು ಸಂಯುಕ್ತ ಸಂಸ್ಥಾನದ 50 ಟಾಪ್ ಮೆಟ್ರೋಪಾಲಿಟನ್ ಪ್ರದೇಶಗಳಿಗೆ[10] ಹೋಲಿಸಿದರೆ ತುಂಬ ಚಿಕ್ಕ ಭೂಭಾಗವನ್ನು40.6 sq mi (105 km2) ಹೊಂದಿತ್ತು.
ಇಂದು, ಈ ಪ್ರದೇಶದ ಅತ್ಯಂತ ದೊಡ್ಡ ಆರ್ಥಿಕ ವಲಯಗಳು ಎಂದರೆ ಆರೋಗ್ಯ ಆರೈಕೆ ಮತ್ತು ಶಿಕ್ಷಣವಾಗಿದ್ದು,[11] ದೇಶದಲ್ಲಿ ಮತ್ತು ವಿಶ್ವದಲ್ಲಿ ಆರ್ಥಿಕ ಹಿಂಜರಿತವಿದ್ದರೂ ಇಲ್ಲಿ ಈ ಎರಡೂ ವಲಯಗಳು ಬೆಳವಣಿಗೆಯಾಗುತ್ತಲೇ ಇವೆ.[12] ಈ ಬೆಳವಣಿಗೆಯನ್ನು ಭಾಗಶಃ, ಬಫಲೋ ನಯಾಗರಾ ಮೆಡಿಕಲ್ ಕ್ಯಾಂಪಸ್ನ [13] ಮತ್ತು ಬಫಲೋ ವಿಶ್ವವಿದ್ಯಾಲಯದ [14] ಪ್ರಮುಖ ವಿಸ್ತರಣೆಯಿಂದ ಉಳಿಸಿಕೊಳ್ಳಲಾಗಿದೆ. ನಗರದ ಆರ್ಥಿಕತೆಯ ರಿಟೈಲ್ ವಲಯವು ಸದೃಢವಾಗಿದೆ, ಕೆನಡಾದ ಅಂಗಡಿಕಾರರು ದುರ್ಬಲ ಅಮೆರಿಕನ್ ಡಾಲರ್ನ ಲಾಭ ಪಡೆದುಕೊಂಡು, ಇಲ್ಲಿ ಬಂದು ಖರೀದಿ ಮಾಡುವುದರಿಂದ ಹೆಚ್ಚುವರಿ ಆದಾಯ ಬರುತ್ತದೆ.[15] ಬಫಲೋ ನಗರದ ನಿರುದ್ಯೋಗ ದರ ಶೇ. 7.7[16] ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದ್ದು, ಇದು ನ್ಯೂಯಾರ್ಕ್ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ.[17] 2010ರಲ್ಲಿ ಫೋರ್ಬ್ಸ್ ನಿಯತಕಾಲಿಕವು ಬಫಲೋ ನಗರವನ್ನು ಕುಟುಂಬ ಪಾಲನೆಗೆ 10ನೇ ಅತ್ಯುತ್ತಮ ಸ್ಥಳ ಎಂದು ಗುರುತಿಸಿದೆ.[18]