ಬೆಥ್ಲೆಹೆಮ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Bethlehem | |
---|---|
Other transcription(s) | |
• Arabic | بيت لحم |
• Also spelled | Beit Lahm[1] (official) Bayt Lahm (unofficial) |
Municipal Seal of Bethlehem | |
Governorate | Bethlehem |
Government | |
• Type | City (from 1995) |
• Head of Municipality | Victor Batarseh[2] |
Population (2007) | |
• Jurisdiction | ೨೫,೨೬೬[3] |
Name meaning | house of meat (Arabic); house of bread (Hebrew) |
Website | www.bethlehem-city.org |
ಬೆಥ್ಲೆಹೆಮ್ (ಅರೇಬಿಕ್: بَيْتِ لَحْمٍ, Bayt Laḥm (ಸಹಾಯ·ಮಾಹಿತಿ), ನ್ನು ಲಿಟ್ "ಹೌಸ್ ಆಫ್ ಮೀಟ್ "; ಹೀಬ್ರೂ:בֵּית לֶחֶם, ಬಿಯಟ್ ಲೆಹೆಮ್ ,ಅಥವಾ ಲಿಟ್ "ಹೌಸ್ ಆಫ್ ಬ್ರೆಡ್;" Greek: Βηθλεέμ
ಎನ್ನಲಾಗುತ್ತದೆ.| ಬೆಥ್ಲೆಹೆಮ್ ) ಒಂದು ೧೦ kilometers (೬ mi)ಪ್ಯಾಲೇಸ್ಟಿನಿಯನ್ನ ಮಧ್ಯದ ಪಶ್ಚಿಮ ದಂಡೆಯಲ್ಲಿರುವ ದಕ್ಷಿಣ ಜೆರುಸಲೆಮ್ ನ ಒಂದು ನಗರವಾಗಿದೆ.ಇದರ ಒಟ್ಟು ಅಂದಾಜು ಜನಸಂಖ್ಯೆಯು 30,000[4][5] ರಷ್ಟಿದೆ. ಇದು ಪ್ಯಾಲೇಸ್ಟಿನಿಯನ್ ನ್ಯಾಶನಲ್ ಆಥಾರಿಟಿಯ ಬೆಥ್ ಲೆಹಮ್ ಗವರ್ನೇಟ್ ಗೆ ರಾಜಧಾನಿಯಾಗಿದ್ದು ಅಲ್ಲದೇ ಪ್ಯಾಲೇಸ್ಟೇನಿಯನ್ ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಕೇಂದ್ರ [6][7] ತಾಣವಾಗಿದೆ. ದಿ ಹೀಬ್ರೂ ಬೈಬಲ್ ಪ್ರಕಾರ ಬೆಥ್ಲೆಹೆಮ್ ಅನ್ನು ಡೇವಿಡ್ ಎಂಬಾತ ಆಳುತ್ತಿದ್ದನಲ್ಲದೇ ಅದೇ ಸಂದರ್ಭದಲ್ಲಿ ಆತನಿಗೆ ಕಿಂಗ್ ಆಫ್ ಇಸ್ರೇಲ್ ಎಂಬ ಕಿರೀಟವನ್ನು ಇದೇ ಸ್ಥಳದಲ್ಲಿ ತೊಡಿಸಲಾಗಿತ್ತು. ನೂತನ ಉಯಿಲ್ ನಲ್ಲಿ ಮ್ಯಾಥಿವ್ ಮತ್ತು ಲ್ಯುಕ್ ಅವರ ಶುಭವಾರ್ತೆಗಳ ವಿವರದ ಪ್ರಕಾರ ಬೆಥ್ ಲೆಹೆಮ್ ನ್ನು ಅವರು ನಾಜರೆಥ್ ನ ಜೀಸಸ್ ಜನ್ಮಸ್ಥಳವೆಂದು ಉಲ್ಲೇಖಿಸಿದ್ದಾರೆ. ಅತ್ಯಂತ ಹಳೆಯದಾದ ಕ್ರಿಶ್ಚಿಯನ್ ಸಮಾಜದ ಜನಸಮುದಾಯವನ್ನು ಹೊಂದಿದ ವಿಶ್ವದ ಏಕೈಕ ಪಟ್ಟಣವೆನಿಸಿದೆ. ವಲಸೆಯಿಂದಾಗಿ ಜನಸಂಖ್ಯೆ ಕಡಿಮೆಯಾದರೂ ಅದರ ಜನಪ್ರಿಯತೆ ಕಡಿಮೆಯಾಗಿಲ್ಲ.
ಆದರೆ ಆ ನಗರದ ಧಾರ್ಮಿಕ ಜನತೆ ಅಲ್ಲಿ ಕ್ರಿ.ಶ 529 ರಲ್ಲಿ ಬೀಡು ಬಿಡಲು ಯತ್ನಿಸಿತು.ಅವರ ಕ್ರಾಂತಿಯು ಅವರನ್ನು ಹೊರಹಾಕಿದರೂ ಬೈಜೆಂಟೈನ್ ಚಕ್ರವರ್ತಿ ಜಸ್ಟಿನಿನ್ I ಇದನ್ನು ಮರುನಿರ್ಮಿಸಿದರು.ನಂತರ ಬೆಥ್ ಲೆಹೆಮ್ ಅರಬ್ ಕ್ಯಾಲಿಫೇಟ್ ನ 'ಉಮರ್ ಇಬಿನ್ ಅಲ್ -ಖತ್ತಬ್ 632 ರಲ್ಲಿ ಗೆದ್ದುಕೊಂಡು ಆಡಳಿತ ನಡೆಸಿದ್ದ.ಇಲ್ಲಿನ ಎಲ್ಲಾ ದೇವಸ್ಥಾನಗಳ ರಕ್ಷಣೆಗೆ ಆತ ರಕ್ಷಣೆ ಒದಗಿಸಿದ್ದ. ಆಗ 1099 ರಲ್ಲಿ ಬೆಥ್ಲೆಹೆಮ್ ನ್ನು ಬಂಡಾಯಗಾರರು ವಶಪಡಿಸಿಕೊಂಡರು.ಅಲ್ಲಿ ಇದ್ದ ಗ್ರೀಕ್ ಸಂಪ್ರದಾಯ ಆಡಳಿತವನ್ನು ಲ್ಯಾಟಿನ್ ಆಡಳಿತದಡಿ ತಂದರು. ಈ ಸಂದರ್ಭದಲ್ಲಿ ಲ್ಯಾಟಿನ್ ಧಾರ್ಮಿಕ ಗುರುವನ್ನು ಈಜಿಪ್ತ್ ಮತ್ತು ಸಿರಿಯಾದ ಸುಲ್ತಾನ ಸಲಾದ್ದಿನ್ ಈ ನಗರವನ್ನು ವಶಪಡಿಸಿಕೊಂಡ ನಂತರ ಆತನನ್ನು ಉಚ್ಚಾಟಿಸಿದ. ಸುಮಾರು 1250 ರಲ್ಲಿ ಮಾಮ್ಲುಕ್ಸ್ ಅವರ ಆಗಮನದ ನಂತರ ನಗರದ ಗೋಡೆಗಳನ್ನು ನೆಲಕ್ಕುರುಳಿಸಲಾಯಿತು.ನಂತರ ಒಟ್ಟೊಮನ್ ಸಾಮ್ರಾಜ್ಯದಲ್ಲಿ [8] ಮರುನಿರ್ಮಿಸಲಾಯಿತು.
ಬ್ರಿಟಿಷರು ವಿಶ್ವಯುದ್ದI ರ ಸಂದರ್ಭದಲ್ಲಿ ಒಟ್ಟೊಮನ್ಸ್ ರಿಂದ ಈ ನಗರವನ್ನು ತಮ್ಮ ವಶಕ್ಕೆ ಪಡೆದರು.ಇದನ್ನು 1947 ರ ಯುನೈಟೆಡ್ ನೇಶನ್ಸ್ ಪಾರ್ಟಿಶನ್ ಪ್ಲಾನ್ ಫಾರ್ ಪ್ಯಾಲೆಸ್ಟೈನ್ ನಿಯಮದ ಮೂಲಕ ಅಂತಾರಾಷ್ಟ್ರೀಯ ವಲಯದಲ್ಲಿ ಸೇರಿಸಲಾಯಿತು. ಅದೇ 1948ರ ಅರಬ್ -ಇಸ್ರೇಲಿ ಯುದ್ದದಲ್ಲಿ ಜೊರ್ಡಾನ್ ಈ ನಗರವನ್ನು ತನ್ನ ವಶಕ್ಕೆ ತಂದುಕೊಂಡಿತು. ನಂತರ 1967 ರಲ್ಲಿನ ಆರು ದಿನಗಳ ಯುದ್ದದಲ್ಲಿ ಇಸ್ರೇಲ್ ಇದನ್ನು ಆಕ್ರಮಿಸಿಕೊಂಡಿತು. ಸದ್ಯ ಬೆಥ್ ಲೆಹೆಮ್ 1995 ರಿಂದಲೂ ಪ್ಯಾಲೇಸ್ಟಿನಿಯನ್ ನ್ಯಾಷನಲ್ ಅಥಾರಿಟಿಯಿಂದ ಆಡಳಿತಕ್ಕೆ [8] ಒಳಪಟ್ಟಿದೆ.
ಬೆಥ್ ಲೆಹೆಮ್ ನಲ್ಲಿ ಮುಸ್ಲಿಮ್ ರು ಬಹುಸಂಖ್ಯಾತರಿದ್ದರೂ ಪ್ಯಾಲೆಸ್ಟಿನಿಯನ್ ನ ಹೆಚ್ಚು ಕ್ರಿಶ್ಚನ್ನರಿಗೆ ಇದು ಆಶ್ರಯ ತಾಣವಾಗಿದೆ. ಬೆಥ್ ಲೆಹೆಮ್ ನ ಒಟ್ಟು ಸಂಘಟಣೆಯು ಬಿಯತ್ ಜಾಲಾ ಮತ್ತು ಬಿಯತ್ ಸಾಹೌರ್ ನಗರಗಳನ್ನಲ್ಲದೇ ಐದಾ ಮತ್ತು ಅಜ್ಜಾ ನಿರಾಶ್ರಿತರ ಶಿಬಿರಗಳು ಇತ್ಯಾದಿಗಳನ್ನು ಒಳಗೊಂಡಿದೆ. ಬೆಥ್ ಲೆಹೆಮ್ ನ ಪ್ರಮುಖ ಆರ್ಥಿಕ ವಲಯದ ಮೂಲವೆಂದರೆ ಪ್ರವಾಸೋದ್ಯಮ,ಇದು ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ ಆಫ್ ದಿ ನೇಟಿವಿಟಿಗೆ ಮುಗಿಬೀಳುವ ಉನ್ನತ ಪ್ರಮಾಣದಲ್ಲಿ ಬರುವ ಕ್ರಿಸ್ಚಿಯನ್ ಯಾತ್ರಿಗಳ ಭೇಟಿಯನ್ನು ಅವಲಂಬಿಸಿದೆ. ಬೆಥ್ ಲೆಹೆಮ್ ನಲ್ಲಿ ಸುಮಾರು ಮೂವತ್ತು ಹೊಟೇಲುಗಳಿವೆ.ಅಲ್ಲದೇ ಮುನ್ನೂರು ಕರಕುಶಲ ಕಾರ್ಯಾಗಾರದ ಅಂಗಡಿ-[9] ಮುಂಗಟ್ಟುಗಳಿವೆ. ಜಿವಿಶ್ ಧರ್ಮೀಯರ ರಾಚೆಲ್ಸ್ ಟೊಂಬ್ ಅತ್ಯಂತ ಪವಿತ್ರ ಸ್ಥಳವು ಬೆಥ್ ಲೆಹೆಮ್ ನ ಪ್ರವೇಶ ದ್ವಾರದಲ್ಲಿದೆ.