ಬೆನಿಟೋ ಮುಸೊಲಿನಿ
From Wikipedia, the free encyclopedia
ಬೆನಿಟೋ ಅಮಿಲ್ಕೇರ್ ಆಂದ್ರಿಯಾ ಮುಸೊಲಿನಿ , KSMOM GCTE (29 ಜುಲೈ 1883 - 28 ಏಪ್ರಿಲ್ 1945) ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯ ನೇತಾರನಾಗಿದ್ದ ಇಟಾಲಿಯನ್ ರಾಜಕಾರಣಿ ಮತ್ತು ಫ್ಯಾಸಿಸಮ್ ಅನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳಲ್ಲೊಬ್ಬ. ಆತನು 1922ರಲ್ಲಿ ಇಟಲಿಯ ಪ್ರಧಾನಮಂತ್ರಿಯಾದನು ಮತ್ತು 1925ರಿಂದ ಇಲ್ ಡೂಶೆ ಎಂಬ ಬಿರುದನ್ನು ಬಳಸಲು ಆರಂಭಿಸಿದನು. 1936ರ ನಂತರ ಆತನ ಅಧಿಕೃತ ಬಿರುದಾಂಕಿತವು ಈ ರೀತಿಯಾಗಿದ್ದಿತು: "ಹಿಸ್ ಎಕ್ಸೆಲೆನ್ಸಿ ಬೆನಿಟೊ ಮುಸೊಲಿನಿ, ಹೆಡ್ ಆಫ್ ಗವರ್ನಮೆಂಟ್, ಡೂಶೆ ಆಫ್ ಫ್ಯಾಸಿಸಮ್, ಎಂಡ್ ಫೌಂಡರ್ ಆಫ್ ಎಂಪೈರ್ ".[1] ಜತೆಗೇ ಮುಸೊಲಿನಿಯು ರಾಜ ವಿಕ್ಟೋರ್ ಎಮ್ಯಾನುಯೆಲ್ III ಆಫ್ ಇಟಲಿಯ ಜತೆಯಲ್ಲಿ ಅತ್ಯುಚ್ಚ ಮಿಲಿಟರಿ ಅಧಿಕಾರವಾದ ಫಸ್ಟ್ ಮಾರ್ಷಲ್ ಆಫ್ ದ ಎಂಪೈರ್ ಅನ್ನು ಸ್ಥಾಪಿಸಿ ಹೊಂದಿದ್ದು, ಇದು ಆತನಿಗೂ ಮತ್ತು ರಾಜನಿಗೂ ಇಟಲಿಯ ಮಿಲಿಟರಿಯ ಮೇಲೆ ಜಂಟಿ ಅತ್ಯುಚ್ಚ ಅಧಿಕಾರವನ್ನು ನೀಡಿತ್ತು. 1943ರಲ್ಲಿ ಆತನನ್ನು ಪದಚ್ಯುತಗೊಳಿಸಲಾಗುವ ತನಕವೂ ಆತ ಅಧಿಕಾರದಲ್ಲಿದ್ದನು ಮತ್ತು ಆತನ ಸಾವಿಗೆ ಮುನ್ನ ಕೆಲಕಾಲದವರೆಗೂ ಆತನು ಇಟಾಲಿಯನ್ ಸೊಶಿಯಲ್ ರಿಪಬ್ಲಿಕ್ನ ನಾಯಕನಾಗಿದ್ದನು.
ಮುಸೊಲಿನಿಯು ಇಟಾಲಿಯಮ್ ಫ್ಯಾಸಿಸಮ್ನ ಸಂಸ್ಥಾಪಕರಲ್ಲೊಬ್ಬನಾಗಿದ್ದನು, ಇದು ರಾಷ್ಟ್ರೀಯತೆ, ಕಾರ್ಪೊರೇಟಿಸಮ್, ರಾಷ್ಟ್ರೀಯ ಸಿಂಡಿಕ್ಯಾಲಿಸಮ್, ಎಕ್ಸ್ಪ್ಯಾನ್ಷನಿಸಮ್, ಸಾಮಾಜಿಕ ಅಭಿವೃದ್ಧಿ ಮತ್ತು ಕಮ್ಯುನಿಸಮ್-ವಿರೋಧದಂತಹ ಅಂಶಗಳ ಜತೆಗೇ ವಿಧ್ವಂಸಕರ ಸೆನ್ಸಾರ್ಶಿಪ್ ಮತ್ತು ರಾಜ್ಯದ ಪ್ರಚಾರಕಾರ್ಯಗಳನ್ನೂ ಒಳಗೊಳ್ಳಲಾಗಿತ್ತು. ಫ್ಯಾಸಿಸ್ಟ್ ಸಿದ್ಧಾಂತವನ್ನು ರೂಪಿಸಿದ ನಂತರ ಮುಸೊಲಿನಿ ಹಲವಾರು ವೈವಿಧ್ಯಮಯ ರಾಜಕೀಯ ವ್ಯಕ್ತಿತ್ವಗಳನ್ನು ಪ್ರಭಾವಿಸಿದನು ಮತ್ತು ಶ್ಲಾಘನೆಗೊಳಗಾದನು.[2]
ಮುಸೊಲಿನಿಯ 1924–1939ರ ಅವಧಿಯ ಸ್ಥಳೀಯ ಸಾಧನೆಗಳ ಬಗ್ಗೆ ಹೇಳುವುದಾದಲ್ಲಿ ಆತನ ಸಾರ್ವಜನಿಕ ಕೆಲಸದ ಕಾರ್ಯಕ್ರಮಗಳಾದ ಪಾಂಟೈನ್ ಜೌಗುಪ್ರದೇಶಗಳ ಸುಧಾರಣೆ, ಉದ್ಯೋಗ ಅವಕಾಶಗಳಲ್ಲಿ ಹೆಚ್ಚಳ, ಮತ್ತು ಸಾರ್ವಜನಿಕ ಸಾರಿಗೆಗಳನ್ನು ಹೆಸರಿಸಬಹುದು. ಜತೆಗೇ ಮುಸೊಲಿನಿ ಇಟಲಿ ಸಾಮ್ರಾಜ್ಯ ಮತ್ತು ಹೋಲಿ ಸೀಯ ನಡುವಣ ಲ್ಯಾಟೆರನ್ ಟ್ರೀಟಿಯನ್ನು ಮಾಡಿಕೊಳ್ಳುವುದರ ಮೂಲಕ ರೋಮನ್ ಪ್ರಶ್ನೆಯನ್ನು ಬಗೆಹರಿಸಿದನು. ಇಟಲಿಯ ವಸಾಹತುಗಳು ಮತ್ತು ಆರ್ಥಿಕವಾಗಿ ಆಶ್ರಿತವಾಗಿದ್ದ ಪ್ರದೇಶಗಳಲ್ಲಿ ಆರ್ಥಿಕ ಯಶಸ್ಸು ಸಾಧಿಸಿದ ಶ್ರೇಯವೂ ಈತನಿಗೆ ಸಲ್ಲುತ್ತದೆ.[3] ಆತನ ಮೊದಮೊದಲ ಬೆಂಬಲವು 1930ರ ದಶಕದ ಆರಂಭದಲ್ಲಿ ಜರ್ಮನಿಯ ವಿರುದ್ಧವಾಗಿ ಫ್ರ್ಯಾನ್ಸ್ನ ಕಡೆಗಿದ್ದರೂ, ನಂತರ ಮುಸೊಲಿನಿ ಆಕ್ಸಿಸ್ ಶಕ್ತಿಗಳ ಪ್ರಮುಖ ನಾಯಕರಲ್ಲೊಬ್ಬನಾದನು ಮತ್ತು, 10 ಜೂನ್ 1940ರಂದು ಮುಸೊಲಿನಿ ಆಕ್ಸಿಸ್ನ ಪಕ್ಷದಲ್ಲಿದ್ದುಕೊಂಡು ಇಟಲಿಯು ಎರಡನೇ ವಿಶ್ವಯುದ್ಧದಲ್ಲಿ ಭಾಗವಹಿಸಲು ಕಾರಣನಾದನು. ಮೂರು ವರ್ಷಗಳ ನಂತರ ಮಿತ್ರರಾಷ್ಟ್ರಗಳ ದಾಳಿಯಿಂದಾಗಿ ಮುಸೊಲಿನಿಯನ್ನು ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್ನಿಂದ ಪದಚ್ಯುತಗೊಳಿಸಲಾಯಿತು. ಕಾರಾಗೃಹವಾಸದಲ್ಲಿದ್ಡ ಮುಸೊಲಿನಿಯನ್ನು ಜರ್ಮನ್ ವಿಶೇಷ ಪಡೆಗಳು ಕೆಲವೇ ಸಮಯದ ನಂತರ ಸಾಹಸಪೂರ್ಣ ಗ್ರ್ಯಾನ್ ಸ್ಯಾಸ್ಸೋ ರೇಡ್ ಅನ್ನು ನಡೆಸುವುದರ ಮೂಲಕ ಪಾರುಮಾಡಿದವು.
ಪಾರಾದ ನಂತರ ಮುಸೊಲಿನಿ ಮಿತ್ರಪಡೆಗಳಿರದ ಇಟಾಲಿಯನ್ ಭಾಗಗಳಲ್ಲಿ ಸ್ಥಾಪಿಸಲಾದ ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್ನ ನಾಯಕತ್ವ ವಹಿಸಿಕೊಂಡನು. ಏಪ್ರಿಲ್ 1945ರ ವೇಳೆಗೆ ಸೋಲಿನ ಕಾರ್ಮೋಡ ಕವಿಯತೊಡಗಿದಾಗ, ಮುಸೊಲಿನಿಯು ಸ್ವಿಜರ್ಲೆಂಡಿಗೆ ಪರಾರಿಯಾಗಲು ಪ್ರಯತ್ನಿಸಿದನಾದರೂ ಆತನನ್ನು ಸೆರೆಹಿಡಿಯಲಾಯಿತು ಮತ್ತು ಇಟಾಲಿಯನ್ ಪಾರ್ಟಿಸಾನ್ಗಳು ಆತನನ್ನು ಲೇಕ್ ಕೋಮೋ ಬಳಿ ತಡಮಾಡದೆ ಕೊಂದರು. ಆತನ ದೇಹವನ್ನು ನಂತರ ಮಿಲಾನ್ಗೆ ಒಯ್ಯಲಾಯಿತು ಮತ್ತು ಅಲ್ಲಿನ ಪೆಟ್ರೋಲ್ ಸ್ಟೇಶನ್ ಒಂದರಲ್ಲಿ ಸಾರ್ವಜನಿಕರಿಗೆ ಆತನ ಸಾವು ನಿಜವೆಂದು ಖಚಿತಪಡಿಸುವ ಸಲುವಾಗಿ ತಲೆಕೆಳಗಾಗಿ ನೇತುಹಾಕಲಾಯಿತು.