ಮಿಲೆವಾ ಮ್ಯಾರಿಕ್
ಗಣಿತಜ್ಞ / From Wikipedia, the free encyclopedia
ಮಿಲೆವಾ ಮ್ಯಾರಿಕ್-(ಡಿಸೆಂಬರ್ ೧೯, ೧೮೭೫-ಆಗಸ್ಟ್ ೪, ೧೯೪೮) ಸರ್ಬಿಯ ದೇಶದ ಪ್ರಖ್ಯಾತ ಭೌತಶಾಸ್ತ್ರಜ್ಞೆ.[1] ಜ್ಯೂರಿಚ್ ಪಾಲಿಟೆಕ್ನಿಕ್ಕಿನಲ್ಲಿ ಆಲ್ಬರ್ಟ್ ಐನ್ಸ್ಟೀನ್ ಅವರು ಬೋಧಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಏಕೈಕ ಮಹಿಳೆಯಾಗಿದ್ದರು.ಮ್ಯಾರಿಕ್ ಹಾಗೂ ಆಲ್ಬರ್ಟ್ ನಡುವೆ ಸಂಬಂಧ ಬೆಳೆದು ನಂತರದಲ್ಲಿ ವಿವಾಹವಾದರು.ಆದರೆ ಅವರ ಮದುವೆಗೆ ಮೊದಲೇ ಒಬ್ಬ ಮಗಳು ಜನಿಸಿದ್ದಳು.ಲೈಸೆರ್ಲ್ ಎಂಬ ಹೆಸರಿನ ಆ ಮಗು ಬಹುಬೇಗ ತೀರಿಹೋಹಿತು. ಆವರ ವಿವಾಹ ೧೯೦೩ರಲ್ಲಿ ನಡೆಯಿತು. ಅವರಿಗೆ ಹ್ಯಾನ್ಸ್ ಆಲ್ಬರ್ಟ್ ಹಾಗೂ ಎಡ್ವರ್ಡ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದರು.[2] ಮ್ಯಾರಿಕ್ ೧೯೧೪ರಲ್ಲಿ ಆಲ್ಬರ್ಟ್ ಅವರಿಂದ ದೂರವಾದರು,ಅವರ ಜೊತೆಗೆ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಬರ್ಲಿನ್ ಇಂದ ಜ್ಯೂರಿಚ್ ಗೆ ಮರಳಿದರು. ಮ್ಯಾರಿಕ್ ದಂಪತಿಯು ೧೯೧೯ರಲ್ಲಿ ವಿಚ್ಛೇದನ ಮಾಡಿಕೊಂಡರು, ಆದರೆ ಆ ವರ್ಷವೇ ಆಲ್ಬರ್ಟ್ ಪುನಃ ಮದುವೆಯಾದರು.ಆಲ್ಬರ್ಟ್ ಅವರಿಗೆ ೧೯೨೧ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು,ಆ ಹಣವನ್ನೆಲ್ಲಾ ತಮ್ಮ ಮಕ್ಕಳಿಗೆ ಸಹಾಯವಾಗಲೆಂದು ಮ್ಯಾರಿಕ್ ಅವರಿಗೆ ನೀಡಿದರು. ೧೯೩೦ರಲ್ಲಿ ತಮ್ಮ ೨೦ವರ್ಷದ ಮಗ ಎಡ್ವರ್ಡ್ ಸ್ಕಿಜೋಫ್ರೇನಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದನು. ಅವನ ಆ ಖಾಯಿಲೆಯನ್ನು ಗುಣಪಡಿಸಲೆಂದು ಅವರ ಮೂರು ಮನೆಗಳಲ್ಲಿ ಎರಡು ಮನೆಯನ್ನು ಮಾರಿ ಗುಣವಾಗುವಂತೆ ನೋಡಿಕೊಂಡಳು. ಆದರೆ ನಂತರದಲ್ಲಿ ಆಲ್ಬರ್ಟ್ ಅವರು ತಮ್ಮ ಎರಡನೇ ಹೆಂಡತಿಯ ಜೊತೆ ಅಮೇರಿಕ ದೇಶಕ್ಕೆ ವಲಸೆ ಹೋದರು.[3][4]
ಮಿಲೆವಾ ಮ್ಯಾರಿಕ್ | |
---|---|
ಜನನ | ೧೯ ಡಿಸೆಂಬರ್ ೧೮೭೫ ಟಿಟೆಲ್, ಆಸ್ಟ್ರೋ-ಹಂಗೇರಿಯನ್ |
ಮರಣ | ೪ ಆಗಸ್ಟ್ ೧೯೪೮ ಜ್ಯೂರಿಕ್, ಸ್ವಿಟ್ಜರ್ಲೆಂಡ್ |
Resting place | ಫ್ರೈಡಾಫ್ ನಾರ್ಧೀನ್,ಜ್ಯೂರಿಕ್,ಸ್ವಿಟ್ಜರ್ಲೆಂಡ್ |
ಶಿಕ್ಷಣ ಸಂಸ್ಥೆ | (ಇ.ಟಿ.ಎಚ್) ಜ್ಯೂರಿಕ್, ಸ್ವಿಟ್ಜರ್ಲೆಂಡ್ |
ಸಂಗಾತಿ(s) | ಆಲ್ಬರ್ಟ್ ಐನ್ಸ್ಟೀನ್;(೧೯೦೩–೧೯೧೯) |
ಮಕ್ಕಳು | ಲಿಸೆರಲ್ ಐನ್ಸ್ಟೀನ್, ಹ್ಯಾನ್ಸ್ ಆಲ್ಬರ್ಟ್ ಐನ್ಸ್ಟೀನ್, ಎಡ್ವರ್ಡ್ ಐನ್ಸ್ಟೀನ್ |
ಪೋಷಕ | ಮರಿಜಾ ಮ್ಯಾರಿಕ್ ಹಾಗೂ ಮಿಲೋಸ್ ಮ್ಯಾರಿಕ್ |