ರೊನಾಲ್ಡೊ
ಬ್ರೆಜಿಲ್ ಫುಟ್ಬಾಲ್ ಆಟಗಾರ / From Wikipedia, the free encyclopedia
ರೊನಾಲ್ಡೊ ಲೂಯಿಸ್ ನಝಾರಿಯೋ ಡಿ ಲಿಮಾ (Portuguese pronunciation: [ʁoˈnawdu luˈiz naˈzaɾiu dʒi ˈlimɐ]; ಹುಟ್ಟಿದ್ದು 22 ಸೆಪ್ಟಂಬರ್ 1976 ರಲ್ಲಿ), ಸಾಮಾನ್ಯವಾಗಿ ತಿಳಿದಿರುವಂತೆ ರೊನಾಲ್ಡೊ , ಒಬ್ಬ ಬ್ರೇಜಿಲಿಯನ್ ಪುಟ್ ಬಾಲ್ ಆಟಗಾರ , ಈತನು ಸಧ್ಯ ಕೊರಿಂಥಿಯಾನ್ಸ್ಗಾಗಿ ಆಡುತ್ತಿದ್ದಾರನೆ. ಪುಟ್ ಬಾಲ್ ಆಟದಲ್ಲಿನ ಜೊತೆಗಾರರಿಂದ, ಅಭಿಮಾನಿಗಳಿಂದ, ಪತ್ರಕರ್ತರಿಂದ ಮತ್ತು ನೂತನ ಮಾದರಿಯ ಪುಟ್ ಬಾಲ್ ಇತಿಹಾಸದಲ್ಲಿನ ನುರಿತ ಅತ್ಯುತ್ತಮ ಸ್ಟ್ರೈಕರ್ ಗಳಲ್ಲಿ ಒಬ್ಬನಾಗಿ ಪರಿಗಣಿಸಲ್ಪಟ್ಟಿದ್ದಾನೆ.[2][3]
Personal information | |||
---|---|---|---|
Full name | Ronaldo Luis Nazário de Lima | ||
Date of birth | (1976-09-22) ೨೨ ಸೆಪ್ಟೆಂಬರ್ ೧೯೭೬ (ವಯಸ್ಸು ೪೭) | ||
Place of birth | Rio de Janeiro, ಬ್ರೆಜಿಲ್ | ||
Height | 1.83 m (6 ft 0 in) | ||
Playing position | Striker | ||
Club information | |||
Current club | Corinthians | ||
Number | 9 | ||
Youth career | |||
1986–1989 | Tennis Club Valqueire | ||
1989–1990 | Social Ramos Club | ||
1990–1993 | São Cristóvão | ||
Senior career* | |||
Years | Team | Apps† | (Gls)† |
1993–1994 | Cruzeiro | 14 | (12) |
1994–1996 | PSV | 46 | (42) |
1996–1997 | Barcelona | 37 | (34) |
1997–2002 | Internazionale | 68 | (49) |
2002–2007 | Real Madrid | 127 | (83) |
2007–2008 | Milan | 20 | (9) |
2009– | Corinthians | 20 | (12) |
National team‡ | |||
1994– | Brazil | 97 | (62 [1]) |
Honours
| |||
† Appearances (Goals). |
ಹತ್ತೊಂಬತ್ತನೇ ಶತಮಾನದಲ್ಲಿ ಮತ್ತು ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ರೊನಾಲ್ಡೊ ಅತೀ ಸಮರ್ಥ ಸ್ಕೋರರ್ ಗಳಲ್ಲಿ ಒಬ್ಬನಾಗಿದ್ದನು. ಯುರೋಪಿನಲ್ಲಿ ಅವನ ಪುಟ್ ಬಾಲ್ ವೃತ್ತಿ ಜೀವನದ ಸಮಯದಲ್ಲಿ, ಅವನ ಮೊದಲ ಬ್ಯಾಲ್ಲೋನ್ ಡಿ ಓರ್ ನ ಗೆಲ್ಲುವುದರಿಂದ ಹಾಗೇ 1997 ರಲ್ಲಿನ ವರ್ಷದ ಯುರೋಪಿಯನ್ ಪುಟ್ ಬಾಲ್ ಆಟಗಾರ ಮತ್ತು ಪುನಃ 2002 ರಲ್ಲಿ ರೊನಾಲ್ಡೊ ಪ್ರಪಂಚದಲ್ಲಿನ ಅತ್ಯಂತ ಹೆಸರುವಾಸಿ ಸ್ಟ್ರೈಕರ್ ಗಳಲ್ಲಿ ಒಬ್ಬನಾದನು. FIFA ವರ್ಷದ ಆಟಗಾರಪ್ರಶಸ್ತಿಯನ್ನು ಮೂರು ಬಾರಿ ಬಾರಿ ಪಡೆದ ಇಬ್ಬರು ಆಟಗಾರರಲ್ಲಿ ಇವನು ಕೂಡಾ ಒಬ್ಬನಾಗಿರುತ್ತಾನೆ, ಇನ್ನೊಬ್ಬ ಫ್ರೆಂಚ್ ಫುಟ್ಬಾಲ್ ಆಟಗಾರ ಜಿನಿಡೈನ್ ಜಿಡಾನೆ. 2007ರಲ್ಲಿ, ಇವನು ಫ್ರಾನ್ಸ್ ಫುಟ್ಬಾಲ್ನಿಂದ ಎಲ್ಲಾ ಬಾರಿಯೂ ಹನ್ನೊಂದರ ಉತ್ತಮ ಆರಂಭಿಕ ಆಟಗಾರನಾಗಿ ಹಾಗೂ FIFA 100ಗೂ ನೇಮಕಗೊಂಡನು , ಸಹ ದೇಶವಾಸಿ ಪೀಲೆ ಸಂಗ್ರಹಿಸಿದ ಅತ್ಯುತ್ತಮ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಕೂಡಾ ಸೇರ್ಪಡೆಗೊಂಡನು. 2010ರಲ್ಲಿ, ಇವನುಗೋಲ್.ಕಾಮ್ ನಡೆಸಿದ ಆಯ್ಕೆಯಲ್ಲಿ ಆನ್ ಲೈನ್ ಮೂಲಕ ಪ್ಲೇಯರ್ ಆಫ್ ದಿ ಡಿಕೇಡ್ ಎಂದು ಆಯ್ಕೆಗೊಂಡನು, ಎಲ್ಲಾ 43.63% ಮತಗಳನ್ನು ಒಟ್ಟುಗೂಡಿಸಿಕೊಂಡು[4] ಮತ್ತು ದಿ ಟೀಮ್ ಆಫ್ ದಿ ಡಿಕೇಡ್ ನಲ್ಲಿ ಸೆಂಟರ್ ಫಾರ್ ವರ್ಡ್ ಆಗಿ ಸಹ ಸೇರಿಸಿಕೊಳ್ಳಲಾಯಿತು.[5]
ರೊನಾಲ್ಡೊನನ್ನು ಬ್ರೆಝಿಲ್ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಎಂದು ಸಹ ಘೋಷಿಸಲಾಯಿತು. ಇವನು 97 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದಾನೆ, 62 ಗೋಲ್ಗಳನ್ನು ಗಳಿಸುವ ಮೂಲಕ ಬ್ರೆಜಿಲಿಯನ್ ರಾಷ್ಟ್ರೀಯ ದಾಖಲೆಯ ಸ್ಕೋರ್ಗೆ 15 ಅಂತರದಲ್ಲಿದ್ದನು. ಈತನು ಬ್ರೆಜಿಲಿಯನ್ ಸ್ಕ್ವಾಡ್ನ ಒಂದು ಭಾಗವಾಗಿದ್ದನು ಅದು 1994, ಮತ್ತು 2002 ವರ್ಲ್ಡ್ ಕಪ್ಗಳನ್ನು ಗೆದ್ದಿತು.
2006ರ ಸಮಯದಲ್ಲಿ, ರೊನಾಲ್ಡೊ ವರ್ಲ್ಡ್ ಕಪ್ನ ಇತಿಹಾಸದಲ್ಲಿ 15ನೇ ಗೋಲು ಗಳಿಸುವುದರೊಂದಿಗೆ ಅತೀ ಹೆಚ್ಚಿನ ಗೋಲು ಹೊಡೆದ ಆಟಗಾರನಾದನು,ಗರ್ಡ್ ಮುಲ್ಲರ್ನ ಈ ಹಿಂದಿನ 14 ಗೋಲು ದಾಖಲೆಯನ್ನು ಮೀರಿಸಿದನು.
ರೊನಾಲ್ಡೊನ ಆಟ ಆಂತ್ಯಗೊಳಿಸುವಿಕೆ, ಎದುರಾಳಿಗಳನ್ನು ಅನಾಯಾಸವಾಗಿ ಹೊಡೆಯುವ ಸಾಮರ್ಥ್ಯ, ಬಾಲನ್ನು ಹೊಡೆಯುವ ಕೌಶಲ್ಯ ಮತ್ತು ಅವನ ಹಲವು ಬಾರಿ ಗಾಯಾಳುವಾಗಿ ಪುನಃ ಬಂದಾಗ ಪ್ರಪಂಚದಾದ್ಯಂತದ ಫುಟ್ಬಾಲ್ ಅಭಿಮಾನಿಗಳು ಇವನನ್ನು ನೋಡಿ ಪ್ರಶಂಸಿಸುತ್ತಿದ್ದರು.[6]
ಝ್ಲಾಟಾನ್ ಇಬ್ರಾಹಿಮೊವಿಕ್, ಕರೀಮ್ ಬೆಂಝೆಮ,[7] ಅಲೆಗ್ಜಾಂಡ್ರೆ ಪಾಟೊ, ಫರ್ ನಾಂಡೋ ಟೊರ್ರೆಸ್ಮತ್ತು ವೇನೀ ರೂನೀ ರಂತಹ ಹಲವು ಹೊಸ ಫುಟ್ಬಾಲ್ ಆಟಗಾರರಿಗೆ ಈತನು ಮಾದರಿಯಾಗಿದ್ದಾನೆ.[8]