ವಿಲಿಯಂ ಹಾಗು ಕ್ಯಾಥರೀನ್ ಮಿಡಲ್ಟನ್ ವಿವಾಹ
From Wikipedia, the free encyclopedia
ರಾಜಕುಮಾರ ವಿಲಿಯಂ, ಕೇಂಬ್ರಿಜ್ನ ಡ್ಯೂಕ್, ಹಾಗು ಕ್ಯಾಥರೀನ್ ಮಿಡಲ್ಟನ್ ರ ವಿವಾಹ ಸಮಾರಂಭ ವು ೨೯ ಏಪ್ರಿಲ್ ೨೦೧೧ರಂದು ಲಂಡನ್ ನ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ಜರುಗಿತು. ರಾಣಿ ಎಲಿಜಬೆತ್ IIರ ಎರಡನೇ ಉತ್ತರಾಧಿಕಾರಿಯಾದ ರಾಜಕುಮಾರ ವಿಲಿಯಂ, ಕ್ಯಾಥರೀನ್ ಮಿಡಲ್ಟನ್ ರನ್ನು ಸೆಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ಇಬ್ಬರೂ ಒಟ್ಟಾಗಿ ಓದುವಾಗ ಮೊದಲ ಬಾರಿಗೆ ೨೦೦೧ರಲ್ಲಿ ಸಂಧಿಸಿದರು. ೨೦ ಅಕ್ಟೋಬರ್ ೨೦೧೦ರಲ್ಲಿ ನಡೆದಂತಹ ಅವರ ನಿಶ್ಚಿತಾರ್ಥವನ್ನು ೧೬ ನವೆಂಬರ್ ೨೦೧೦ರಲ್ಲಿ ಪ್ರಕಟಿಸಲಾಯಿತು. ಮದುವೆಗೆ ಸಿದ್ಧತೆ ಹಾಗು ಸ್ವತಃ ಸಮಾರಂಭವು ಮಾಧ್ಯಮದ ಹೆಚ್ಚಿನ ಗಮನವನ್ನು ಸೆಳೆಯಿತು, ಜೊತೆಗೆ ವಿವಾಹ ಸಮಾರಂಭವನ್ನು ವಿಶ್ವದಾದ್ಯಂತ ನೇರ ಪ್ರಸಾರ ಮಾಡಲಾಯಿತು, ಹಾಗು ಇದನ್ನು ವಿಲಿಯಂ ತಂದೆತಾಯಿಯರಾದ ಚಾರ್ಲ್ಸ್, ವೇಲ್ಸ್ ನ ರಾಜಕುಮಾರ ಹಾಗು ಡಯಾನಾ, ವೇಲ್ಸ್ ನ ರಾಜಕುಮಾರಿಯೊಂದಿಗೆ ೧೯೮೧ರಲ್ಲಿ ಜರುಗಿದ ಮದುವೆಗೆ ಹಲವು ರೀತಿಯಲ್ಲಿ ಹೋಲಿಸುವುದರ ಜೊತೆಗೆ ಭಿನ್ನತೆಯನ್ನು ಗುರುತಿಸಲಾಗುತ್ತದೆ. ವಿಶ್ವಾದ್ಯಂತ ಈ ಮದುವೆಯನ್ನು ೩೦೦ ದಶಲಕ್ಷದಿಂದ ಹಿಡಿದು ಎರಡು ಶತಕೋಟಿ ಜನರು ವೀಕ್ಷಿಸಿದರೆಂದು ಅಂದಾಜಿಸಲಾಗುತ್ತದೆ, ಈ ನಡುವೆ ಯುನೈಟೆಡ್ ಕಿಂಗ್ಡಂನಲ್ಲಿ ೨೪.೫ ದಶಲಕ್ಷದಷ್ಟು ಜನರು ವಿವಾಹ ಸಮಾರಂಭವನ್ನು ನೇರವಾಗಿ ವೀಕ್ಷಿಸಿದರೆಂದು ಹೇಳಲಾಗುತ್ತದೆ.[1][2]
ಒಬ್ಬ ಸಾಮಾನ್ಯ ಪ್ರಜೆಯಾಗಿ ಕೇಟ್ ಮಿಡಲ್ಟನ್ ರಾಜಮನೆತದವರನ್ನು ವರಿಸಿದ ಕಾರಣಕ್ಕೆ ಅವರ ಸ್ಥಾನಮಾನದ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಯಿತು (ಅಂದರೆ ಅವರು ರಾಜಮನೆತನಕ್ಕೆ ಸೇರಿದವರಾಗಿರಲಿಲ್ಲ ಅಥವಾ ಶ್ರೀಮಂತವರ್ಗದ ಭಾಗವಾಗಿರಲಿಲ್ಲ). ಸಮಾರಂಭವು ಆರಂಭಗೊಳ್ಳುವ ಬಹಳಷ್ಟು ಮೊದಲೇ, ರಾಣಿ ವಿಲಿಯಂರಿಗೆ ಡ್ಯೂಕ್ ಆಫ್ ಕೇಂಬ್ರಿಡ್ಜ್, ಅರ್ಲ್ ಆಫ್ ಸ್ಟ್ರಾಟ್ಹೆರ್ನ, ಹಾಗು ಬ್ಯಾರನ್ ಕ್ಯಾರಿಕ್ಫರ್ಗುಸ್ ಬಿರುದುಗಳನ್ನು ನೀಡಿದರು. ಆದ್ದರಿಂದ ಮದುವೆ ನಂತರ, ಮಿಡಲ್ಟನ್ ಹರ್ ರಾಯಲ್ ಹೈನೆಸ್ಸ್ ದಿ ಡಚಸ್ ಆಫ್ ಕೇಂಬ್ರಿಡ್ಜ್ ಎನಿಸಿದರು.
ರಾಜಕುಮಾರ ವಿಲಿಯಂ ಸಿಂಹಾಸನಕ್ಕೆ ಪ್ರಧಾನ ಉತ್ತರಾಧಿಕಾರಿಯಲ್ಲದ ಕಾರಣ, ವಿವಾಹ ಸಮಾರಂಭವು ಒಂದು ಸಂಪೂರ್ಣ ಸರ್ಕಾರಿ ಸಮಾರಂಭವಾಗಿರಲಿಲ್ಲ ಹಾಗು ಹಲವು ವಿಷಯಗಳನ್ನು ದಂಪತಿಯ ನಿರ್ಧಾರಕ್ಕೆ ಬಿಡಲಾಗಿತ್ತು, ಉದಾಹರಣೆಗೆ ಸುಮಾರು ೧,೯೦೦ರಷ್ಟಿದ್ದ ಅತಿಥಿಗಳ ಪಟ್ಟಿ. ಯುನೈಟೆಡ್ ಕಿಂಗ್ಡಂನಲ್ಲಿ ಅಂದು ಸಾರ್ವಜನಿಕ ರಜೆಯನ್ನು ನೀಡಲಾಗಿತ್ತು ಹಾಗು ಹಲವು ಶಿಷ್ಟಾಚಾರದ ಅಂಶಗಳನ್ನು ಒಳಗೊಂಡಿತ್ತು, ಇದರಲ್ಲಿ ಸರ್ಕಾರದ ಸಾರೋಟುಗಳ ಬಳಕೆ ಹಾಗು ಪದಾತಿ ಸೈನ್ಯಗಳು ಹಾಗು ರಾಜಕುಟುಂಬದ ಅಶ್ವಸೈನ್ಯಗಳ ಪಾತ್ರಗಳೂ ಸೇರಿತ್ತು. ಇದರಲ್ಲಿ ಬಹುತೇಕ ರಾಜ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು, ಜೊತೆಗೆ ಹಲವು ವಿದೇಶಿ ರಾಜವಂಶಸ್ಥರು, ರಾಜತಾಂತ್ರಿಕರು, ಹಾಗು ದಂಪತಿ ಆಯ್ಕೆ ಮಾಡಿದ್ದಂತಹ ಖಾಸಗಿ ಅತಿಥಿಗಳು ಆಮಂತ್ರಿತರಾಗಿದ್ದರು.
ಮಿಡಲ್ಟನ್, 270-centimetre (110 in) ಹಿಂಜೋಲುಳ್ಳ ಶ್ವೇತ ವಸ್ತ್ರವನ್ನು ಧರಿಸಿದ್ದರು, ಇದನ್ನು ಸಾರಾ ಬರ್ಟನ್ ಎಂಬ ಬ್ರಿಟಿಶ್ ವಸ್ತ್ರ ವಿನ್ಯಾಸಕಿ ವಿನ್ಯಾಸಗೊಳಿಸಿದ್ದರು ಹಾಗು ಮಹಾರಾಣಿ ನೀಡಿದ್ದಂತಹ ತಲೆಡಾಬನ್ನು ಧರಿಸಿದ್ದರು. ರಾಜಕುಮಾರ ವಿಲಿಯಂ ತಮ್ಮ ಗೌರವಯುತ ಪದವಿಯಾದ ಐರಿಶ್ ಗಾರ್ಡ್ಗಳ ಕರ್ನಲ್ ಸಮವಸ್ತ್ರವನ್ನು ಧರಿಸಿದ್ದರು. ವಿಲಿಯಂರ ಸಹೋದರ, ರಾಜಕುಮಾರ ಹ್ಯಾರಿ, ವಿಲಿಯಂ ರ ಬೆಸ್ಟ್ ಮ್ಯಾನ್(ವರನ ಸ್ನೇಹಿತ) ಆಗಿದ್ದರು, ವಧುವಿನ ಸಹೋದರಿ ಪಿಪ್ಪಾ, ಅವರ ವಧೂಸಖಿಯಾಗಿದ್ದರು. ವಿವಾಹ ಸಮಾರಂಭವು ಬೆಳಿಗ್ಗೆ ೧೧:೦೦ ಗಂಟೆಗೆ BST(UTC+1) ಆರಂಭಗೊಂಡಿತು. ಜಾನ್ ರಾಬರ್ಟ್ ಹಾಲ್, ವೆಸ್ಟ್ಮಿನ್ಸ್ಟರ್ ಚರ್ಚಿನ ಮುಖ್ಯಾಧಿಕಾರಿ ಪ್ರಾರ್ಥನಾವಿಧಿಯನ್ನು ನಡೆಸಿಕೊಟ್ಟರು, ಜೊತೆಗೆ ಕ್ಯಾಂಟರ್ಬರಿಯ ಆರ್ಚ್ ಬಿಷಪ್ ರೋವನ್ ವಿಲ್ಲಿಯಂಸ್ ಸ್ವತಃ ಮದುವೆ ವಿಧಿಗಳನ್ನು ನಡೆಸಿದರು ಹಾಗು ಲಂಡನ್ ನ ಬಿಷಪ್ ರಿಚರ್ಡ್ ಚಾರ್ಟ್ರೇಸ್ ಧರ್ಮೋಪದೇಶವನ್ನು ಮಾಡಿದರು. ವಧುವಿನ ಸಹೋದರ ಜೇಮ್ಸ್ ಇದಕ್ಕೆ ವ್ಯಾಖ್ಯಾನವನ್ನು ನೀಡಿದರು. ಸಮಾರಂಭದ ನಂತರ, ನವ ವಧುವರರು ಮಹಡಿ ಉಪ್ಪರಿಗೆಯ ಮೇಲೆ ಕಾಣಿಸಿಕೊಳ್ಳುವ ಸಂಪ್ರದಾಯವನ್ನು ಪೂರೈಸಲು ಬಕಿಂಗ್ಹ್ಯಾಮ್ ಅರಮನೆಗೆ ಮೆರವಣಿಗೆಯ ಮೂಲಕ ಬಂದರು ಹಾಗು ದಿ ಮಾಲ್ ನಲ್ಲಿ ಜನರು ಒಟ್ಟಾಗಿ ಸೇರುವ ಮೊದಲು ಗೌರವ ಸೂಚಿಸಲು ವಿಮಾನಗಳು ವಿಧಿವತ್ತಾಗಿ ಸಾಲುಗಟ್ಟಿ ಹಾರಾಟ ನಡೆಸಿದವು. ನಂತರದಲ್ಲಿ ರಾಜಕುಮಾರ ತನ್ನ ಡಚೆಸ್ ಳನ್ನು ತಮ್ಮ ತಂದೆಯ ಸಾಂಪ್ರದಾಯಿಕ ಆಸ್ಟನ್ ಮಾರ್ಟಿನ್ DB೬ ವೊಲಾನ್ಟೆಯಲ್ಲಿ ಸ್ವಲ್ಪವೇ ದೂರವಿರುವ ಕ್ಲಾರೆನ್ಸ್ ಹೌಸ್ ಗೆ ಕರೆದೊಯ್ದರು,[3] ಈ ವಾಹನವನ್ನು ರಾಜಕುಮಾರ ಹ್ಯಾರಿ ಹಾಗು ಜೇಮ್ಸ್ ಮಿಡಲ್ಟನ್ "JU೫T WED" ಎಂಬ ಸಂಖ್ಯಾ ಫಲಕದಿಂದ ಅಲಂಕರಿಸಿದ್ದರು.
ವಿವಾಹದ ನಂತರ, ದಂಪತಿಗಳು ಉತ್ತರ ವೇಲ್ಸ್ ನಲ್ಲಿರುವ ಅಂಗ್ಲೆಸೆಯಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರೆಸುವ ಉದ್ದೇಶವನ್ನು ಹೊಂದಿದ್ದರು, ಇದಲ್ಲಿ ರಾಜಕುಮಾರ ವಿಲಿಯಂ RAF ಶೋಧನಾ ಹಾಗು ರಕ್ಷಣಾ ವಿಮಾನಚಾಲಕರಾಗಿ ನೆಲೆಗೊಂಡಿದ್ದಾರೆ.