ಶ್ವಾಸಕೋಶದ ಕ್ಯಾನ್ಸರ್
From Wikipedia, the free encyclopedia
ಶ್ವಾಸಕೋಶದ ಕ್ಯಾನ್ಸರ್ ಎಂಬುದು ಒಂದು ಕಾಯಿಲೆಯಾಗಿದ್ದು, ಶ್ವಾಸಕೋಶದ ಅಂಗಾಂಶಗಳಲ್ಲಿನ ಅನಿಯಂತ್ರಿತವಾದ ಜೀವಕೋಶದ ಬೆಳವಣಿಗೆಯನ್ನು ಇದು ಒಳಗೊಂಡಿರುತ್ತದೆ. ಈ ಬೆಳವಣಿಗೆಯು ಸ್ಥಾನಾಂತರಣಕ್ಕೆ ಕಾರಣವಾಗಬಹುದು; ಅಂದರೆ ಇದು ಪಕ್ಕದ ಅಂಗಾಂಶದ ಮೇಲೆ ಆಕ್ರಮಣ ಮಾಡಬಹುದು ಮತ್ತು ಶ್ವಾಸಕೋಶಗಳಿಂದ ಆಚೆಗಿನ ಭಾಗಗಳಲ್ಲಿನ ಒಳವ್ಯಾಪಿಸುವಿಕೆಗೆ ಕಾರಣವಾಗಬಹುದು. ಶ್ವಾಸಕೋಶದ ಪ್ರಧಾನ ಕ್ಯಾನ್ಸರ್ಗಳ ಪೈಕಿಯ ಬಹುಪಾಲು ನಿದರ್ಶನಗಳು ಶ್ವಾಸಕೋಶದ ಕಾರ್ಸಿನೋಮಗಳಾಗಿದ್ದು , ಹೊರಪದರದ ಜೀವಕೋಶಗಳಿಂದ ಅವು ಜನ್ಯವಾದವುಗಳಾಗಿರುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್-ಸಂಬಂಧಿತ ಸಾವುಗಳಿಗೆ ಅತ್ಯಂತ ಸಾಮಾನ್ಯ ಕಾರಣವಾಗಿರುವ ಶ್ವಾಸಕೋಶದ ಕ್ಯಾನ್ಸರ್, ವಿಶ್ವಾದ್ಯಂತ ಕಂಡುಬರುವ 1.3 ದಶಲಕ್ಷ ಸಾವುಗಳಿಗೆ ಸಂಬಂಧಿಸಿದಂತೆ ಹೊಣೆಗಾರನಾಗಿದೆ. ಈ ಅಂಕಿ-ಅಂಶವು 2004ರ ವೇಳೆಗೆ ಇದ್ದಂತೆ ವಾರ್ಷಿಕವಾಗಿ ಕಂಡುಬಂದ ಸಂಖ್ಯೆಯಾಗಿದೆ.[1] ಉಸಿರಾಟದಲ್ಲಿ ಕಂಡುಬರುವ ಅಲ್ಪತೆ, ಕೆಮ್ಮುವಿಕೆ (ಕೆಮ್ಮಿದಾಗ ರಕ್ತವು ಹೊರಬರುವುದೂ ಸೇರಿದಂತೆ) ಮತ್ತು ತೂಕನಷ್ಟ ಇವುಗಳು ಅತ್ಯಂತ ಸಾಮಾನ್ಯ ರೋಗಲಕ್ಷಣಗಳಾಗಿವೆ.[2]
Lung cancer | |
---|---|
Classification and external resources | |
ICD-10 | C33-C34 |
ICD-9 | 162 |
DiseasesDB | 7616 |
MedlinePlus | 007194 |
eMedicine | med/1333 med/1336 emerg/335 radio/807 radio/405 radio/406 |
MeSH | D002283 |
ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ ಮತ್ತು ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ - ಇವು ಶ್ವಾಸಕೋಶದ ಕ್ಯಾನ್ಸರ್ನ ಮುಖ್ಯ ಬಗೆಗಳಾಗಿವೆ. ಕ್ಯಾನ್ಸರ್ನ ಬಗೆಯ ಅನುಸಾರ ಚಿಕಿತ್ಸೆಯು ಬದಲಾಗುವುದರಿಂದ ಈ ವೈಲಕ್ಷಣ್ಯವು ಪ್ರಮುಖವಾಗಿರುತ್ತದೆ; ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವನ್ನು (ನಾನ್-ಸ್ಮಾಲ್ ಸೆಲ್ ಲಂಗ್ ಕಾರ್ಸಿನೋಮ-NSCLC) ಶಸ್ತ್ರಚಿಕಿತ್ಸೆ ಮಾಡಿ ಕೆಲವೊಮ್ಮೆ ಉಪಚರಿಸಲಾದರೆ, ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು (ಸ್ಮಾಲ್-ಸೆಲ್ ಲಂಗ್ ಕಾರ್ಸಿನೋಮ-SCLC) ಸಾಮಾನ್ಯವಾಗಿ ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಸ್ಪಂದಿಸುತ್ತದೆ.[3] ತಂಬಾಕು ಹೊಗೆಗೆ ದೀರ್ಘಾವಧಿಗೆ ಒಡ್ಡಿಕೊಳ್ಳುವುದು ಶ್ವಾಸಕೋಶದ ಕ್ಯಾನ್ಸರ್ನ ಅತ್ಯಂತ ಸಾಮಾನ್ಯ ಕಾರಣವಾಗಿದೆ.[4] ಧೂಮಪಾನಿಗಳಲ್ಲದವರು ಶ್ವಾಸಕೋಶದ ಕ್ಯಾನ್ಸರ್ಗೆ ಈಡಾಗುವ ಪ್ರಮಾಣವು ಒಟ್ಟು ಪ್ರಕರಣಗಳ[5] ಪೈಕಿ ಸುಮಾರು 15%ನಷ್ಟಿದ್ದು, ಇದಕ್ಕೆ ಅನೇಕ ಕಾರಣಗಳಿರಲು ಸಾಧ್ಯವಿದೆ; ಆನುವಂಶಿಕ ಅಂಶಗಳು,[6][7] ರೇಡಾನ್ ಅನಿಲ,[8] ಕಲ್ನಾರು,[9] ಮತ್ತು ಅನ್ಯಮೂಲದ ಹೊಗೆಯನ್ನು ಒಳಗೊಂಡಿರುವ ವಾಯುಮಾಲಿನ್ಯ[10][11][12] ಇವುಗಳ ಒಂದು ಸಂಯೋಜನೆಯು ಧೂಮಪಾನಿಗಳಲ್ಲದವರಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ಗೆ ಅನೇಕವೇಳೆ ಕಾರಣವಾಗುತ್ತದೆ.[13][14]
ಎದೆಯ ರೇಡಿಯೋಗ್ರಾಫ್ ಮತ್ತು ಕಂಪ್ಯೂಟರ್ ಬಳಸಿ ಮಾಡಲಾದ ತಲಲೇಖನದ (ಕಂಪ್ಯೂಟರ್ ಟೋಮೋಗ್ರಫಿ) (CT ಕ್ಷಿಪ್ರಬಿಂಬ) ವಿಧಾನಗಳನ್ನು ಬಳಸಿಕೊಂಡು ಶ್ವಾಸಕೋಶದ ಕ್ಯಾನ್ಸರ್ನ್ನು ಕಾಣಲು ಸಾಧ್ಯವಿದೆ. ಅಂಗಾಂಶ ಪರೀಕ್ಷೆಯೊಂದನ್ನು ಕೈಗೊಳ್ಳುವ ಮೂಲಕ ರೋಗನಿರ್ಣಯವನ್ನು ದೃಢೀಕರಿಸಲಾಗುತ್ತದೆ. ಬ್ರಾಂಕೋಸ್ಕೋಪಿ ಅಥವಾ CT-ನಿರ್ದೇಶಿತ ಅಂಗಾಂಶ ಪರೀಕ್ಷೆಯಿಂದ ಇದನ್ನು ಸಾಮಾನ್ಯವಾಗಿ ನಿರ್ವಹಿಸಲಾಗುತ್ತದೆ. ಕ್ಯಾನ್ಸರ್ನ ಊತಕಶಾಸ್ತ್ರೀಯ ಬಗೆ, ಹಂತ (ಹರಡಿಕೆಯ ಮಟ್ಟ), ಮತ್ತು ರೋಗಿಯ ಕಾರ್ಯಕ್ಷಮತೆಯ ಸ್ಥಿತಿಯ ಮೇಲೆ ಚಿಕಿತ್ಸೆ ಮತ್ತು ಕಾಯಿಲೆಯ ಮುನ್ನರಿವು ಅವಲಂಬಿತವಾಗಿರುತ್ತವೆ. ಸಂಭಾವ್ಯ ಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸೆ, ರಾಸಾಯನಿಕ ಚಿಕಿತ್ಸೆ, ಮತ್ತು ವಿಕಿರಣ ಚಿಕಿತ್ಸೆಗಳು ಸೇರಿವೆ. ಕಾಯಿಲೆಯ ಹಂತ, ಒಟ್ಟಾರೆ ಆರೋಗ್ಯ, ಮತ್ತು ಇತರ ಅಂಶಗಳನ್ನು ಅವಲಂಬಿಸಿ ರೋಗಿಯ ಬದುಕುಳಿಯುವಿಕೆಯು ಬದಲಾಗುತ್ತದೆಯಾದರೂ, ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯಿರುವುದು ಪತ್ತೆಯಾದ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದಂತಿರುವ ಒಟ್ಟಾರೆ ಐದು-ವರ್ಷಗಳ ಬದುಕುಳಿಯುವಿಕೆಯ ಪ್ರಮಾಣವು 14%ನಷ್ಟಿದೆ ಎನ್ನಬಹುದು.[2]