ಸಮರ ಕಲೆಗಳು
From Wikipedia, the free encyclopedia
ಸಮರ ಕಲೆಗಳು, ಕದನ ಕಲೆ ಅಥವಾ ಕಾದಾಟದ ಕಲೆಗಳು ಕಾದಾಟದ ತರಬೇತಿಯ ಕ್ರೋಢೀಕೃತ ಅಭ್ಯಾಸಗಳು ಮತ್ತು ಸಂಪ್ರದಾಯಗಳ ಪದ್ಧತಿಗಳಾಗಿವೆ. ಎಲ್ಲ ಸಮರ ಕಲೆಗಳು ಒಂದೇ ರೀತಿಯ ಉದ್ದೇಶವನ್ನು ಹೊಂದಿವೆ. ತಮ್ಮನ್ನು ತಾವೇ ಅಥವಾ ಅನ್ಯರನ್ನು ಶಾರೀರಿಕ ಆಪತ್ತಿನಿಂದ ರಕ್ಷಿಸುವುದು. ಸದ್ದೃಢರನ್ನಾಗಿಸುವುದು. ಜೊತೆಗೆ, ಕೆಲವು ಸಮರ ಕಲೆಗಳು ಹಿಂದೂಯಿಸಂ, ಬುದ್ಧಿಸಂ, ದಾವೋಯಿಸಂ, ಕನ್ಫ್ಯೂಷಿಯನಿಸಂ, ಅಥವಾ ಶಿಂಟೋ ನಂತಹ ನಂಬಿಕೆಗಳಿಗೆ ಸಂಬಂಧಿಸಿವೆ; ಹಾಗೇ ಇನ್ನು ಕೆಲವು ಒಂದು ನಿರ್ದಿಷ್ಟ ಕೋಡ್ ಆಫ್ ಆನರ್ಅನ್ನು ಪಾಲಿಸುತ್ತವೆ. ಸಮರ ಕಲೆಗಳನ್ನು ಒಂದು ಕಲೆಯಾಗಿ ಮತ್ತು ಒಂದು ವಿಜ್ಞಾನವಾಗಿ ಪರಿಗಣಿಸಲಾಗುತ್ತದೆ. ಹಲವು ಕಲೆಗಳನ್ನು ಸ್ಪರ್ಧಾತ್ಮಕವಾಗಿ ಕೂಡ ಅಭ್ಯಸಿಸಲಾಗುತ್ತದೆ, ಬಹು ಸಾಮಾನ್ಯವಾಗಿ ಕಾದಾಟದ ಆಟಗಳಾಗಿ; ಆದರೆ, ಅವು ನೃತ್ಯದ ರೂಪವನ್ನು ಪಡೆದುಕೊಳ್ಳಬಹುದು.
ಸಮರಕಲೆ
ಮಾರ್ಷಿಯಲ್ ಆರ್ಟ್ಸ್ ಎಂಬ ಪದ ಸಮರ ಕಲೆಗಳನ್ನು ಸೂಚಸುತ್ತದೆ (ರೋಮನ್ ಯುದ್ಧ ದೇವತೆ ಮಾರ್ಸ್ನಿಂದ ವ್ಯುತ್ಪತ್ತಿಯಾದುದು)ಮತ್ತು ಈಗ ಐತಿಹಾಸಿಕ ಯುರೋಪಿಯನ್ ಮಾರ್ಷಿಯಲ್ ಆರ್ಟ್ಸ್ಎಂದು ಕರೆಯಲ್ಪಡುವ ಸಮರ ಕಲೆಗಳನ್ನು ಸೂಚಿಸುವ ಒಂದು 15ನೇ ಶತಮಾನದ ಯೂರೋಪೀಯ ಪದದಿಂದ ಬರುತ್ತದೆ.ಆದರೆ ಸಮರಕಲೆಯ ಇತಿಹಾಸ ಭಾರತದಲ್ಲಿ ವೇದಗಳ ಕಾಲದಿಂದಲೇ ಸಮರಕಲೆಯ ಇತಿಹಾಸ ಪ್ರಾಂಭವಾಗುತ್ತದೆ,ಹಿಂದುಗಳ ಪವಿತ್ರ ಗ್ರಂಥವಾಗಿರುವ ಯಜುರ್ವೇದದಲ್ಲಿ ಯುದ್ಧಕಲೆಯ ಸಂಪೂರ್ಣ ವಿವರಣೆಯಿದೆ. ಭಾರತ ಸಮರಕಲೆಗಳ ತವರೂರು. ಭಾರತದಲ್ಲೆ ಮೂಲ ಹುಡುಕಿದರೆ ನಮ್ಮಕಣ್ಣಿಗೆ ದಕ್ಷಿಣ ಭಾರತ ಎದ್ದು ಕಾಣುತ್ತದೆ.ಶ್ರೀ ಯಲ್ಲಮ್ಮತಾಯಿಯ ಪುತ್ರನಿಂದ ಹುಟ್ಟಿದ ಕಲರಿಪಯಟ್ಟು. ಭೋಧಿಧರ್ಮರಿಂದ ಚೀನಾ,ಜಪಾನ ದೇಶಕ್ಕೆ ಪಸರಿಸಿತು. ಕರುನಾಡು ಮೂಲ ಎಂಬ ಮಾತು ನಮಗೆ ಪರುಶುರಾಮರ ಬಗ್ಗೆ ತಿಳಿದುಕೊಂಡಾಗ ತಿಳಿಯುವುದು. ಈ ನಾಡಿನಕಲೆ ಹೊಸದಾಗಿ ಆಧುನಿಕ ರೂಪವನ್ನು ಮಂಜುನಾಥ ಬೆಳ್ಳಿಕುಪ್ಪಿ ಮತ್ತು ಅವನ ಸ್ನೇಹಿತರಿಂದ ಕೀಪುಮಾ ಸಮರಕಲೆ ಎಂಬ ಹೊಸ ಕಲೆ ಕರುನಾಡಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರಮಿಸುತ್ತಿದೆ .ಈ ಕಲೆಯನ್ನು ಅಭ್ಯಾಸ ಮಾಡುವವನು ಸಮರ ಕಲಾವಿದ ಮಾರ್ಷಲ್ ಆರ್ಟಿಸ್ಟ್ ಎಂಬುದಾಗಿ ಕರೆಯಲ್ಪಡುತ್ತಾನೆ.
1920 ರ ದಶಕದಲ್ಲಿ ಮೂಲತಃ ರೂಪಿಸಿದಾಗ, ಮಾರ್ಷಿಯಲ್ ಆರ್ಟ್ಸ್ ಎಂಬ ಪದ ನಿರ್ದಿಷ್ಟವಾಗಿ ಏಷಿಯನ್ ಫೈಟಿಂಗ್ ಸ್ಟೈಲ್ಸ್ ಗೇ ಸೂಚಿಸಲ್ಪಡುತ್ತಿತ್ತು, ಅದೂ ವಿಶೇಷವಾಗಿ, ಪೂರ್ವ ಏಷಿಯಾದಲ್ಲಿ ಹುಟ್ಟಿದಂಥ ಕಾದಾಟ ಪದ್ಧತಿಗಳಿಗೆ. ಆದಾಗ್ಯೂ, ಈ ಪದವನ್ನು ಅದರ ಸಾಹಿತ್ಯಕ ಅರ್ಥದಲ್ಲಿಯೂ ಹಾಗೂ ಅದರ ನಂತರದ ಬಳಕೆಯ ಆಧಾರದಲ್ಲಿಯೂ ಅದನ್ನು ಯಾವುದೇ ಒಂದು ಸಂಜ್ಞಾಕೃತ ಕಾದಾಟ ಪದ್ಧತಿಗೆ, ಅದರ ಹುಟ್ಟಿಗೆ ಸಂಬಂಧವಿಲ್ಲದಂತೆ, ಸೂಚಿಸುವುದಾಗಿ ತಿಳಿಯಬಹುದು.
ಯೂರೋಪ್ ಸಮರ ಕಲೆಗಳ ಹಲವು ವಿಸ್ತೃತ ಪದ್ಧತಿಗಳಿಗೆ ತವರೂರಾಗಿದೆ - ಜೀವಂತ ಸಂಪ್ರದಯಗಳಿಗೂ(ಉದಾಹರಣೆಗೆ, ಜೋಗೋ ದೊ ಪೌ ಮತ್ತು ಇತರ ಕೋಲು ಮತ್ತು ಕತ್ತಿ ಫೆನ್ಸಿಂಗ್ ಮತ್ತು ಹಡಗಿನವರು ಮತ್ತು ಬೀದಿ ಕಾದಾಟಗಾರರು ಬೆಳೆಸಿದ ಫ್ರೆಂಚ್ ಕಿಕ್ಂಗ್ ಶೈಲಿಯಾದ ಸವಾಟೆ) ಹಾಗೂ ಐತಿಹಾಸಿಕ ಯುರೋಪಿಯನ್ ಮಾರ್ಷಿಯಲ್ ಆರ್ಟ್ಸ್ಗಳ ಹಳೆಯ ಪದ್ಧತಿಗಳಿಗೂ (ಇವುಗಳಲ್ಲಿ ಹಲವಾರು ಈಗ ಮತ್ತೆ ಪುನರುಜ್ಜೀವಿತಗೊಳಿಸಲ್ಪಡುತ್ತಿವೆ). ಅಮೇರಿಕಾದಲ್ಲಿ, ನೇಟೀವ್ ಅಮೇರಿಕನ್ನರುವ್ರೆಸ್ಲಿಂಗ್ ಸೇರಿದಂತೆ ತೆರೆದ ಕೈಗಳ ಸಮರ ಕಲೆಗಳ ಸಂಪ್ರದಾಯಗಳನ್ನು ಹೊಂದಿದ್ದಾರೆ, ಮತ್ತು ಹವಾಯಿಯನ್ಸ್ ಚಿಕ್ಕ ಮತ್ತು ದೊಡ್ಡ ಕೀಲು ಮಾನಿಪುಲೇಷನ್ ಗಳನ್ನು ತೋರುವ ಕಲೆಗಳನ್ನು ಐತಿಹಾಸಿಕವಾಗಿ ಅಭ್ಯಸಿಸಿದ್ದಾರೆ. ಆಫ್ರಿಕನ್ ಗುಲಾಮರು ಬ್ರೆಜಿಲ್ ನಲ್ಲಿ ತಾವು ಆಫ್ರಿಕಾದಿಂದ ತಂದಿದ್ದ ಕೌಶಲ್ಯಗಳನ್ನು ಆಧರಿಸಿ ಬೆಳೆಸಿದ ಕಾಪೊಯೈರ ದ ಅಥ್ಲೆಟಿಕ್ ಚಾಲನಗಳಲ್ಲಿ ಉಗಮಸ್ಥಾನಗಳ ಒಂದು ಮಿಶ್ರಣ ಕಾಣಬರುತ್ತದೆ.
ಪ್ರತಿಯೊಂದು ಶೈಲಿಗೆ ತನ್ನದೇ ಆದ ವಿಶಿಷ್ಟ ಆಯಾಮಗಳಿದ್ದು, ಅದನ್ನು ಇತರ ಸಮರ ಕಲೆಗಳಿಗಿಂತ ಭಿನ್ನವಾಗಿಸುತ್ತವೆಯಾದರೂ, ಎಲ್ಲವಕ್ಕೂ ಸಾಮಾನ್ಯವಾದ ಒಂದು ಅಂಶವೆಂದರೆ ಕಾದಾಟದ ಕೌಶಲ್ಯಗಳ ಸಿಸ್ಟಮೈಸೇಷನ್. ತರಬೇತಿಯ ವಿಧಾನಗಳು ಬೇರೆಬೇರೆ ರೀತಿಯಾಗಿದ್ದು, ಸ್ಪಾರಿಂಗ್(ಸಿಮುಲೇಟೆಡ್ ಕಾಂಬಾಟ್)ಅಥವಾ ಸ್ವರೂಪಗಳು ಅಥವಾ ಕಟ ಎಂದು ಕರೆಯಲ್ಪಡುವ ಕೌಶಲಗಳ ಫಾರ್ಮಲ್ ಸೆಟ್ಟುಗಳು ಅಥವಾ ರುಟೀನ್ ಗಳನ್ನು ಸೇರಿರುತ್ತವೆ. ಸ್ವರೂಪಗಳು ವಿಶೇಷವಾಗಿ ಏಷಿಯನ್ ಮತ್ತು ಏಷಿಯನ್ ಸಂಜಾತ ಸಮರ ಕಲೆಗಳಲ್ಲಿ ಸಾಮಾನ್ಯವಾಗಿವೆ.[1]