RFID (ಆರ್ಎಫ್ಐಡಿ)
From Wikipedia, the free encyclopedia
Expression error: Unexpected < operator.
ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ. ವಿಕೀಕರಣದ ನಂತರ ಈ ಟೆಂಪ್ಲೇಟನ್ನು ತೆಗೆದುಹಾಕಿ. |
ರೇಡಿಯೊ ತರಂಗಾಂತರಗಳನ್ನು ಗುರುತಿಸಿ ಪತ್ತೆ ಹಚ್ಚಲು ಯಾವುದೇ ವಸ್ತು, ಪ್ರಾಣಿ ಅಥವಾ ವ್ಯಕ್ತಿಯೊಳಗೆ ಅಳವಡಿಸಿದ 'RFID ಟ್ಯಾಗ್' ಉಪಕರಣಕ್ಕೆ ರೇಡಿಯೊ-ಫ್ರೀಕ್ವೆನ್ಸಿ ಗುರುತಿಸುವಿಕೆ ಅಥವಾ ಅವುಗಳ ಜಾಡನ್ನು ಕಂಡು ಹಿಡಿಯುವುದು (RFID) ಎನ್ನಲಾಗಿದೆ. ಕೆಲವು ಟ್ಯಾಗ್ಗಳನ್ನು ಹಲವು ಮೀಟರ್ಗಳ ದೂರದಿಂದ, ಪತ್ತೆಹಚ್ಚುವವರ ದೃಷ್ಟಿಯಾಚೆಗಿನ ಅಂತರದಲ್ಲಿಯೂ ಕಂಡುಹಿಡಿಯಬಹುದು. ಹಲವು RFID ಟ್ಯಾಗ್ಗಳು ಕನಿಷ್ಠ ಪಕ್ಷ ಎರಡು ಭಾಗಗಳನ್ನು ಹೊಂದಿವೆ. ಒಂದು ಭಾಗವು ಮಾಹಿತಿ ಶೇಖರಿಸಿ ಸಂಸ್ಕರಿಸುವ ಇಂಟೆಗ್ರೇಟೆಡ್ ಸರ್ಕ್ಯೂಟ್ ಆಗಿದೆ. ಇದು (RF) ರೇಡಿಯೊ-ಫ್ರೀಕ್ವೆನ್ಸಿ ಸಂಕೇತದ ಮಾಡುಲೇಟ್ ಮತ್ತು ಡಿಮಾಡುಲೇಟ್(ಶಬ್ದಗಳ ಹೊಂದಾಣಿಕೆ) ಮಾಡುವುದು; ಅಲ್ಲದೇ ಇದಕ್ಕೆ ಸಂಬಂಧಿಸಿದ ವಿಶಿಷ್ಟ ಕಾರ್ಯಚಟುವಟಿಕೆಗಳನ್ನು ನಡೆಸುತ್ತದೆ. ಸಂಕೇತಗಳ ಗ್ರಹಿಸಲು ಹಾಗೂ ಪ್ರೇಷಿಸಲು(ಬೇರೆಡೆ ವರ್ಗಾಯಿಸಲು ಇರುವ) ಆಂಟೆನಾ(ಸ್ಪರ್ಶ ತಂತು) ಎರಡನೆಯ ಭಾಗವಾಗಿದೆ. ಸಾಮಾನ್ಯವಾಗಿ ಮೂರು ತರಹದ RFID ಟ್ಯಾಗ್ಗಳಿವೆ: ಸಕ್ರಿಯ RFID ಟ್ಯಾಗ್ಗಳು ವಿದ್ಯುತ್ಕೋಶಹೊಂದಿದ್ದು ಸಂಕೇತಗಳ್ನು ಸ್ವಯಂಚಾಲಿತವಾಗಿ ಪ್ರೇಷಿಸುತ್ತವೆ. ವಿದ್ಯುತ್ಕೋಶರಹಿತ ನಿಷ್ಕ್ರಿಯ, ಜಡ RFID ಟ್ಯಾಗ್ಗಳು ; ಸಂಕೇತಗಳನ್ನು ಪ್ರೇಷಿಸಲು (ವರ್ಗಾಯಿಸಲು) ಬಾಹ್ಯ ಮೂಲಗಳ ಅಗತ್ಯವಿದೆ. ವಿದ್ಯುತ್ಕೋಶದ ನೆರವಿನಿಂದ ಜಡ (BAP) ಟ್ಯಾಗ್ಗಳನ್ನು ಸಕ್ರಿಯಗೊಳಿಸಲು ಬಾಹ್ಯ ಶಕ್ತಿ ಮೂಲಗಳ ಅಗತ್ಯವಿದೆ, ಆದರೆ ಇವುಗಳಲ್ಲಿ ಹೆಚ್ಚಿನ ವ್ಯಾಪ್ತಿ ನೀಡುವ ಉನ್ನತ ಫಾರ್ವರ್ಡ್ ಲಿಂಕ್ ನ ಕ್ಷಮತೆ ಹೊಂದಿದೆ. RFID ಹಲವು ದೈನಂದಿನ ಉಪಯೋಗಗಳನ್ನು ಹೊಂದಿದೆ. ಉದಾಹರಣೆಗೆ, ದಾಸ್ತಾನು ಗುರುತಿಸಿ ನಿರ್ವಹಿಸಿ ಕ್ಷಮತೆ ಉತ್ತಮಗೊಳಿಸಲು, ಉದ್ದಿಮೆ ಉತ್ಪಾದನೆಗಳ ಸರಬರಾಜು ಆಡಳಿತ ನಿರ್ವಹಣೆಯಲ್ಲಿ ಬಳಸಲಾಗುತ್ತದೆ.