ಜೈವಿಕತಂತ್ರಜ್ಞಾನ
From Wikipedia, the free encyclopedia
ಜೈವಿಕ ತಂತ್ರಜ್ಞಾನ ವು ಜೀವಶಾಸ್ತ್ರ, ಕೃಷಿ, ಆಹಾರ ವಿಜ್ಞಾನ ಮತ್ತು ಔಷಧ ವೈದ್ಯಶಾಸ್ತ್ರಗಳನ್ನು ಆಧರಿಸಿರುವ ಒಂದು ತಂತ್ರರ್ಜ್ಞಾನವಾಗಿದೆ. ಈ ಪದದ ಆಧುನಿಕ ಬಳಕೆಯು ಸಾಮಾನ್ಯವಾಗಿ ತಳೀಯ ಶಿಲ್ಪಶಾಸ್ತ್ರ (ಜೆನೆಟಿಕ್ ಇಂಜಿನಿಯರಿಂಗ್) ಹಾಗೂ ಜೀವಕೋಶ ಮತ್ತು ಅಂಗಾಂಶ ಕೃಷಿಕೆ (ಟಿಷ್ಯೂ ಕಲ್ಚರ್) ತಂತ್ರಜ್ಞಾನಗಳನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ಮಾನವನ ಉದ್ದೇಶಗಳ ಅನುಸಾರವಾಗಿ ಜೀವಂತ ವಸ್ತುಗಳನ್ನು ಪರಿವರ್ತಿಸಲು ಅಗತ್ಯವಿರುವ ಕಾರ್ಯವಿಧಾನಗಳ ವಿಸ್ತೃತ ಶ್ರೇಣಿ ಹಾಗೂ ಇತಿಹಾಸವನ್ನು ಈ ಪರಿಕಲ್ಪನೆಯು ಒಳಗೊಂಡಿದೆ. ಪ್ರಾಣಿಗಳ ಪಳಗಿಸುವಿಕೆ, ಗಿಡಗಳ ಕೃಷಿ ಮತ್ತು ಕೃತಕ ಆಯ್ಕೆ ಮತ್ತು ಸಂಕರೀಕರಣ ವಿಧಾನಗಳನ್ನು ಬಳಸುವ ತಳಿ ಬೆಳೆಸುವ ಕಾರ್ಯಕ್ರಮಗಳ ಮೂಲಕ ಇವುಗಳಲ್ಲಿ "ಸುಧಾರಣೆ"ಗಳನ್ನು ತರುವುದನ್ನು ಸಹ ಒಳಗೊಂಡಿದೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2009) |
ಜೈವಿಕ ತಂತ್ರಜ್ಞಾನಕ್ಕೆ ಹೋಲಿಸಿದಾಗ, ಜೀವಂತ ವಸ್ತುಗಳೊಂದಿಗಿನ ಸಂಪರ್ಕ ಮತ್ತು ಅವುಗಳನ್ನು ಬಳಸಿಕೊಳ್ಳುವಲ್ಲಿನ ಯಾಂತ್ರಿಕ ಹಾಗೂ ಉನ್ನತ ಮಟ್ಟದ ವ್ಯವಸ್ಥಾ ಮಾರ್ಗಗಳಿಗೆ ಅದು ನೀಡುವ ಹೆಚ್ಚಿನ ಒತ್ತಿನಿಂದಾಗಿ, ಜೈವಿಕ ಶಿಲ್ಪಶಾಸ್ತ್ರ (ಬಯೊ ಎಂಜಿನಿಯರಿಂಗ್) ಕ್ಷೇತ್ರವನ್ನು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಂದು ಕ್ಷೇತ್ರ ಎಂದು ಸಾರ್ವತ್ರಿಕವಾಗಿ ಭಾವಿಸಲಾಗಿದೆ. ವಿಶ್ವ ಸಂಸ್ಥೆಯ ಜೀವವಿಜ್ಞಾನದ ವೈವಿಧ್ಯಗಳ ಕುರಿತು ಸಮ್ಮೇಳನದ ಪ್ರಕಾರ ಜೈವಿಕ ತಂತ್ರಜ್ಞಾನದ ವ್ಯಾಖ್ಯಾನವು ಹೀಗಿದೆ:[1]
"Any technological application that uses biological systems, dead organisms, or derivatives thereof, to make or modify products or processes for specific use."
ಜೈವಿಕ ತಂತ್ರಜ್ಞಾನ ಶುದ್ಧ ಜೈವಿಕ ವಿಜ್ಞಾನಗಳನ್ನು ಆಧರಿಸಿದೆ: ತಳೀಯ ಶಾಸ್ತ್ರ, ಸೂಕ್ಷ್ಮಜೀವ ವಿಜ್ಞಾನ, ಪ್ರಾಣಿ ಜೀವಕೋಶ ಕೃಷಿ, ಅಣು ಜೀವವಿಜ್ಞಾನ, ಜೀವ ರಸಾಯನ ವಿಜ್ಞಾನ, ಭ್ರೂಣಶಾಸ್ತ್ರ, ಜೀವಕೋಶ ಜೀವವಿಜ್ಞಾನ,. ಇವಲ್ಲದೆ, ಕೆಲವೊಮ್ಮೆ ಜೀವಶಾಸ್ತ್ರಗಳ ಹೊರಗಿನ ಕ್ಷೇತ್ರಗಳಾದ ರಾಸಾಯನಿಕ ಶಿಲ್ಪಶಾಸ್ತ್ರ, ಜೀವಪ್ರಕ್ರಿಯೆ ಶಿಲ್ಪಶಾಸ್ತ್ರ, ಮಾಹಿತಿ ತಂತ್ರಜ್ಞಾನ ಮತ್ತು ಜೀವಯಂತ್ರಮಾನವಶಾಸ್ತ್ರ (ಬಯೊರೊಬೊಟಿಕ್ಸ್) ಗಳಲ್ಲಿನ ಜ್ಞಾನ ಮತ್ತು ರೀತಿಗಳನ್ನೂ ಅವಲಂಬಿಸಿದೆ. ಇದಕ್ಕೆ ಪ್ರತಿಯಾಗಿ, ಅಣು ಪರಿಸರಶಾಸ್ತ್ರದಂತಹ ಪರಿಕಲ್ಪನೆಗಳೂ ಸೇರಿದಂತೆ, ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳ ಉದ್ದಿಮೆ ಎಂದು ಸಾಮಾನ್ಯವಾಗಿ ಭಾವಿಸಲಾಗಿರುವ ಕ್ಷೇತ್ರದ ಮೂಲಕ ಬೆಳೆಸಲಾದ ವಿಧಾನಗಳ ಮೇಲೆ ಆಧುನಿಕ ಜೈವಿಕ ವಿಜ್ಞಾನಗಳು ಅತ್ಯಂತ ನಿಕಟವಾಗಿ ಹೆಣೆದುಕೊಂಡಿವೆ ಮತ್ತು ಅವಲಂಬಿಸಿವೆ.