ಹಿಜರಿ ಕ್ಯಾಲೆಂಡರ್
ಸಾಮಾನ್ಯವಾಗಿ ಮುಸ್ಲಿಮರು ಬಳಸುವ ಚಾಂದ್ರಮಾನ ಕ್ಯಾಲೆಂಡರ್ / From Wikipedia, the free encyclopedia
ಹಿಜರಿ ಕ್ಯಾಲೆಂಡರ್ (ಅರಬ್ಬಿ: التقويم الهجري) — 12 ಚಾಂದ್ರಮಾನ ತಿಂಗಳುಗಳನ್ನು ಮತ್ತು ವರ್ಷದಲ್ಲಿ 354 ಅಥವಾ 355 ದಿನಗಳನ್ನು ಹೊಂದಿರುವ ಕ್ಯಾಲೆಂಡರ್. ಇದನ್ನು ಇಸ್ಲಾಮೀ ಕ್ಯಾಲೆಂಡರ್; (ಅರಬ್ಬಿ: التقويم الإسلامي) ಅಥವಾ ಅರಬ್ಬೀ ಕ್ಯಾಲೆಂಡರ್; (ಅರಬ್ಬಿ: التقويم العربي) ಎಂದು ಕೂಡ ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಮುಸಲ್ಮಾನರು ರಮದಾನ್, ನಾಲ್ಕು ಪವಿತ್ರ ತಿಂಗಳುಗಳು, ಹಜ್ ಯಾತ್ರೆಯ ತಿಂಗಳುಗಳು, ಹಬ್ಬಗಳು, ಇದ್ದತ್, ಝಕಾತ್ ಕೊಡಬೇಕಾದ ಸಮಯ ಮುಂತಾದವುಗಳನ್ನು ನಿರ್ಧರಿಸಲು ಈ ಕ್ಯಾಲೆಂಡರನ್ನು ಬಳಸುತ್ತಾರೆ.[1]