![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9f/Ooids%252C_Joulter_Cays%252C_Bahamas.jpg/640px-Ooids%252C_Joulter_Cays%252C_Bahamas.jpg&w=640&q=50)
ಅಂಡಾಶ್ಮಗಳು
From Wikipedia, the free encyclopedia
ಅಂಡಾಶ್ಮಗಳು ಊಲೈಟುಗಳೆಂಬ[1] ಹೆಸರುಳ್ಳ ಇವು ಸಣ್ಣ ಸಣ್ಣ ದುಂಡು ಕಣಗಳು ಒಟ್ಟುಗೂಡಿ ಆಗಿರುವ ಒಂದು ಬಗೆಯ ಜಲಶಿಲೆ/ಸುಣ್ಣಕಲ್ಲು.[2] ಸಾಮಾನ್ಯವಾಗಿ ಇವುಗಳ ವ್ಯಾಸ 1 ಮಿಮೀ. ಇವುಗಳ ಕೇಂದ್ರದಲ್ಲಿ ಗುರುತಿಸಬಹುದಾದೊಂದು ನ್ಯೂಕ್ಲಿಯಸ್ ಇರುತ್ತದೆ. ಒಂದು ಅವಸಾದನದಲ್ಲಿ ಇವು ಬಹಳವಾಗಿದ್ದರೆ ಅದಕ್ಕೊಂದು ವಿಶಿಷ್ಟ ಹೆಣಿಗೆಯನ್ನು ಕೊಡುತ್ತವೆ. ಏಕಕೇಂದ್ರೀಯಪದರಗಳಿಲ್ಲದ ಅಥವಾ ನ್ಯೂಕ್ಲಿಯಸ್ ಇಲ್ಲದ ಇವುಗಳಂಥ ಬೇರೆಯ ಕಲ್ಲುಗಳನ್ನು ಮತ್ತು ಕೆಲವು ಫೊರ್ಯಾಮಿನಿಫೆರಾಗಳನ್ನು ಅಂಡಾಶ್ಮಗಳೆಂದು ಭ್ರಮಿಸುವುದುಂಟು.
![Thumb image](http://upload.wikimedia.org/wikipedia/commons/thumb/9/9f/Ooids%2C_Joulter_Cays%2C_Bahamas.jpg/640px-Ooids%2C_Joulter_Cays%2C_Bahamas.jpg)
![Thumb image](http://upload.wikimedia.org/wikipedia/commons/thumb/c/cd/OoidSurface01.jpg/640px-OoidSurface01.jpg)
![Thumb image](http://upload.wikimedia.org/wikipedia/commons/thumb/7/76/CarmelOoids.jpg/640px-CarmelOoids.jpg)