ಅಟ್ಲಾಂಟಾ, ಜಾರ್ಜಿಯಾ
From Wikipedia, the free encyclopedia
ಅಟ್ಲಾಂಟಾ (pronounced /ətˈlæntə/ ಅಥವಾ /ætˈlæntə/) ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯ ಜಾರ್ಜಿಯಾ ರಾಜ್ಯದ ರಾಜಧಾನಿ ಹಾಗೂ ಅತಿಹೆಚ್ಚು ಜನನಿಬಿಡ ರಾಜ್ಯವಾಗಿದೆ. ಇಸವಿ ೨೦೦೮ರಲ್ಲಿ, ೫೪೦,೯೨೧ರಷ್ಟು ಜನಸಂಖ್ಯೆ ಹೊಂದಿದ್ದ ಅಟ್ಲಾಂಟಾ ಅಮೆರಿಕಾ ಸಂಯುಕ್ತ ಸಂಸ್ಥಾನದ ಮುವತ್ತಮೂರನೆಯ ಅತಿ ದೊಡ್ಡ ನಗರ ಎನ್ನಲಾಗಿತ್ತು. ಅಟ್ಲಾಂಟಾದ ಮಹಾನಗರ ಕ್ಷೇತ್ರವನ್ನು ಅಧಿಕೃತವಾಗಿ ಅಟ್ಲಾಂಟಾ-ಸ್ಯಾಂಡಿ ಸ್ಪ್ರಿಂಗ್ಸ್-ಮ್ಯಾರಿಯೆಟಾ, GA MSA ಎನ್ನಲಾಗಿದೆ. ಇದನ್ನು ಸಾಮಾನ್ಯವಾಗಿ ಅಟ್ಲಾಂಟಾ ಮಹಾನಗರ ಎನ್ನಲಾಗುತ್ತಿದೆ. ಇದು ಅಮೆರಿಕಾ ದೇಶದಲ್ಲಿ ಒಂಬತ್ತನೆಯ ಅತಿ ದೊಡ್ಡ ಮಹಾನಗರ ವ್ಯಾಪ್ತಿಯ ಪ್ರದೇಶವಾಗಿದ್ದು, ಸುಮಾರು ೫.೫ ದಶಲಕ್ಷ ಜನರು ವಾಸಿಸುತ್ತಾರೆ. ಅದಲ್ಲದೇ, ಅಟ್ಲಾಂಟಾ ಕಂಬೈನ್ಡ್ ಸ್ಟ್ಯಾಟಿಸ್ಟಿಕಲ್ ಏರಿಯಾಯು ಸುಮಾರು ಆರು ದಶಲಕ್ಷ ಜನಸಂಖ್ಯೆ ಹೊಂದಿದೆ. ಇದರಿಂದಾಗಿ ಇದು ಅಮೆರಿಕಾ ದೇಶದ ಅಗ್ನೇಯ ವಲಯದ ಅತಿಹೆಚ್ಚು ಜನನಿಬಿಡ ಮಹಾನಗರವಾಗಿದೆ. ಇದು ಪಿಯೆಡ್ಮಂಟ್ ಅಟ್ಲ್ಯಾಂಟಿಕ್ ಮೆಗಾ ರೀಜನ್ ಎನ್ನಲಾದ, ವೇಗವಾಗಿ ಬೆಳೆಯುತ್ತಿರುವ ಬೃಹನ್ನಗರದ ಕೇಂದ್ರಬಿಂದುವಾಗಿದೆ. ಸನ್ ಬೆಲ್ಟ್ನಲ್ಲಿರುವ ಹಲವು ಪ್ರದೇಶಗಳಂತೆ, ಅಟ್ಲಾಂಟಾ ವಲಯವು ಹಿಂದಿನ ದಶಕದಲ್ಲಿ ತ್ವರಿತ ಬೆಳವಣಿಗೆ ಕಂಡಿದೆ. ಇಸವಿ ೨೦೦೦ರಿಂದ ೨೦೦೮ರ ತನಕ ಸುಮಾರು ೧.೧೩ ದಶಲಕ್ಕಿಂತಲೂ ಅಧಿಕ ಜನವಸತಿ ಇತ್ತು. ಡಲ್ಲಾಸ್-ಫೋರ್ಟ್ ವರ್ತ್ ಮೆಟ್ರೊಪ್ಲೆಕ್ಸ್ ನಂತರ ಇದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಎರಡನೆಯ ಅತಿ-ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ.[3] ಇಸವಿ ೨೦೦೮ರಲ್ಲಿಯೇ, ಅಟ್ಲಾಂಟಾ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಎಂಟನೆಯ ಅತಿ-ದೊಡ್ಡ ಮಾಧ್ಯಮ ಮಾರುಕಟ್ಟೆಯಾಯಿತು. ಇದರ ಮಹಾನಗರ ಕ್ಷೇತ್ರದಲ್ಲಿ ೨,೩೮೭,೫೨೦ ನಿವಾಸದ ಮನೆಗಳಿದ್ದವು.[4] ಅಟ್ಲಾಂಟಾ 1996ರ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯನಾಗಿ ಪ್ರಮುಖ ಪಾತ್ರ ವಹಿಸಿತು. ಪ್ರಮುಖ ವಾಣಿಜ್ಯ ಮತ್ತು ಸಾರಿಗೆಯ ಕೇಂದ್ರಬಿಂದು ಎನ್ನಲಾದ ಅಟ್ಲಾಂಟಾ, ದಿ ಕೋಕಾ ಕೋಲಾ ಕಂಪೆನಿ, ಜಾರ್ಜಿಯಾ ಪೆಸಿಫಿಕ್, AT&T ಮೊಬಿಲಿಟಿ, CNN, ಡೆಲ್ಟಾ ಏರ್ಲೈನ್ಸ್ ಹಾಗೂ ಟರ್ನರ್ ಬ್ರಾಡ್ಕ್ಯಾಸ್ಟಿಂಗ್ ಸೇರಿದಂತೆ, ಹಲವು ಉದ್ದಿಮೆಗಳ ಪ್ರಧಾನ ಕಾರ್ಯಾಲಯಗಳು ಅಟ್ಲಾಂಟಾದಲ್ಲಿವೆ. ಅಟ್ಲಾಂಟಾ ನಗರ ವಲಯದ ಒಳಗಿರುವಂತಹ ಫಾರ್ಚೂನ್ 500 ಸಂಸ್ಥೆಯ ಉದ್ಯಮಗಳನ್ನು ಹೊಂದಿರುವ ನಾಲ್ಕನೆಯ ಅತಿ ಹೆಚ್ಚು ನಿಬಿಡತೆಯ ಪ್ರದೇಶವಾಗಿದೆ. (ಆದರೂ UPS, ಹೋಂ ಡಿಪೊ ಹಾಗೂ ನ್ಯೂವೆಲ್ ರಬರ್ಮಯ್ಡ್ ಉದ್ದಿಮೆಗಳು ನಗರ ವಲಯದಲ್ಲಿಲ್ಲ). ಫಾರ್ಚೂನ್ 1000 ಉದ್ದಿಮೆಗಳಲ್ಲಿ ೭೫%ರಷ್ಟು ಅಟ್ಲಾಂಟಾದ ಮಹಾನಗರ ಪ್ರದೇಶದಲ್ಲಿವೆ. ಅಟ್ಲಾಂಟಾದ $೨೭೦ ಶತಕೋಟಿ ಮೊತ್ತದಷ್ಟು ಸಮಗ್ರ ಮಹಾನಗರ ಆದಾಯ ಹೊಂದಿದೆ. ಇದರದು ಜಾರ್ಜಿಯನ್ ಆರ್ಥಿಕತೆಯ ೨/೩ಕ್ಕಿಂತಲೂ ಹೆಚ್ಚು ಪಾಲಾಗಿದೆ. ಹಾರ್ಟ್ಸ್ಫೀಲ್ಡ್ ಜ್ಯಾಕ್ಸನ್ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅಟ್ಲಾಂಟಾ ವಾಣಿಜ್ಯ ಕ್ಷೇತ್ರದಿಂದ ಏಳು ಮೈಲ್ ದೂರದ ದಕ್ಷಿಣಭಾಗದಲ್ಲಿದೆ. ಇದು ವಿಶ್ವದ ಅತಿ ನಿಬಿಡ ವಿಮಾನ ನಿಲ್ದಾಣವಾಗಿದ್ದು, ನಗರದ ಏಕೈಕ ಪ್ರಮುಖ ವಿಮಾನ ನಿಲ್ದಾಣವೂ ಆಗಿದೆ.[5][6] ಫುಲ್ಟನ್ ಕೌಂಟಿಯ ಆಡಳಿತ-ಕಾರ್ಯಾಲಯವು ಅಟ್ಲಾಂಟಾದಲ್ಲಿದೆ. ಅಟ್ಲಾಂಟಾ ಜಾರ್ಜಿಯಾ ರಾಜ್ಯ ಸರ್ಕಾರದ ಕಾರ್ಯಾಲಯಕ್ಕೆ ಐದನೆಯ ಸ್ಥಳವಾಗಿದೆ. ಅಟ್ಲಾಂಟಾ ನಗರದ ಸಾಂಸ್ಥಿಕ ಸರಹದ್ದಿನ ಸಣ್ಣ ಭಾಗವು ಡೆಕಾಲ್ಬ್ ಕೌಂಟಿಯೊಳಗೆ ಚಾಚುತ್ತದೆ. ನಗರದ ನಿವಾಸಿಗಳನ್ನು ಅಟ್ಲಾಂಟನ್ನರು ಎನ್ನಲಾಗುತ್ತದೆ.[7]
ಅಟ್ಲಾಂಟಾ, ಜಾರ್ಜಿಯಾ | |
---|---|
Nickname(s): | |
Motto: Resurgens (English translation: Rising Again) | |
Country | United States |
State | Georgia |
County | Fulton , DeKalb & Clayton |
Terminus | 1837 |
Marthasville | 1843 |
City of Atlanta | 1847 |
Government | |
• Mayor | Kasim Reed (D) |
Area | |
• ನಗರ | ೧೩೨.೪ sq mi (೩೪೩.೦ km2) |
• Land | ೧೩೧.೮ sq mi (೩೪೧.೨ km2) |
• Water | ೦.೭ sq mi (೧.೮ km2) |
• Urban | ೧,೯೬೨.೯ sq mi (೫೦೮೪ km2) |
• Metro | ೮,೩೭೬ sq mi (೨೧೬೯೦ km2) |
Elevation | ೭೩೮−೧,೦೫೦ ft (೨೨೫−೩೨೦ m) |
Population (est. 2008) | |
• ನಗರ | ೫,೪೦,೯೨೧ (೩೩rd) |
• Density | ೪೦೧೮/sq mi (೧,೫೫೧.೫/km2) |
• Urban | ೩೪,೯೯,೮೪೦ |
• Metro | ೫೪,೭೫,೨೧೩ (೯th) |
• Metro density | ೬೩೦/sq mi (೨೪೩/km2) |
• Demonym | Atlantan |
Time zone | UTC-5 (EST) |
• Summer (DST) | UTC-4 (EDT) |
ZIP codes | 30060, 30301-30322, 30324-30334, 30336-30350, 30353 |
Area code(s) | 404, 470, 678, 770 |
FIPS code | 13-04000GR2 |
GNIS feature ID | 0351615GR3 |
Website | atlantaga.gov |