ಅಡಿಕೆ
ಅಡಿಕೆ ಒಂದು ತೋಟಗಾರಿಕ ಬೆಳೆ. / From Wikipedia, the free encyclopedia
ಅಡಿಕೆ (ಸಂಸ್ಕೃತ:ಪೂಗ, ಮರಾಠಿ ಮತ್ತು ಗುಜರಾತಿ: ಸುಪಾರಿ) ಒಂದು ತೋಟಗಾರಿಕ ಬೆಳೆ. ಇದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ.[ಮಲೆನಾಡು ಅಡಿಕೆ 1]
Quick Facts ಅಡಿಕೆ, Scientific classification ...
ಅಡಿಕೆ | |
---|---|
Fruiting specimen | |
Scientific classification | |
ಸಾಮ್ರಾಜ್ಯ: | plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Monocots |
(ಶ್ರೇಣಿಯಿಲ್ಲದ್ದು): | Commelinids |
ಗಣ: | ಅರೆಕಾಲೆಸ್ |
ಕುಟುಂಬ: | ಅರೆಕಾಸಿಯೆಸಿ |
ಕುಲ: | ಅರೆಕಾ |
ಪ್ರಜಾತಿ: | A. catechu |
Binomial name | |
ಅರೆಕಾ ಕಾಟೇಚು L.[1] | |
Close