ಅನಿಲ
ದ್ರವ್ಯದ ಮೂರು ಸ್ಥಿತಿಗಳಲ್ಲಿ ಒಂದು / From Wikipedia, the free encyclopedia
ಅನಿಲ ದ್ರವ್ಯಗಳ ನಾಲ್ಕು ಸ್ಥಿತಿಗಳಲ್ಲಿ ಒಂದು .ಉಳಿದ ಮೂರು ಘನ,ದ್ರವ ಮತ್ತು ಪ್ಲಾಸ್ಮಾ.ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:ನಿಯಾನ್) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:ಆಮ್ಲಜನಕ) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ ಮಿಶ್ರಣವು ವಾಯುವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.
ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ ತಾಪಮಾನದ ಗಡಿಯನ್ನು ಒದಗಿಸುತ್ತದೆ.