ಅಮ್ಮೊನೈಟ್
From Wikipedia, the free encyclopedia
ಅಮ್ಮೊನೈಟ್ ಈಗ ನಿರ್ವಂಶವಾಗಿರುವ ಪ್ರಾಣಿ. ಸಾಲಿಗ್ರಾಮ ಕ್ರಿಮಿ ಎಂಬ ಹೆಸರೂ ಇದೆ. ಮನೆಯಲ್ಲಿ ಪೂಜೆಗೆ ಉಪಯೋಗಿಸುವ ಸಾಲಿಗ್ರಾಮಗಳು ಈ ಕ್ರಿಮಿಯ ಚಿಪ್ಪುಗಳ ಅವಶೇಷಗಳು[1] . ಪಳೆಯುಳಿಕೆಗಳು ತಿರುಚಿನಾಪಳ್ಳಿಯಿಂದ ಅನತಿದೂರದಲ್ಲಿರುವ ಅರಿಯಲೂರು ಬಳಿ ದೊರೆತಿವೆ. ಇವು ಮಧ್ಯಜೀವಕಲ್ಪದಲ್ಲಿ ಮಾತ್ರ ಜೀವಿಸಿದ್ದು ಹೇರಳವಾಗಿ ಸರ್ವತ್ರ ಕಾಣಬರುತ್ತಿದ್ದುದರಿಂದ ಮಧ್ಯಜೀವಕಲ್ಪವನ್ನು ಅಮ್ಮೊನೈಟ್ಗಳ ಕಲ್ಪವೆಂದು ಕರೆಯಲಾಗಿದೆ. ಮಧ್ಯಜೀವಕಲ್ಪದಲ್ಲಿ ಸರೀಸೃಪಗಳನ್ನು ಬಿಟ್ಟರೆ, ಇವೇ ಅತ್ಯಂತ ಪ್ರಭಾವಶಾಲಿ ಪ್ರಾಣಿಗಳು. ಅಲ್ಲದೆ ಮಧ್ಯಜೀವಕಲ್ಪದ ಶಿಲಾಸ್ತೋಮಗಳ ವಿವರವಾದ ವರ್ಗೀಕರಣಕ್ಕೆ ಇವೇ ಆಧಾರವಾಗಿವೆಯಲ್ಲದೆ ಜೀವವಿಕಾಸದ ಅನೇಕ ನಿಯಮಗಳನ್ನು ಉಲ್ಲೇಖಿಸಲು ಸಹಕಾರಿಯಾಗಿವೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |