ಅರ್ಧನಾರೀಶ್ವರ ಪರಿಕಲ್ಪನೆಯೇ ವಿಶಿಷ್ಟವಾದುದು. ಅರ್ಧಭಾಗ ಪಾರ್ವತಿ, ಅರ್ಧಭಾಗ ಈಶ್ವರನೂ ಇರುವ ಮೂರ್ತಿ. ಶಿವನೂ ಶಕ್ತಿಯೂ ಅವಿನಾಭಾವದಿಂದ ಒಂದೇ ದೇಹದಲ್ಲಿರುತ್ತಾರೆಂದೂ ಶಿವನ ವಾಮಾರ್ಧವೇ ಪಾರ್ವತಿಯೆಂಬ ಕಲ್ಪನೆಯಿದೆ. ಗೌರಿ ತನ್ನ ಸ್ಥಾನ ಬೇರೆಲ್ಲರಿಗಿಂತ ವೈಶಿಷ್ಟ್ಯತೆಯಿಂದ ಕೂಡಿರಬೇಕೆಂಬ ಕಾರಣಕ್ಕಾಗಿ ಅರ್ಧನಾರೀಶ್ವರ ಸಂಸ್ಕೃತಿ ರೂಪಿತವಾಗಿದೆ.

Quick Facts ಅರ್ಧನಾರೀಶ್ವರ, ದೇವನಾಗರಿ ...
ಅರ್ಧನಾರೀಶ್ವರ
Thumb
Ardhanarishvara
ದೇವನಾಗರಿअर्धनारीश्वर
ಸಂಸ್ಕೃತ ಲಿಪ್ಯಂತರಣArdhanārīśvara
ಸಂಲಗ್ನತೆA combined form of Shiva and Parvati
ವಾಹನNandi (usually), sometimes along with a lion
Close

ಶಿವಪುರಾಣ

ಪಾರ್ವತಿ ಶಿವನ ಅರ್ಧಭಾಗವನ್ನು ಆಕ್ರಮಿಸಿದ ಕಥೆ ಶಿವಪುರಾಣದಲ್ಲಿ ಬರುತ್ತದೆ. ಶಿವನ ಗಣಾಧಿಪತಿಯಾದ ಭೃಂಗಿ ಮೋಕ್ಷಾರ್ಥಿಯಾಗಿ ತಪಸ್ಸು ಮಾಡುವಾಗ, ಕೇವಲ ಶಿವರೂಪವನ್ನೇ ಅವಲಂಬಿಸಿ, ಪಾರ್ವತಿಯನ್ನು ಕಡೆಗಾಣಿಸಿದನೆಂದು ಪಾರ್ವತಿ ಕೋಪಗೊಂಡು ಭೃಂಗಿಯ ತೇಜಸ್ಸನ್ನು ಕುಗ್ಗಿಸಿದಳು. ಶಿವಭಕ್ತನ ಮೇಲಣ ಅಭಿಮಾನದಿಂದ ಭೃಂಗಿಗೆ ತನ್ನ ದಂಡಾಯುಧ ಕೊಡಲು ಪಾರ್ವತಿ ಇನ್ನಷ್ಟು ಕ್ರುದ್ಧಳಾಗಿ ಕೇದಾರದಲ್ಲಿ ತಪಸ್ಸು ಮಾಡಿ ಶಿವನ ಅರ್ಧಾಂಗ ಆಕ್ರಮಿಸಿಕೊಂಡಳು.

ಒಳಾರ್ಥಗಳು

  • ಸನಾತನ ಸಂಸೃತಿಯಲ್ಲಿ ಸ್ತ್ರೀಯಾದವಳು ತನ್ನ ಗಂಡನಿಗೆ ಸರಿಸಮಾನಳು ಹಾಗು ಆತ ಆಕೆಯನ್ನು ಗೌರವದಿಂದ ಕಾಣಬೇಕು ಎಂಬ ಅರ್ಥವನ್ನು ಈ ಅರ್ಧ ನಾರೀಶ್ವರ ಸಂಕೇತ ಹೇಳುತ್ತದೆ. ಪುರುಷ ಮತ್ತು ಪ್ರಕೃತಿಯ ಪರಿಪೂರ್ಣ ಸಮಾಗಮದ ಚಿಹ್ನೆಯೂ ಇದಾಗಿದೆ.[1]
  • ಸನಾತನ ಸಂಸೃತಿಯಲ್ಲಿ ಹೆಣ್ಣಿನೊಳಗೆ ಗಂಡಿನ ಗುಣಗಳು, ಗಂಡಿನೊಳಗೆ ಹೆಣ್ಣಿನ ಗುಣಗಳನ್ನು ಹೇಳುವ ಸಲುವಾಗಿ, ಇಂತಹದೊಂದು ಪರಿಕಲ್ಪನೆಯನ್ನು ರೂಪಿಸಲಾಗಿದೆಯೆಂದು ವಿಮರ್ಶಕರು ಹೇಳಿದ್ದಾರೆ. ಶಿವೆ ಶಿವನ ಹೃದಯೇಶ್ವರಿ ಎಂಬ ಕಾರಣಕ್ಕೆ ಅವಳನ್ನು ಎಡಭಾಗದಲ್ಲಿ ಅಂದರೆ ಹೃದಯಸ್ಥಾನದಲ್ಲಿ ಜಾಗ ಕೊಡಲಾಗಿದೆ.

ಫೋಟೋ ಗ್ಯಾಲರಿ

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.