ಆಟ
From Wikipedia, the free encyclopedia
ಆಟ ವೆಂದರೆ, ಸಾಮಾನ್ಯವಾಗಿ ಮನೋರಂಜನೆಗಾಗಿ ಕೈಗೊಳ್ಳುವ ಮತ್ತು ಕೆಲವು ಬಾರಿ ಶೈಕ್ಷಣಿಕ ಸಾಧನವಾಗಿ ಬಳಸಲ್ಪಡುವ ಒಂದು ರಚನಾತ್ಮಕ ಚಟುವಟಿಕೆ. ಆಟಗಳು ಸಂಭಾವನೆಗಾಗಿ ಮಾಡುವ ಕೆಲಸ ಹಾಗೂ ಕಲ್ಪನೆಗೆ ಹೆಚ್ಚು ಒತ್ತು ಕೊಡುವ ಕಲೆಗಳಿಂದ ವಿಭಿನ್ನವಾದವು. ಆದಾಗ್ಯೂ, ಭಿನ್ನತೆಯು ಸುಸ್ಪಷ್ಟವಾಗಿಲ್ಲ, ಮತ್ತು ಹಲವಾರು ಆಟಗಳು ಉದ್ಯೋಗವೆಂದೂ ಪರಿಗಣಿಸಲ್ಪಟ್ಟಿವೆ (ಪ್ರೇಕ್ಷಕ ಕ್ರೀಡೆ/ಆಟಗಳ ವೃತ್ತಿನಿರತ ಆಟಗಾರರಂತೆ) ಅಥವಾ ಕಲೆಯೆಂದು ಪರಿಗಣಿಸಲ್ಪಟ್ಟಿವೆ (ಜಿಗ್ಸಾ ಒಗಟುಗಳು ಅಥವಾ ಕಲಾತ್ಮಕ ಚೌಕಟ್ಟನ್ನು ಒಳಗೊಂಡಿರುವ ಮಹ್ಜಾಂಗ್ ಸಾಲಿಟೈರ್ ಅಥವಾ ಕೆಲವು ವಿಡಿಯೋ ಗೇಮ್ಗಳಂಥ ಆಟಗಳು).[ಸೂಕ್ತ ಉಲ್ಲೇಖನ ಬೇಕು] ಆಟಗಳ ಬಹುಮುಖ್ಯ ಭಾಗಗಳೆಂದರೆ ಗುರಿಗಳು, ನಿಯಮಗಳು, ಸವಾಲು, ಮತ್ತು ಹೊಂದಾಣಿಕೆ. ಸಾಮಾನ್ಯವಾಗಿ ಆಟಗಳು ಮಾನಸಿಕ ಅಥವಾ ದೈಹಿಕ ಉತ್ತೇಜನವನ್ನು ಒಳಗೊಂಡಿರುತ್ತವೆ, ಮತ್ತು ಹೆಚ್ಚಾಗಿ ಎರಡನ್ನೂ ಹೊಂದಿರುತ್ತವೆ. ಹಲವಾರು ಆಟಗಳು ಪ್ರಾಯೋಗಿಕ ಕೌಶಲಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ, ವ್ಯಾಯಾಮದ ಒಂದು ರೂಪವಾಗಿ ಕೆಲಸಮಾಡುತ್ತವೆ, ಅಥವಾ ಶೈಕ್ಷಣಿಕ, ವಿಡಂಬನಾತ್ಮಕ ಅಥವಾ ಮನೋವೈಜ್ಞಾನಿಕ ಪಾತ್ರವನ್ನು ನಿರ್ವಹಿಸುತ್ತವೆ. ಕ್ರಿಸ್ ಕ್ರಾಫರ್ಡ್ ಅವರ ಪ್ರಕಾರ, ಆಟಗಾರನ ಹೊಂದಾಣಿಕೆಯ ಅಗತ್ಯವು ಜಿಗ್ಸಾ ಒಗಟುಗಳು ಮತ್ತು ಸಾಲಿಟೈರ್ "ಆಟಗಳು" - ಇವುಗಳನ್ನು ಆಟಗಳ ಗುಂಪಿಗಿಂತ ಒಗಟುಗಳ ಗುಂಪಿಗೆ ಸೇರಿಸುತ್ತದೆ.[1] ಕ್ರಿ.ಪೂ ೨೬೦೦ಕ್ಕೂ[2][3] ಮೊದಲಿನಿಂದ ಆಟಗಳು ಜಾಗತಿಕ ಮಟ್ಟದಲ್ಲಿ ಮನುಷ್ಯನ ಅನುಭವದ ಭಾಗಗಳಾಗಿವೆ ಮತ್ತು ಎಲ್ಲಾ ಸಂಸ್ಕೃತಿಗಳಲ್ಲೂ ಇವೆ. The Royal Game of Ur, Senet, and Mancala are some of the oldest known games.[4]
- ಆಟ ಶಬ್ದದ ಇತರ ಬಳಕೆಗಳಿಗಾಗಿ ಆಟ (ದ್ವಂದ್ವ ನಿವಾರಣೆ) ನೋಡಿ.