ಆಟಿಸಂ
From Wikipedia, the free encyclopedia
ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ. ಸಾವಿರ ಜನರಲ್ಲಿ ಒಬ್ಬರೋ ಇಬ್ಬರಿಗೆ ಇದು ಕಂಡು ಬರುತ್ತದೆ. ೧೯೮೦ ರಿಂದ ಇಂದು ಹೆಚ್ಹಾಗಿ ಕಂಡು ಬರುತ್ತಿದೆ. ಮೊಟ್ಟ ಮೊದಲು ಶಿಶುವಿನಲ್ಲಿ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ ಕಾಣಿಸಿಕೊಳ್ಳಬಹುದು. ನಂತರ ೬ ತಿಂಗಳಲ್ಲಿ ತಾಯಿಗೆ ಸ್ವಲ್ಪ ಅನುಮಾನ ಬರಬಹುದು. ನಂತರ ಎರಡು ಇಲ್ಲವೇ ಮೂರು ವರ್ಷಗಳಲ್ಲಿ ಸ್ಪಷ್ಟವಾಗಿ ಅದನ್ನು ಗುರುತಿಸಬಹುದು.[1] ಆಟಿಸಂನಲ್ಲಿ ಒಂದೇ ಲಕ್ಷಣವಿರುವುದಿಲ್ಲ. ಅನೇಕ ಲಕ್ಷಣಗಳಿಂದ ಕೂಡಿಕೊಂಡಿರುತ್ತದೆ- ಸಾಮಾಜಿಕ ಸಂವಹನ, ನಡೆವಳಿಕೆ, ನಿರಾಸಕ್ತಿ ಮತ್ತು ಮಾಡಿದ್ದನ್ನೇ ಮಾಡುವುದು. ಊಟ ಮಾಡುವ ರೀತಿ ಸಹ ವಿಭಿನ್ನವಾಗಿರುತ್ತದೆ.
Quick Facts ಆಟಿಸಮ್, ವೈದ್ಯಕೀಯ ವಿಭಾಗಗಳು ...
Close