ಆಸ್ಟ್ರೇಲಿಯನ್ ಓಪನ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found. ಪ್ರತಿ ವರ್ಷವೂ ಆಯೋಜಿತವಾಗುವ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯನ್ ಓಪನ್ ಮೊದಲನೆಯದಾಗಿದೆ.
ಪ್ರತಿ ವರ್ಷ ಜನವರಿ ತಿಂಗಳಲ್ಲಿ, ಈ ಪಂದ್ಯಾವಳಿಯು ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದ ಮೆಲ್ಬೊರ್ನ್ ಪಾರ್ಕ್ನಲ್ಲಿ ನಡೆಯುತ್ತದೆ. ಈ ಪಂದ್ಯಾವಳಿಯು ಮೊದಲ ಬಾರಿಗೆ 1905ರಲ್ಲಿ ನಡೆಯಿತು. ಹುಲ್ಲಿನ ಅಂಕಣದಲ್ಲಿ ಕೊನೆಯ ಬಾರಿಗೆ 1987ರಲ್ಲಿ ನಡೆಯಿತು. 1988ರಿಂದ ಈ ಪಂದ್ಯಾವಳಿಯು ಮೆಲ್ಬೊರ್ನ್ ಪಾರ್ಕ್ನ ಹಾರ್ಡ್ ಕೋರ್ಟ್ಗಳಲ್ಲಿ ಆಡಲಾಗುತ್ತಿದೆ. ಮ್ಯಾಟ್ಸ್ ವಿಲಾಂಡರ್ ಹುಲ್ಲಿನ ಹಾಗೂ ಹಾರ್ಡ್ ಕೋರ್ಟ್ಗಳಲ್ಲಿ ಈ ಪಂದ್ಯಾವಳಿ ಗೆದ್ದ ಏಕೈಕ ಆಟಗಾರ.
ಇತರೆ ಎಲ್ಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಂತೆ, ಇದರಲ್ಲಿಯೂ ಸಹ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪಂದ್ಯಗಳು; ಜೊತೆಗೆ, ಪುರುಷರ, ಮಹಿಳೆಯರ ಹಾಗೂ ಮಿಶ್ರ ಡಬಲ್ಸ್, ಕಿರಿಯರ, ಗಾಲಿಕುರ್ಚಿಯ , ಪ್ರದರ್ಶನಾತ್ಮಕ ಹಾಗೂ ಪ್ರಸಿದ್ಧರ ಪಂದ್ಯಗಳನ್ನು ಇಲ್ಲಿ ಆಡಲಾಗುತ್ತವೆ. ಪಂದ್ಯಾವಳಿಯಲ್ಲಿ ಬಳಸಲಾಗುವ ಎರಡು ಪ್ರಮುಖ ಅಂಕಣಗಳೆಂದರೆ ರಾಡ್ ಲೇವರ್ ಅರೆನಾ ಹಾಗೂ ಹೈಸೆನ್ಸ್ ಅರೆನಾ. ಇವೆರಡೂ ಅಂಕಣಗಳಿಗೆ ಹಿಂತೆಗೆದುಕೊಳ್ಳುವ ಛಾವಣಿಗಳಿವೆ. ಮಳೆಯಾದಾಗ ಅಥವಾ ಭಾರೀ ಬಿಸಿಲಾದಾಗ ಅವುಗಳನ್ನು ಮುಚ್ಚಲಾಗುತ್ತದೆ. ಕೇವಲ ಎರಡೇ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳು (ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್) ಒಳಾಂಗಣ ಆಟ ವ್ಯವಸ್ಥೆ ಹೊಂದಿವೆ. ಆಸ್ಟ್ರೇಲಿಯಾದ ಬೇಸಿಗೆ ಋತುವಿನ ಮಧ್ಯದಲ್ಲಿ ನಡೆಯುವ ಕಾರಣ, ಆಸ್ಟ್ರೇಲಿಯನ್ ಓಪನ್ ಪಂದ್ಯಗಳನ್ನು ಬಹಳಷ್ಟು ಹೆಚ್ಚು ಉಷ್ಣಾಂಶದ ಸ್ಥಿತಿಗಳಲ್ಲಿ ಆಡಲಾಗುತ್ತವೆ. ಪಂದ್ಯ ನಡೆಯುವ ವೇಳೆ ಉಷ್ಣಾಂಶ ಮತ್ತು ಆರ್ದ್ರತೆಯು ಅಪಾಯಕಾರಿ ಮಟ್ಟ ತಲುಪಿದಲ್ಲಿ ಪಂದ್ಯಾವಳಿಯ ನಿಯಮಾವಳಿಗಳಡಿ ತೀವ್ರ-ಉಷ್ಣಾಂಶ ನೀತಿ ಜಾರಿಗೊಳಿಸಲಾಗುವುದು. ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಾತಿ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. 2010ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಗ್ರ್ಯಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯಾಳಿಯಲ್ಲಿ ಅತ್ಯಧಿಕ ಒಂದುದಿನದ ಹಗಲು/ರಾತ್ರಿ ಹಾಜರಾತಿ 77 ,043 ಮತ್ತು ಒಟ್ಟಾರೆ ಹಾಜರಾತಿ 653,860 ಸಾಧನೆಯಿಂದ ದಾಖಲೆ ನಿರ್ಮಿಸಿದೆ.[1] 2008ರಲ್ಲಿ ಮೆಲ್ಬೊರ್ನ್ ಪಾರ್ಕ್ನಲ್ಲಿ ಕಳೆದ 20 ವರ್ಷಗಳಿಂದ ಅಳವಡಿಸಲಾಗಿದ್ದ ರಿಬೌಂಡ್ ಏಸ್ ಹಾಸನ್ನು 20 ವರ್ಷಗಳ ನಂತರ, ಅಂದರೆ 2008ರಲ್ಲಿ ಬದಲಾಯಿಸಲಾಯಿತು. ಇದರ ಸ್ಥಳದಲ್ಲಿ ಪ್ಲೆಕ್ಸಿಕುಷನ್ ಪ್ರೆಸ್ಟಿಜ್ ಎಂಬ ಮೆತ್ತೆಯ, ಅಕ್ರಿಲಿಕ್ ಮೇಲ್ಮೈನ ಹಾಸನ್ನು ಅಳವಡಿಸಲಾಯಿತು. ರಿಬೌಂಡ್ ಏಸ್ ಮತ್ತು ಪ್ಲೆಕ್ಸಿಕುಷನ್ ಪ್ರೆಸ್ಟಿಜ್ ಎರಡೂ ತರಹದ ಅಂಕಣಗಳಲ್ಲಿ ಆಡಲಾದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿ ಗೆದ್ದವರು ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಆಟಗಾರರು ಮಾತ್ರ. ಹೊಸ ಮೇಲ್ಮೈನ ಮುಖ್ಯ ಅನುಕೂಲಗಳೆಂದರೆ ಉತ್ತಮ ಘನತ್ವ ಹಾಗೂ ತೆಳುವಾದ ಮೇಲ್ಪದರ ಹೊಂದಿರುವುದರಿಂದ ಅಂಕಣವು ಶಾಖವನ್ನು ಕಡಿಮೆ ಹಿಡಿದಿಡುತ್ತದೆ. ಈ ಬದಲಾವಣೆಯಿಂದ, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗಾಗಿ ಪೂರ್ವಸಿದ್ಧತೆಯ ಎಲ್ಲ ಪಂದ್ಯಾವಳಿಗಳಲ್ಲೂ ಬದಲಾವಣೆಗಳು ಕಂಡಿತು. ಈ ಹೊಸ ಅಂಕಣ ಹಾಸು ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಳಸಲಾಗುವ ಡೆಕೊಟರ್ಫ್ ಹಾಸಿನಂತಿದ್ದ ಕಾರಣ, ಹಾಸು ಬದಲಾವಣೆ ವಿವಾದಕ್ಕೀಡಾಯಿತು.[2] 2010ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಸೆರೆನಾ ವಿಲಿಯಮ್ಸ್ ಸಿಂಗಲ್ಸ್ ವಿಜೇತರಾಗಿದ್ದರು. ಪುರುಷರ ಡಬಲ್ಸ್ ಪಂದ್ಯದಲ್ಲಿ, ಬಾಬ್ ಮತ್ತು ಮೈಕ್ ಬ್ರಯಾನ್ ಜೋಡಿ ಹಾಗೂ, ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಜೋಡಿ ವಿಜೇತರಾದರು. ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಎರಡೂ ಡಬಲ್ಸ್ ಪಂದ್ಯಗಳನ್ನು ಒಡಹುಟ್ಟಿದವರು ಗೆದ್ದಿರುವುದು ಇತಿಹಾಸದಲ್ಲಿ ಎರಡನೆಯ ಬಾರಿ ಹಾಗೂ ಸತತ ಎರಡನೇ ವರ್ಷದ ದಾಖಲೆಯಾಗಿದೆ. ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಕಾರಾ ಬ್ಲ್ಯಾಕ್ ಮತ್ತು ಲಿಯಾಂಡರ್ ಪೇಸ್ ಜೋಡಿ ವಿಜೇತರಾಗಿದ್ದರು.