ಇಮಾಮ ಅಹ್ಮದ ರಜಾ
From Wikipedia, the free encyclopedia
ಸಯ್ಯದುನಾ ಆಲಾ ಹಜರತ ಇಮಾಮ ಅಹ್ಮದ ರಜಾ ಖಾನ ಕಾದರಿ ೧೪ನೇ ಶತಮಾನದ ಇಸ್ಲಾಂ ಧರ್ಮದ ನವಜೀವನದಾತಾ (ಮುಜದ್ದಿದ) ಇದ್ದರು. ಅವರಿಗೆ ಆ ಸಮಯದ ಪ್ರಸಿದ್ಧ ಅರಬ ವಿದ್ವಾಂಸರು ಈ ಉಪಾದಿಯನ್ನು ನೀಡಿ ಗೌರವಿಸಿದ್ದರು. ಅವರು ಭಾರತ ಉಪಖಾಂಡದ ಮುಸಲ್ಮಾನರ ಹೃದಯದಲ್ಲಿ ಅಲ್ಲಾಹ ಸುಬಹಾನಹು ತಆಲಾ ಹಾಗೂ ಮುಹಮ್ಮದ ರಸೂಲಲ್ಲಾಹ ಸಲ್ಲಲ್ಲಾಹು ತಆಲಾ ಅಲೈಹಿ ವಸಲ್ಲಮ ರ ಪ್ರತಿ ಪ್ರೇಮವನ್ನು ತುಂಬಿದರು ಮತ್ತು ಮುಹಮ್ಮದ ರಸೂಲಲ್ಲಾಹ ಸಲ್ಲಲ್ಲಾಹು ತಆಲಾ ಅಲೈಹಿ ವಸಲ್ಲಮ ರ ಸುನ್ನತಗಳನ್ನು ಜೀವಿತಗೊಳಿಸಿ ಇಸ್ಲಾಂ ಧರ್ಮವನ್ನು ಪುನರುಜ್ಜೀವಿತ ಗೊಳಿಸಿದರು. ಇಸ್ಲಾಮಿ ವಿಜ್ಞಾನದಲ್ಲಿ ಪರಿಣತಿಯನ್ನು ಹೊಂದುದಷ್ಟೇ ಅಲ್ಲ ಇತರೇ ವಿಜ್ಞಾನದಲ್ಲಿಯೂ ಪರಿಣತಿಯನ್ನು ಪಡೆದುಕೊಂಡಿದ್ದರು. ಆದುದರಿಂದಲೇ ಅವರನ್ನು ಅವರ ಸಮಯದ ಇಮಾಮ ಅಬೂ ಹನೀಫಾ ಎಂದೂ ಕರೆದರು. ಅವರು ಕೇವಲ ೧೩ ವರ್ಷದ ಚಿಕ್ಕ ವಯಸ್ಸಿನಲ್ಲಿ ಮುಫ್ತಿಯ ಶ್ರೇಣಿ ಗ್ರಹಿಸಿದರು. ಅವರು ೭೨ಕ್ಕಿಂತ ಹೆಚ್ಚು ವಿವಿಧ ವಿಷಯಗಳಲ್ಲಿ ೧೦೦೦ ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು ಇವುಗಳಲ್ಲಿ ಕುರಾನಿನ ವಿವರಣೆ ಅಂದರೆ ತಫ್ಸೀರ, ಪೈಗಂಬರ ವಾಣಿ ಅಂದರೆ ಹದೀಸ, ಫಿಕಹ, ಗಣಿತ, ಭೂವಿಜ್ಞಾನ, ಖಗೋಳ ವಿಜ್ಞಾನ ಹಾಗೂ ಇತರೇ ವೈಜ್ಞಾನಿಕ ವಿಷಯಗಳು ಪ್ರಮುಖವಾಗಿವೆ. ಅವರ ಒಂದು ಪ್ರಮುಖ ಪುಸ್ತಕ ಅದ್ದೌಲತುಲ್ ಮಕ್ಕಿಯಾ ಇದೆ ಇದನ್ನು ಕೇವಲ ೮ ಗಂಟೆಗಳಲ್ಲಿ ಯಾವುದೇ ಸಂದರ್ಭ ಗ್ರಂಥಗಳ ಸಹಾಯವಿಲ್ಲದೆ ಹರಮ-ಎ-ಮಕ್ಕಾದಲ್ಲಿ ಬರೆದರು. ಅವರ ಒಂದು ಪ್ರಮುಖ ಗ್ರಂಥ ಫತಾವಾ ರಜ್ವಿಯಾ ಈ ಶತಮಾನದ ಇಸ್ಲಾಮಿ ಕಾನೂನಿನ ಒಂದು ಒಳ್ಳೆಯ ಉದಾಹರಣೆಯಾಗಿದ್ದು ೧೩ ದೊಡ್ಡ ವಿಭಾಗಗಳಲ್ಲಿ ರಚಿತವಾಗಿದೆ. ಕಂಜುಲ್ ಈಮಾನ ಫೀ ತರ್ಜಮತುಲ್ ಕುರಆನ ಉರ್ದು ಭಾಷೆಯ ಈವರೆಗಿನ ಅತೀ ಉನ್ನತ ತರ್ಜುಮೆಯಾಗಿದೆ. ಇಮಾಮ ಅಹ್ಮದ ರಜಾರ ಜೀವನ ಹಾಗೂ ಕಾರ್ಯಗಳ ಕುರಿತು ವಿವಿಧ ವಿಷಯಗಳಲ್ಲಿ ಅನುಸಂಧಾನಕ್ಕಾಗಿ ದೇಶ ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಕೈಗೊಂಡಕ್ಕಾಗಿ ಬಹಳಷ್ಟು ಜನರಿಗೆ ಪಿ.ಎಚ್.ಡಿ. ಪದವಿಯನ್ನು ನೀಡಿದೆ. ಇವುಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಧ್ಯಕಾಲ ಹಾಗೂ ಆಧುನಿಕ ಕಾಲದ ಪ್ರಥಮ ವಿಶ್ವವಿದ್ಯಾಲಯವಾದ ಕಾಹಿರಾ ಈಜಿಪ್ತಿನ ಅಲ್-ಅಜ್ಹರ ವಿಶ್ವವಿದ್ಯಾಲಯ ಪ್ರಮುಖವಾಗಿದೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
ಇಮಾಮ ಅಹ್ಮದ ರಜಾ ಖಾನ ಕಾದರಿ اعلیٰ حضرت امام احمد رضا خان قادری | |
---|---|
ಜನನ | 1856 ಬರೇಲ್ವಿ ಶರೀಫ, ಉತ್ತರ ಪ್ರದೇಶ |
ಮರಣ | 1921 ಬರೇಲ್ವಿ ಶರೀಫ |
ಕಾವ್ಯನಾಮ | ರಜಾ |
ವೃತ್ತಿ | ಮುಫ್ತಿ, ಲೇಖಕ,ಕವಿ, ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕುರಾನಿನ ವಿವರಣೆ ಅಂದರೆ ತಫ್ಸೀರ್, ಪೈಗಂಬರ ವಾಣಿ ಅಂದರೆ ಹದೀಸ್, ಫಿಕಹ್, ಗಣಿತ, ಭೂವಿಜ್ಞಾನ, ಖಗೋಳ ವಿಜ್ಞಾನ ಹಾಗೂ ಇತರೇ ವೈಜ್ಞಾನಿಕ ವಿಷಯಗಳು |
ಪ್ರಭಾವಗಳು
| |
ಪ್ರಭಾವಿತರು
|