ಇವ್ಯಾನ್ ಅಲಿಕ್ಸಾನ್ಡ್ರವಿಚ್ ಗನ್ಚೆರಾಫ್
From Wikipedia, the free encyclopedia
ಇವ್ಯಾನ್ ಅಲಿಕ್ಸಾನ್ಡ್ರವಿಚ್ ಗನ್ಚೆರಾಫ್( 18 ಜೂನ್ 1812 – 27 ಸೆಪ್ಟೆಂಬರ್ 1891). ರಷ್ಯದ ಪ್ರಸಿದ್ಧ ಕಾದಂಬರಿಕಾರ. ಗಣ್ಯ ವರ್ತಕನೊಬ್ಬನ ಮಗ. ಹುಟ್ಟಿದ್ದು ಸಿಂಬಿರ್ಸ್ಕ್ ನಲ್ಲಿ. ಮಾಸ್ಕೊ ವಿಶ್ವವಿದ್ಯಾಲಯದ ಪದವೀಧರನಾದ ಈತ ಸಿವಿಲ್ ಪರೀಕ್ಷೆಯನ್ನು ಮುಗಿಸಿ ಸಿಂಬಿರ್ಸ್ಕ್ ನಗರದಲ್ಲಿ ಗವರ್ನರನ ಕಾರ್ಯದರ್ಶಿಯಾದ. ಅನಂತರ ಸೇಂಟ್ ಪೀಟರ್ಸ್ಬರ್ಗ್ನಲ್ಲಿ (ಈಗಿನ ಲೆನಿನ್ಗ್ರಾಡ್) ಅರ್ಥಶಾಖಾ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. 1856ರಲ್ಲಿ ಅಡ್ಮಿರಲ್ ಪುಟಿಯಾಟಿನ್ರ ಆಪ್ತಕಾರ್ಯದರ್ಶಿಯಾಗಿ ಜಪಾನ್ ಪ್ರವಾಸಮಾಡಿ ಬಂದ. ಅಲ್ಲಿನ ಅನುಭವಗಳು ದಿ ಫ್ರಿಗಟ್ ಪಲ್ಲಾಡ್ (1858) ಎಂಬ ಪ್ರವಾಸ ಕಥನದಲ್ಲಿವೆ. ನಿವೃತ್ತಿಗೆ ಮುನ್ನ ಈತ ಸಾಹಿತ್ಯದ ದೋಷ ವಿಮರ್ಶಕನಾಗಿ (ಸೆನ್ಸಾರ್) ಸರ್ಕಾರದಿಂದ ನೇಮಕಗೊಂಡಿದ್ದ.
Quick Facts ಇವ್ಯಾನ್ ಅಲಿಕ್ಸಾನ್ಡ್ರವಿಚ್ ಗನ್ಚೆರಾಫ್, ಜನನ ...
Close