ಉತ್ಪಾದನಾ ತೆರಿಗೆ
From Wikipedia, the free encyclopedia
From Wikipedia, the free encyclopedia
ಉತ್ಪಾದನಾ ತೆರಿಗೆ ಎಂದರೆ ಉತ್ಪಾದಿತ ಸರಕುಗಳ ಮೇಲೆ ಮಾರಾಟದ ಕಾಲದ ಬದಲಾಗಿ ಉತ್ಪಾದನಾ ಕಾಲದಲ್ಲಿ ವಿಧಿಸಲಾದ ಯಾವುದೇ ಸುಂಕ.
ಉತ್ಪಾದನಾ ತೆರಿಗೆಗಳನ್ನು ಹಲವುವೇಳೆ ಸೀಮಾ ಸುಂಕದೊಂದಿಗೆ ಸಂಬಂಧಿಸಲಾಗುತ್ತದೆ (ಸೀಮಾ ಸುಂಕವನ್ನು ಮೊದಲೇ ಅಸ್ತಿತ್ವದಲ್ಲಿರುವ ಸರಕುಗಳ ಮೇಲೆ ಅವು ನಿರ್ದಿಷ್ಟ ದಿಕ್ಕಿನಲ್ಲಿ ಗೊತ್ತುಪಡಿಸಿದ ಗಡಿಯನ್ನು ದಾಟುವಾಗ ವಿಧಿಸಲಾಗುತ್ತದೆ); ಸೀಮಾ ಸುಂಕವನ್ನು ತೆರಿಗೆಯ ವಸ್ತುವಾಗಿ ಗಡಿಯಲ್ಲಿ ಅಸ್ತಿತ್ವಕ್ಕೆ ಬರುವ ಸರಕುಗಳ ಮೇಲೆ ವಿಧಿಸಲಾಗುತ್ತದೆ. ಉತ್ಪಾದನಾ ತೆರಿಗೆಯನ್ನು ಒಳನಾಡಿನಲ್ಲಿ ಅಸ್ತಿತ್ವಕ್ಕೆ ಬಂದ ಸರಕುಗಳ ಮೇಲೆ ವಿಧಿಸಲಾಗುತ್ತದೆ.
ಕೆಲವೊಮ್ಮೆ ತೆರಿಗೆ ಎಂದು ನಿರ್ದೇಶಿಸಲಾಗುತ್ತದಾದರೂ, ಉತ್ಪಾದನಾ ತೆರಿಗೆಯು ನಿರ್ದಿಷ್ಟವಾಗಿ ಒಂದು ಸುಂಕ; ತಾಂತ್ರಿಕವಾಗಿ ತೆರಿಗೆ ಎಂದರೆ ಒಬ್ಬ ವ್ಯಕ್ತಿಯ ಮೇಲೆ ವಿಧಿಸಲಾದ ಕರ (ಅಥವಾ ಹೆಚ್ಚು ನಿಖರವಾಗಿ, ಇರಬಹುದ ಮೊತ್ತದ ಮೌಲ್ಯಮಾಪನೆ), ಅದೇ ಸುಂಕ ಎಂದರೆ ನಿರ್ದಿಷ್ಟ ಸರಕುಗಳ ಮೇಲೆ ವಿಧಿಸಲಾದ ಕರ. ಉತ್ಪಾದನಾ ತೆರಿಗೆಯನ್ನು ಪರೋಕ್ಷ ತೆರಿಗೆಯೆಂದು ಪರಿಗಣಿಸಲಾಗುತ್ತದೆ, ಅಂದರೆ ಸರ್ಕಾರಕ್ಕೆ ಕರವನ್ನು ಪಾವತಿಸುವ ಉತ್ಪಾದಕ ಅಥವಾ ಮಾರಾಟಗಾರನು ಸರಕುಗಳ ಅಂತಿಮ ಖರೀದಿದಾರನು ಪಾವತಿಸುವ ಬೆಲೆಯನ್ನು ಹೆಚ್ಚಿಸುವ ಮೂಲಕ ತನ್ನ ನಷ್ಟವನ್ನು ತುಂಬಿಕೊಳ್ಳಲು ಪ್ರಯತ್ನಿಸುತ್ತಾನೆ ಎಂದು ನಿರೀಕ್ಷಿಸಲಾಗುತ್ತದೆ.
ಉತ್ಪಾದನಾ ತೆರಿಗೆಗಳನ್ನು ಸಾಮಾನ್ಯವಾಗಿ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯಂತಹ (ವ್ಯಾಟ್) ಪರೋಕ್ಷ ತೆರಿಗೆಯ ಜೊತೆಗೆ ವಿಧಿಸಲಾಗುತ್ತದೆ.
ಸಾಮಾನ್ಯವಾಗಿ, ಉತ್ಪಾದನಾ ತೆರಿಗೆಯು ನಾಲ್ಕು ರೀತಿಗಳಲ್ಲಿ ಮಾರಾಟ ತೆರಿಗೆ ಅಥವಾ ವ್ಯಾಟ್ನಿಂದ ಭಿನ್ನವಾಗಿದೆ:
ಅಬಕಾರಿ ಸುಂಕಗಳ ಸಾಮಾನ್ಯ ಉದಾಹರಣೆಗಳೆಂದರೆ ಪೆಟ್ರೋಲ್ ಮತ್ತು ಇತರ ಇಂಧನಗಳ ಮೇಲಿನ ತೆರಿಗೆಗಳು, ಮತ್ತು ತಂಬಾಕು ಹಾಗೂ ಮದ್ಯದ ಮೇಲಿನ ತೆರಿಗೆಗಳು (ಕೆಲವೊಮ್ಮೆ ಪಾಪದ ತೆರಿಗೆ ಎಂದು ಸೂಚಿಸಲ್ಪಡುತ್ತವೆ).
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.