From Wikipedia, the free encyclopedia
ಎಥಿಲೀನ್ ಆಲ್ಕೀನ್ ವರ್ಗಕ್ಕೆ ಸೇರಿದ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್. ಇದರ ರಾಸಾಯನಿಕಸೂತ್ರ C2H4. ಇದು ಅಪರ್ಯಾಪ್ತ ಸಂಯುಕ್ತವಾದ್ದರಿಂದ ಇದರಲ್ಲಿ ಎರಡು ಇಂಗಾಲದ ಪರಮಾಣುಗಳು ಸಿಗ್ಮ (σ) ಮತ್ತು ಪೈ (π) ಬಂಧಗಳ ಮೂಲಕ ಸೇರಿಸಲ್ಪಟ್ಟಿವೆ (ದ್ವಿಬಂಧಗಳು-ಡಬಲ್ ಬಾಂಡ್ಸ್). ಎಥಿಲೀನ್ ರಚನೆಯನ್ನು ಮೂರು ಮಾದರಿಯಲ್ಲಿ ತೋರಿಸುವ ವಾಡಿಕೆಯಿದೆ. π ಬಂಧ σ ಬಂಧಕ್ಕಿಂತ ದುರ್ಬಲವಾಗಿರುವುದರಿಂದ ಸುಲಭವಾಗಿ ಭೇದಿಸಲ್ಪಡುತ್ತದೆ. ಈ ಗುಣದಿಂದ ಎಥಿಲೀನ್ ಅಣುವಿನ ದ್ವಿಬಂಧಕ್ಕೆ ಕ್ಲೋರಿನ್, ಬ್ರೋಮಿನ್, ಹೈಡ್ರೊಜನ್ ಕ್ಲೋರೈಡ್, ಆಕ್ಸಿಜನ್ನುಗಳನ್ನು ಸೇರಿಸಬಹುದು.
ಈ ಕ್ರಿಯೆಗಳಿಂದ ಎಥಿಲೀನ್ ಪರ್ಯಾಪ್ತ ಅಣುವಾಗಿ ಪರಿವರ್ತನೆಗೊಳ್ಳುತ್ತದೆ.[1]ICSC 0475
ಪೆಟ್ರೋಲಿಯಂ ಮತ್ತು ನಿಸರ್ಗ ಅನಿಲದಲ್ಲಿ (ನ್ಯಾಚುರಲ್ ಗ್ಯಾಸ್) ಹಾಗೂ ನ್ಯಾಫ್ಥಾದಲ್ಲಿ ಎಥಿಲೀನ್ ದೊರೆಯುತ್ತದೆ. ಮೋಟಾರ್ ವಾಹನಗಳು ಉಗುಳುವ ಹೊಗೆಯಲ್ಲಿಯೂ ಅಲ್ಪ ಪ್ರಮಾಣದಲ್ಲಿ ಇದೆಯೆಂದು ಪತ್ತೆಮಾಡಲಾಗಿದೆ.
ಪೆಟ್ರೋಲಿಯಂ ಮತ್ತು ನಿಸರ್ಗಾನಿಲಗಳನ್ನು ಅಧಿಕ ಉಷ್ಣತೆಯಲ್ಲಿ ಕಾಯಿಸಿದಾಗ (ಉತ್ತಾಪ ವಿಚ್ಛೇದನೆ-ಪೈರೋಲಿಸಿಸ್ ಕ್ರ್ಯಾಕಿಂಗ್) ಎಥಿಲೀನ್ ಉತ್ಪತ್ತಿಯಾಗುತ್ತದೆ. ಕಚ್ಚಾ ಪೆಟ್ರೋಲಿಯಂ ಎಣ್ಣೆಯ ಶುದ್ಧೀಕರಣದಲ್ಲಿ ಹೊರಬರುವ ಅನಿಲಗಳಲ್ಲಿ ಎಥಿಲೀನ್ ಹೆಚ್ಚಿನ ಪ್ರಮಾಣದಲ್ಲಿರುವುದು. ಔದ್ಯೋಗಿಕವಾಗಿ ಎಥಿಲೀನನ್ನು ಮೇಲೆ ಹೇಳಿದ ಅನಿಲಗಳಿಂದ ಆಸವನ (ಡಿಸ್ಟಿಲ್ಲೇಷನ್) ಮತ್ತು ಅಧಿಶೋಷಣ (ಅಡ್ಸಾರ್ಪ್ಷನ್) ವಿಧಾನಗಳಿಂದ ಪಡೆಯುತ್ತಾರೆ. ಪ್ರೋಪೈಲಿನ್ ಮತ್ತು ಬ್ಯೂಟಾಡಯೀನ್ ಅನಿಲಗಳನ್ನೊಳಗೊಂಡು ಅಶುದ್ಧವಾಗಿದ್ದರೂ ಈ ವಿಧಾನಗಳಿಂದ ಬರುವ ಎಥಿಲೀನನ್ನು ನೇರವಾಗಿ ಅನೇಕ ರಾಸಾಯನಿಕ ಕ್ರಿಯೆಗಳಿಗೆ ಉಪಯೋಗಿಸುತ್ತಾರೆ. ಶುದ್ಧವಾದ ಎಥಿಲೀನನ್ನು ಅಲ್ಪಪ್ರಮಾಣದಲ್ಲಿ ಮದ್ಯಸಾರದ ಆವಿಯನ್ನು ಪಟುಗೊಳಿಸಿದ (ಆಕ್ಟಿವೇಟೆಡ್) ಅಲ್ಯುಮಿನ (ಅಲ್ಯೂಮಿನಿಯಂ ಆಕ್ಸೈಡ್) ಮೇಲೆ ಹಾಯಿಸಿ ಪಡೆಯಬಹುದು.[2][3][4]
ಬಣ್ಣವಿಲ್ಲದ ಅನಿಲ. ವಿಶಿಷ್ಟವಾದ ಸುವಾಸನೆ ಮತ್ತು ರುಚಿಯುಳ್ಳದ್ದು.[5] 3% ಪ್ರಮಾಣದ ಗಾಳಿಯೊಂದಿಗೆ ಸೇರಿದರೆ ಸ್ಫೋಟಕ ಮಿಶ್ರಣವುಂಟಾಗುತ್ತದೆ. ಕರಗುವ ಉಷ್ಣತೆ -169೦ ಸೆಂ.ಗ್ರೇ. ಆವಿಯಾಗುವ ಉಷ್ಣತೆ- 1025೦ ಸೆಂ.ಗ್ರೇ. ಸಾಪೇಕ್ಷ ಸಾಂದ್ರತೆ 00 ಸೆಂಟಿಗ್ರೇಡಿನಲ್ಲಿ 0.೬೧೦. ಆವಿಯ ಸಾಂದ್ರತೆ (0೦ ಸೆಂ. ಗ್ರೇ. ಮತ್ತು 760 ಮಿ.ಮಿ. ಒತ್ತಡದಲ್ಲಿ ಗಾಳಿ=1) 0. 975. ದ್ರವಿಸುವ ಅವಧಿಕ ಉಷ್ಣತೆ (ಕ್ರಿಟಿಕಲ್ ಟೆಂಪರೇಚರ್) 9.5೦. ಸೆಂಗ್ರೇ.
C2H4 + Cl2 → C2H4Cl2
C2H4 + HBr → C2H5Br
ಪ್ಲಾಟಿನಂ
C2H4 + H2 → C2H6
ವೇಗವರ್ಧಕ
ಆಕ್ಸಿಜನ್ ಒತ್ತಡ
nCH2=CH2 ~CH2-(CH2-CH2-CH2)n-CH2 ಉಷ್ಣ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.