ಎಸ್.ಪಿ. ಎಲ್. ಸೊರನ್ಸನ್
From Wikipedia, the free encyclopedia
ಸೊರನ್ ಪೆಡೆಲ್ ಲೌರಿಟ್ಜ಼್ ಸೊರನ್ಸನ್(೯ ಜನವರಿ ೧೮೬೮ - ೧೨ ಫ಼ೆಬ್ರವರಿ ೧೯೩೯), ವಸ್ತುಗಳ ಆಮ್ಲತೆ ಹಾಗು ಕ್ಶಾರೀಯತೆಯನ್ನು ಅಳೆಯಲು ಪಿ.ಎಚ್ ಮಾಪನವನ್ನು ಕಂಡುಹಿಡಿದ ಖ್ಯಾತ ಡ್ಯಾನಿಷ್ ರಸಾಯನಶಾಸ್ತ್ರಜ್ಞ.
ಎಸ್.ಪಿ. ಎಲ್. ಸೊರನ್ಸನ್ | |
---|---|
![]() ಎಸ್.ಪಿ. ಎಲ್. ಸೊರನ್ಸನ್ | |
ಜನನ | ೯ ಜನವರಿ ೧೮೬೮ ಹ್ಯಾವ್ರೆಬರ್ಗ್, ಡೆನ್ಮಾರ್ಕ್ |
ಮರಣ | ಕೋಪನ್ ಹ್ಯಾಗನ್, ಡೆನ್ಮಾರ್ಕ್ |
ಪೌರತ್ವ | ಡ್ಯಾನಿಷ್ |
ರಾಷ್ಟ್ರೀಯತೆ | ಡ್ಯಾನಿಷ್ |
ಕಾರ್ಯಕ್ಷೇತ್ರ | ರಸಾಯನಶಾಸ್ತ್ರ |
ಸಂಸ್ಥೆಗಳು | ಕಾರ್ಲ್ಸ್ ಬರ್ಗ್ ಪ್ರಯೋಗಾಲಯ |
ಪ್ರಸಿದ್ಧಿಗೆ ಕಾರಣ | ಪಿ ಹೆಚ್ |
ಸಂಗಾತಿ | ಮಾರ್ಗ್ರೆಥ್ ಹೋಯ್ರುಪ್ ಸೊರನ್ಸನ್ |
೧೦೩೧ರಿಂದ ೧೯೩೮ರವರೆಗೂ ಕೊಪನ್ ಹ್ಯಾಗನ್ನಿನ ಪ್ರತಿಷ್ಠಿತ ಕಾರ್ಲ್ಸ್-ಬರ್ಗ್ ಪ್ರಯೋಗಾಲಯದ ಮುಖ್ಯಸ್ಥರಾಗಿದ್ದರು[1]. ಈ ಪ್ರಯೋಗಾಲಯದಲ್ಲಿ ಕಾರ್ಯನಿರವಹಿಸುತ್ತಿದ್ದಾಗ, ಸಸಾರಜನಕ(ಪ್ರೊಟೀನ್)ದ ಮೇಲೆ ಮಿನ್ತುಣುಕು(ಅಯಾನ್)ಗಳ ಸಾಂದ್ರತೆಯ ಪ್ರಭಾವವನ್ನು ಅಭ್ಯಸಿಸಿದರು[2] ಹಾಗು ಇದರಲ್ಲಿ ಜಲಜನಕದ ಮಿನ್ತುಣುಕಿನ ಸಾಂದ್ರತೆಯು ಬಹುಮುಖ್ಯವಾದ್ದರಿಂದ, ಇದನ್ನು ಸರಳವಾಗಿ ವ್ಯಕ್ತಪಡಿಸಲು ಪಿ.ಎಚ್ ಮಾಪನವನ್ನು ೧೯೦೯ರಲ್ಲಿ ಪರಿಚಯಿಸಿದರು[3]. ಈ ಪಿ.ಎಚ್ ಮಾಪನವನ್ನು (pH ಎಂಬ ಸಂಕೇತನವನ್ನು ಉಪಯೋಗಿಸಿ[4]) ಅವರು ಪರಿಚಯಿಸಿದ ಲೇಖನದಲ್ಲಿ, ಆಮ್ಲತೆಯನ್ನು ಅಳೆಯುವ ೨ ಹೊಸ ವಿಧಗಳ ಬಗ್ಗೆ ವಿವರಿಸಿದ್ದಾರೆ[5]. ಇದರಲ್ಲಿ ಮೊದಲನೆಯದು, ವಿದ್ಯುದ್ಧೃವ(ಎಲೆಕ್ಟ್ರೋಡ್)ಗಳನ್ನು ಉಪಯೋಗಿಸಿ ಅಳೆಯುವುದು ಹಾಗು ಎರಡನೆಯದು, ನಮೂನೆಯ ಬಣ್ಣವನ್ನು ಪೂರ್ವನಿಗದಿತ ಸೂಚಕಗಳಿಗೆ ಹೋಲಿಸಿ, ಅದರ ಆಮ್ಲತೆಯನ್ನು ಕಂಡುಹಿಡಿಯುವುದು.
೨೯ ಮೇ ೨೦೧೮ರಂದು ಪಿ.ಎಚ್ ಮಾಪನವನ್ನು ರಚಿಸಿದ್ದರ ಗೌರವಾರ್ಥವಾಗಿ ,ಗೂಗಲ್ ತನ್ನ ಡೂಡಲನ್ನು ಸೊರನ್ಸನ್ನರ ಮೇಲೆ ರಚಿಸಿ, ಅವರಿಗೆ ಗೌರವ ಸೂಚಿಸಿತು.[6]