ಕಂಪ್ಯೂಟರ್ ಪ್ರೋಗ್ರಾಮಿಂಗ್
ಕಂಪ್ಯೂಟರ್ ಪ್ರೋಗ್ರಾಮಿಂಗ್ ಎಂಬುದು ಉಪಯುಕ್ತವಾದ, ಸಮರ್ಥನೀಯ ಮತ್ತು ವಿಸ್ತರಣೀಯ ಮೂಲ ಕೋಡ್ ಅನ್ನು ಬರೆಯುವ ಕರಕ / From Wikipedia, the free encyclopedia
ಕಂಪ್ಯೂಟರ್ ಪ್ರೋಗ್ರಾಮಿಂಗ್(ಗಣಕಯಂತ್ರ ಕಾರ್ಯತಂತ್ರ) ಗಣಕ ವಿಜ್ಞಾನದ ಅತಿ ಮುಖ್ಯ ಭಾಗ. ಅದು ಒಂದು ಗಣಕ ಸಮಸ್ಯೆಯ ಮೂಲ ಸೂತ್ರದಿಂದ ಕಾರ್ಯಗತಗೊಳ್ಳುವ ಕಂಪ್ಯೂಟರ್ ಪ್ರೋಗ್ರಾಂ ಗೆ ಕೊಂಡೊಯ್ಯುವ ಒಂದು ಪ್ರಕ್ರಿಯೆ. ಪ್ರೋಗ್ರಾಮಿಂಗ್ ನಲ್ಲಿ ವಿಶ್ಲೇಷಣೆ, ತಿಳಿವಳಿಕೆಅಭಿವೃದ್ಧಿ, ಕ್ರಮಾವಳಿಗಳ ಉತ್ಪಾದನೆ, ಅವುಗಳ ಅಗತ್ಯಗಳ ಪರಿಶೀಲನೆ, ಆ ಅಗತ್ಯಗಳ ಮತ್ತು ಕ್ರಮಾವಳಿಯ ಸಂಪನ್ಮೂಲಗಳ ಬಳಕೆ, ಹಾಗೂ ಆ ಕ್ರಮಾವಳಿಯನ್ನು ಒಂದು ಗುರುತ್ತಿಸಿರುವ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಅನುಷ್ಠಾನ ಪಡೆಸುವ ಇಷ್ಟು ಚಟುವಟಿಕೆಗಳು ಒಳಗೊಂಡಿವೆ.[1] ಸೋರ್ಸ್ ಕೋಡನ್ನು ಬಹುತೇಕ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಬರೆಯಲಾಗಿದೆ. ಒಂದು ನಿರ್ದಿಷ್ಡ ಕಾರ್ಯ ನಿರ್ವಹಿಸುವುದಕ್ಕೆ ಅಥವಾ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸ್ವಯಂಚಾಲಿತ ಸೂಚನೆಗಳ ಸರಣಿಯನ್ನು ಹುಡುಕುವುದೆ ಕಾರ್ಯತಂತ್ರದ ಉದೇಶ. ಹಾಗಾಗಿ ಅದರ ಪ್ರಕ್ರಿಯೆಗೆ ಅಪ್ಲಿಕೇಶನ್ ಡೊಮೇನ್ ಬಗ್ಗೆಯ ಜ್ಞಾನ, ವಿಶೇಷ ಕ್ರಮಾವಳಿಗಳ ಮತ್ತು ತರ್ಕವನ್ನು ಸೇರಿದಂತೆ ವಿವಿಧ ವಿಷಯಗಳಲ್ಲಿ ಪರಿಣತಿಯ ಅಗತ್ಯವಿದೆ. ಪೋಗ್ರಾಮಿಂಗ್ ನ ಸಂಬಂಧಿತ ಕಾರ್ಯಗಳೆಂದರೆ ಪ್ರೋಗ್ರಾಂ ಪರೀಕ್ಷೆ, ಅದನ್ನು ಡೀಬಗ್ ಮಾಡುವುದು ಮತ್ತು ಸೋರ್ಸ್ ಕೋಡನ್ನು ಕಾಯ್ದುಕೊಂಡು ನಿರ್ಮಾಣ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವುದು ಹಾಗೂ ಗಣಕಯಂತ್ರ ಕಾರ್ಯಕ್ರಮಗಳ ಯಂತ್ರ ಕೋಡನ್ನು ವ್ಯಾಖ್ಯಾನಿಸಲಾದ ಕಲಾಕೃತಿಗಳ ನಿರ್ವಹಣೆ ಮಾಡುವುದು. ಸಾಫ್ಟ್ವೇರ್ ಎಂಜಿನಿಯರಿಂಗ್ ನಲ್ಲಿ ಎಂಜಿನಿಯರಿಂಗ್ ತಂತ್ರಗಳೊಂದಿಗೆ ಸಾಫ್ಟ್ವೇರ್ ಅಭಿವೃದ್ಧಿಯ ಪ್ರಯೋಗಗಳು ಒಳಗೊಂಡಿವೆ.