ಕತ್ರಿನಾ ಚಂಡಮಾರುತ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Category 5 hurricane (SSHS) | |
ರೂಪುಗೊಂಡಿದೆ | August 23, 2005 |
ಕಣ್ಮರೆಯಾಯಿತು | August 30, 2005 |
ಗರಿಷ್ಠ ಮಾರುತಗಳು | 1-minute sustained: 175 mph (280 km/h) |
ಕಡಿಮೆ ಒತ್ತಡ | 902 mbar (hPa); 26.64 inHg |
ಸಾವುಗಳು | 1,836 confirmed[1] |
ಹಾನಿ | $81.2 billion (2005 USD) (Costliest tropical cyclone in history) |
ಪ್ರಭಾವಿತವಾದ ಪ್ರದೇಶಗಳು | Bahamas, South Florida, Cuba, Louisiana (especially Greater New Orleans), Mississippi, Alabama, Florida Panhandle, most of eastern North America |
Part of the 2005 Atlantic hurricane season | |
ಟೆಂಪ್ಲೇಟು:Katrina
2005ರ ಅಟ್ಲಾಂಟಿಕ್ ಚಂಡಮಾರುತ ಕತ್ರಿನಾ ಚಂಡಮಾರುತ ವು ಭಾರಿ ನಷ್ಟಕ್ಕೆ ಕಾರಣವಾದ ಚಂಡಮಾರುತವಾಗಿದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲಿನ ಹಲವಾರು ಮಂದಿಯ ಮರಣಕ್ಕೆ ಕಾರಣವಾದ ಐದು ಘಟನೆಗಳಲ್ಲಿ ಒಂದಾಗಿದೆ.[2] ದಾಖಲಾದ ಅಟ್ಲಾಂಟಿಕ್ ಚಂಡಮಾರುತಗಳಲ್ಲಿ ಇದು ಆರನೇ ಅತಿ ಪ್ರಬಲವಾದುದಾಗಿದೆ.
ಕತ್ರಿನಾ ಚಂಡಮಾರುತವು 2005ರ ಆಗಸ್ಟ್ 23ರಲ್ಲಿ ಬಹಮಾಸ್ನಲ್ಲಿ ಹುಟ್ಟಿಕೊಂಡು, ದಕ್ಷಿಣ ಫ್ಲೋರಿಡಾಕ್ಕೆ ತೀವ್ರತೆ 1ರ ಚಂಡಮಾರುತವಾಗಿ ಸಾಗಿತು. ಅಲ್ಲಿ ಕೆಲವು ಸಾವುಗಳಿಗೆ ಮತ್ತು ಪ್ರವಾಹಕ್ಕೆ ಕಾರಣವಾದ ಇದು ನಂತರ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ತೀವ್ರವಾಗಿ ಪ್ರಬಲಗೊಂಡಿತು. ಚಂಡಮಾರುತವು ಅದರ ಎರಡನೇ ಭೂಸ್ಪರ್ಶವನ್ನು ಆಗ್ನೇಯ ಲೂಸಿಯಾನದಲ್ಲಿ ಆಗಸ್ಟ್ 29ರ ಸೋಮವಾರದಂದು ಬೆಳಗ್ಗೆ ತೀವ್ರತೆ 3 ಆಗಿ ಮಾಡುವ ಮೊದಲು ದುರ್ಬಲಗೊಂಡಿತು. ಇದು ಗಲ್ಫ್ ಕರಾವಳಿಯಾದ್ಯಂತ ಕೇಂದ್ರ ಫ್ಲೋರಿಡಾದಿಂದ ಟೆಕ್ಸಾಸ್ವರೆಗೆ ತೀವ್ರ ಹಾನಿಯನ್ನು ಉಂಟುಮಾಡಿತು. ಇವೆಲ್ಲವೂ ಹೆಚ್ಚಾಗಿ ಚಂಡಮಾರುತದ ಹಠಾತ್ ಉಲ್ಬಣದ ಕಾರಣದಿಂದ ಆಯಿತು. ಅತಿಹೆಚ್ಚಿನ ಪ್ರಾಣ ಹಾನಿಯು ನ್ಯೂ ಓರ್ಲಿಯನ್ಸ್, ಲೂಸಿಯಾನದಲ್ಲಿ ಸಂಭವಿಸಿತು. ಹೆಚ್ಚಿನ ಸಂದರ್ಭಗಳಲ್ಲಿ ಚಂಡಮಾರುತವು ಒಳನಾಡಿಗೆ ಪ್ರವೇಶಿಸಿದ ನಂತರ ಪ್ರವಾಹತಡೆ ವ್ಯವಸ್ಥೆಯು ಮಹಾದುರಂತವಾಗಿ ವಿಫಲಗೊಂಡಿದುದರಿಂದ ಈ ಪ್ರದೇಶಗಳು ಪ್ರವಾಹದಿಂದ ಕೊಚ್ಚಿಹೋದುದರಿಂದ ಈ ಹಾನಿ ಉಂಟಾಯಿತು.[3] ಅಂತಿಮವಾಗಿ 80%ನಷ್ಟು ನಗರ ಮತ್ತು ಹತ್ತಿರದ ಪ್ಯಾರಿಷ್ಗಳ ವಿಶಾಲ ಪ್ರದೇಶಗಳು ಪ್ರವಾಹದಿಂದ ಮುಳುಗಿದವು ಹಾಗೂ ಪ್ರವಾಹದ ನೀರು ಕೆಲವು ವಾರಗಳವರೆಗೆ ಹಾಗೆಯೇ ಉಳಿದುಕೊಂಡಿತ್ತು.[3] ಅತಿ ಹೆಚ್ಚಿನ ಸಂಪತ್ತು ನಷ್ಟವು ಮಿಸಿಸಿಪ್ಪಿ ಕಡಲ ಕಿನಾರೆಯ ನಗರಗಳಂತಹ ಕರಾವಳಿ ಪ್ರದೇಶಗಳಲ್ಲಿ ಕಂಡುಬಂದಿತು. ಇಲ್ಲಿ ಈ ಚಂಡಮಾರುತವು ದೋಣಿಗಳನ್ನು ಮತ್ತು ಮೋಜಿನ ನೌಕಾಗೃಹಗಳನ್ನು ಕಟ್ಟಡಗಳಿಗೆ ಬಲವಾಗಿ ಬಡಿಯುವಂತೆ ಮಾಡಿ, ಕಾರುಗಳನ್ನು ಮತ್ತು ಮನೆಗಳನ್ನು ಒಳಪ್ರದೇಶಕ್ಕೆ ತಳ್ಳಿ, ಕರಾವಳಿಯಿಂದ 6–12 ಮೈಲುಗಳಷ್ಟು (10–19 ಕಿಮೀ) ದೂರ ನೀರಿನಿಂದ ಆವರಿಸುವಂತೆ ಮಾಡಿ, ಸುಮಾರು 90%ನಷ್ಟು ಭಾಗವನ್ನು ಪ್ರವಾಹದಿಂದ ಮುಳುಗಿಸಿತು.
ಕನಿಷ್ಠ 1,836 ಜನರು ಈ ಚಂಡಮಾರುತದಿಂದ ಮತ್ತು ಆನಂತರದ ಪ್ರವಾಹದಿಂದ ಜೀವಕಳೆದುಕೊಂಡರು. ಈ ಮೂಲಕ ಇದು 1928ರ ಒಕೀಚೊಬೀ ಚಂಡಮಾರುತದ ನಂತರದ ಮಾರಣಾಂತಿಕ U.S. ಚಂಡಮಾರುತವನ್ನಾಗಿ ಮಾಡಿದೆ. 2005ರ ಕತ್ರಿನಾ ಚಂಡಮಾರುತವು ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ನೈಸರ್ಗಿಕ ದುರ್ಘಟನೆಯಾಗಿದೆ. ಈ ಚಂಡಮಾರುತದಿಂದಾಗ ಒಟ್ಟು ಹಾನಿಯು $81 ಶತಕೋಟಿಯಷ್ಟಿತ್ತು (2005 USD)[2]. ಇದು 1992ರ ಆಂಡ್ರಿವ್ ಚಂಡಮಾರುತದಿಂದ ಉಂಟಾದ ನಷ್ಟದ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.[4]
ಪ್ರವಾಹ ತಡೆ ವಿಫಲತೆಗಳು, 1965ರ ಪ್ರವಾಹ ನಿಯಂತ್ರಣ ಕಾಯಿದೆಯಲ್ಲಿ ನಿರ್ದೇಶಿಸಿದಂತೆ US ಆರ್ಮಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ಗೆ (USACE) ಸಂಬಂಧಿಸಿದ ಅವುಗಳ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ವಿಚಾರಣೆ ಮಾಡುವಂತೆ ಮತ್ತು ಅವುಗಳ ನಿರ್ವಹಣೆಯನ್ನು ಸ್ಥಳೀಯ ಪ್ರವಾಹ ತಡೆ ಮಂಡಳಿಗಳು ನೋಡಿಕೊಳ್ಳುವಂತೆ ಪ್ರೇರೇಪಿಸಿದವು. ಫೆಡರಲ್, ರಾಜ್ಯ ಮತ್ತು ಸ್ಥಳೀಯ ಸರಕಾರಗಳ ಪ್ರತಿಕ್ರಿಯೆಗಳ ಬಗ್ಗೆಯೂ ವಿಚಾರಣೆ ನಡೆಯಿತು. ಇದರ ಫಲವಾಗಿ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿಯ (FEMA) ನಿರ್ದೇಶಕ ಮೈಕೆಲ್ D. ಬ್ರೌವ್ನ್ ಮತ್ತು ನ್ಯೂ ಓರ್ಲಿಯನ್ಸ್ ಪೋಲೀಸ್ ಡಿಪಾರ್ಟ್ಮೆಂಟ್ನ (NOPD) ವ್ಯವಸ್ಥಾಪಕ ಎಡ್ಡೀ ಕೊಂಪಾಸ್ ಮೊದಲಾದವರು ರಾಜಿನಾಮೆ ನೀಡಿದರು. ಇದಕ್ಕೆ ವಿರುದ್ಧವಾಗಿ, ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್ (USCG), ನ್ಯಾಷನಲ್ ಹರಿಕೇನ್ ಸೆಂಟರ್ (NHC) ಮತ್ತು ನ್ಯಾಷನಲ್ ವೆದರ್ ಸರ್ವಿಸ್ (NWS) ಇತ್ಯಾದಿಗಳು ಅವುಗಳ ಚಟುವಟಿಕೆ, ನಿಖರವಾದ ಮುನ್ಸೂಚನೆ ಮತ್ತು ಹೆಚ್ಚಿನ ಮಾರ್ಗದರ್ಶನದಿಂದಾಗಿ ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಗಿವೆ.[5]
ಹೆಚ್ಚುಕಡಿಮೆ ಐದು ವರ್ಷಗಳ ನಂತರವೂ, ಮಿಸಿಸಿಪ್ಪಿ ಮತ್ತು ಲೂಸಿಯಾನದ ಸಾವಿರಾರು ಸ್ಥಳಾಂತರಿಸಿದ ನಿವಾಸಿಗರು ಇನ್ನೂ ಮೋಟಾರು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಲೂಸಿಯಾನದ ದಕ್ಷಿಣದ ಪ್ರತಿಯೊಂದು ಭಾಗದ ಪುನರ್ನಿರ್ಮಾಣವನ್ನು ಆರ್ಮಿ ಕಾರ್ಪ್ಸ್ನ LACPR ಫೈನಲ್ ಟೆಕ್ನಿಕಲ್ ರಿಪೋರ್ಟ್ನಲ್ಲಿ ತಿಳಿಸಲಾಗಿದೆ. ಇದು ಪುನಃ ನಿರ್ಮಾಣದ ಮಾಡಬಾರದ ಪ್ರದೇಶಗಳನ್ನು ಹಾಗೂ ಉತ್ತಮಗೊಳಿಸಬೇಕಾದ ಪ್ರದೇಶಗಳು ಮತ್ತು ಕಟ್ಟಡಗಳನ್ನು ಗುರುತಿಸುತ್ತದೆ.[6]