ಕಾಕಸಸ್
From Wikipedia, the free encyclopedia
ಕಪ್ಪುಸಮುದ್ರಕ್ಕೂ ಕ್ಯಾಸ್ಪಿಯನ್ ಸಮುದ್ರಕ್ಕೂ ನಡುವೆ ಇರುವ ಕೆರ್ಚ್ ಜಲಸಂಧಿಯ ಬಳಿಯಿಂದ ಹಿಡಿದು ಕ್ಯಾಸ್ಪಿಯನ್ ಸಮುದ್ರದ ವರೆಗೆ ವಾಯುವ್ಯದಿಂದ ಆಗ್ನೇಯಾಭಿಮುಖವಾಗಿ 900 ಮೈಲಿಗಳಷ್ಟು ದೂರ ಹಬ್ಬಿರುವ ಪರ್ವತ ಶ್ರೇಣಿ.[1] ಸಮ ಹರಡು, ಕಿರು ಅಗಲ, ಉತ್ತರ ದಕ್ಷಿಣ ಪಕ್ಕಗಳ ಖಚಿತ ಹೊರರೇಖೆ-ಇವುಗಳಿಂದಾಗಿ ಅದು ಆಲ್ಪ್ಸ್ ಪರ್ವತಕ್ಕಿಂತ ಪಿರೆನೀಸ್ ಪರ್ವತವನ್ನೇ ಹೆಚ್ಚಾಗಿ ಹೋಲುತ್ತದೆ. ಪಿರೆನೀಸಿನಂತೆ ಇದೂ ಎತ್ತರ. ಆಲ್ಪ್ಸ್ ಪರ್ವತದಂತೆ ಇದನ್ನು ಕಣಿವೆಗಳು ಸೀಳಿಲ್ಲ. ಪಿರೆನೀಸ್ ಪರ್ವತದಂತೆ ಕಾಕಸಸಿನ ಅತ್ಯುನ್ನತ ಶಿಖರಗಳೂ ಇದರ ಉಪಶ್ರೇಣಿಗಳಲ್ಲಿವೆಯೇ ಹೊರತು ಪ್ರಧಾನ ಶ್ರೇಣಿಯಲ್ಲಿಲ್ಲ.