From Wikipedia, the free encyclopedia
ಕಾಡ್ಲಿವರ್ ಎಣ್ಣೆ ಕಾಡ್ ಮೀನುಗಳ ಯಕೃತ್ತಿನಿಂದ ಅಸವಿಸಿದ ಅಥವಾ ಸಾರೀಕರಿಸಿದ ಎಣ್ಣೆ.
ಕಾಡ್ಲಿವರ್ ಎಣ್ಣೆಯು ಜೀವಸತ್ವ ಎ ಮತ್ತು ಜೀವಸತ್ವ ಡಿ ಸಮೃದ್ಧವಾಗಿದೆ.ಇದರಲ್ಲಿ ಉನ್ನತ ಮಟ್ಟದ ಒಮೆಗ-೩ ಎಂಬ ಕೊಬ್ಬಿನ ಅಮ್ಲಗಳಿದೆ.
ಕಾಡ್ಲಿವರ್ ಎಣ್ಣೆಯನ್ನು ಪರಂಪರಾಗತವಾಗಿ ಪೀಪಾಯಿಯಲ್ಲಿ ಕಾಡ್ ಮೀನಿನ ಯಕೃತ್ತನ್ನು ಸಮುದ್ರದ ನೀರಿನೊಂದಿಗೆ ತುಂಬಿ ವರ್ಷದವರೇಗೆ ಹುಳಿಬರಲು ಬಿಡುತ್ತಾರೆ.ಅನಂತರ ಅದರಿಂದ ಎಣ್ಣೆಯನ್ನು ಬೇರ್ಪಡಿಸುತ್ತಾರೆ.[1] .ನವೀನ ಮಾದರಿಯಲ್ಲಿ ಅಡುಗೆಗೆ ಉಪಯೋಗಿಸುವ ಕಾಡ್ ಮೀನನ್ನು ಇಡಿಯಾಗಿ ಬೇಯಿಸಿ ಅದರಿಂದ ಎಣ್ಣೆಯನ್ನು ಬೇರ್ಪಡಿಸುವ ವಿಧಾನದಿಂದ ಪಡೆಯುತ್ತಾರೆ.
ಕಾಡ್ಲಿವರ್ ಎಣ್ಣೆಯನ್ನು ಜೀವಸತ್ವ ಎ ಮತ್ತು ಜೀವಸತ್ವ ಡಿ ಕೊರತೆಯಿಂದ ಉಂಟಾಗುವ ಖಾಯಿಲೆ ಮತ್ತು ತೊಂದರೆಗಳ ನಿವಾರಣೆಗೆ ಉಪಯೋಗಿಸುತ್ತಾರೆ.ಕಾಡ್ಲಿವರ್ ಎಣ್ಣೆಯು ಹೃದಯದ ಕೆಲಸದ ಮೇಲೆ ಸತ್ಪರಿಣಾಮ ಬೀರುವ ಬಗ್ಗೆ ಸಂಶೋಧನೆಗಳು ತಿಳಿಸುತ್ತವೆ.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.