ಕಾರ್ಲ್ ಸಗಾನ್
From Wikipedia, the free encyclopedia
ಕಾರ್ಲ್ ಎಡ್ವರ್ಡ್ ಸಗಾನ್ English pronunciation: /ˈseɪɡən/ ಅಮೇರಿಕಾದ ಪ್ರಖ್ಯಾತ ಖಗೋಳ ವಿಜ್ಞಾನಿ (ನವಂಬರ್ 9, 1934-ಡಿಸೆಂಬರ್ 20, 1996). ಜೊತೆಗೆ ಆತನೊಬ್ಬ ಪರಿಸರ ತಜ್ಞ, ಖ್ಯಾತ ಲೇಖಕನೂ ಹೌದು. ಜಗತ್ತಿಗೆ ಖಗೋಳ ಶಾಸ್ತ್ರ, ಖಗೋಳ-ಭೌತ ವಿಜ್ಞಾನದ ಬಗ್ಗೆ ಅಷ್ಟೇ ಅಲ್ಲದೆ, ಇತರ ಸಹಜ ವಿಜ್ಞಾನಗಳ ಬಗ್ಗೆಯೂ ತಿಳಿಸಿಕೊಟ್ಟ ಅತ್ಯಂತ ಯಶಸ್ವೀ ಖಗೋಳ-ಭೌತ ವಿಜ್ಞಾನಿ, ಕಾರ್ಲ್ ಸಗಾನ್. ತನ್ನ ಜೀವಿತಾವಧಿಯಲ್ಲಿ 600ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು, ಜನಪ್ರಿಯ ಉಪನ್ಯಾಸಗಳನ್ನು, ಪ್ರಬಂಧಗಳನ್ನು ಮಂಡಿಸಿರುವ ಸಗಾನ್ ತನ್ನ 20ಕ್ಕೂ ಹೆಚ್ಚು ಪುಸ್ತಕಗಳಿಗೆ ಸ್ವತಃ ಲೇಖಕ, ಸಹ-ಲೇಖಕ, ಮತ್ತು ಸಂಪಾದಕನಾಗಿ ಕೆಲಸ ಮಾಡಿದ್ದಾರೆ. ಅವರ ಕೃತಿಗಳಲ್ಲಿ, ಸಾಮಾನ್ಯವಾಗಿ ಆತ ಸ್ಕೆಪ್ಟಿಕಲ್ ಇನ್ಕ್ವಯರಿ ಮತ್ತು ಸೈಂಟಿಫಿಕ್ ಮೆಥಡ್ಡುಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಾನೆ. ಎಕ್ಸೋ-ಬಯಾಲಜಿಯನ್ನು ಮೊತ್ತ ಮೊದಲ ಬಾರಿಗೆ ಅಭ್ಯಸಿಸಿದ ಕಾರ್ಲ್, ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್ ನ ಹುಡುಕಾಟ (SETI)ದ ಸಂಶೋಧನೆಗೂ ನಾಂದಿ ಹಾಡುತ್ತಾನೆ.
Carl Sagan | |
---|---|
ಜನನ | (೧೯೩೪-೧೧-೦೯)೯ ನವೆಂಬರ್ ೧೯೩೪ Brooklyn, New York |
ಮರಣ | December 20, 1996(1996-12-20) (aged 62) Seattle, Washington, U.S. |
ವಾಸಸ್ಥಳ | United States[1] |
ರಾಷ್ಟ್ರೀಯತೆ | American |
ಕಾರ್ಯಕ್ಷೇತ್ರ | Astronomy and planetary science |
ಸಂಸ್ಥೆಗಳು | Cornell University Harvard University |
ಅಭ್ಯಸಿಸಿದ ವಿದ್ಯಾಪೀಠ | University of Chicago |
ಪ್ರಸಿದ್ಧಿಗೆ ಕಾರಣ | Search for Extra-Terrestrial Intelligence (SETI) Cosmos: A Personal Voyage Cosmos Voyager Golden Record Pioneer plaque Contact Pale Blue Dot |
ಗಮನಾರ್ಹ ಪ್ರಶಸ್ತಿಗಳು | Oersted Medal (1990) NASA Distinguished Public Service Medal (twice) Pulitzer Prize for General Non-Fiction (1978) National Academy of Sciences Public Welfare Medal (1994) |
ಸಗಾನ್ ವಿಶ್ವಮಟ್ಟದ ಖ್ಯಾತಿಯನ್ನು ಪಡೆದದ್ದು ತನ್ನ ಜನಪ್ರಿಯ ವಿಜ್ಞಾನದ ಪುಸ್ತಕಗಳಿಗಾಗಿ ಮತ್ತು 1980ರಲ್ಲಿ ನಿರ್ಮಾಣವಾದ ಪ್ರಶಸ್ತಿ ಪುರಸ್ಕೃತ ಟೆಲಿವಿಶನ್ ಧಾರವಾಹಿಯೊಂದಕ್ಕೆCosmos: A Personal Voyage ಸಂಭಾಷಣೆ ಮತ್ತು ಪ್ರಸ್ತುತಿಯನ್ನು ರಚಿಸಿದ್ದಕ್ಕಾಗಿ.[2] ಈ ಕಾರ್ಯಕ್ರಮದ ಪ್ರಸ್ತುತಿಯ ಕುರಿತಾಗಿ ಪುಸ್ತಕವೊಂದು ಕೂಡ ಪ್ರಕಟವಾಗಿದೆ. ಸಗಾನ್ ಕಾಂಟ್ಯಾಕ್ಟ್ ಹೆಸರಿನ ಕಾದಂಬರಿಯನ್ನೂ ಬರೆಯುತ್ತಾನೆ. ಮುಂದೆ 1997ರಲ್ಲಿ ಅದೇ ಹೆಸರಿನ ಚಲನಚಿತ್ರವೊಂದು ನಿರ್ಮಾಣವಾಗುತ್ತದೆ.