From Wikipedia, the free encyclopedia
ಕಿಲಾ ಮುಬಾರಕ್ (ಪಂಜಾಬಿ:ਕ਼ਿਲਾ ਮੁਬਾਰਕ) ಭಾರತದ ಪಟಿಯಾಲದಲ್ಲಿರುವ ಸಿಖ್ ವಾಸ್ತುಶಿಲ್ಪದ ಪ್ರಾಚೀನ ಕೋಟೆಯಾಗಿದೆ.[1]
ಕಿಲಾ ಮುಬಾರಕ್ನ್ನು 1763 ರಲ್ಲಿ ಸಿಧು ಜಾಟ್ ದೊರೆ ಬಾಬಾ ಆಲಾ ಸಿಂಗ್ ಅವರು ಮೊದಲು 'ಕಚಿಗರ್ಹಿ' (ಮಣ್ಣಿನ ಕೋಟೆ) ಯಾಗಿ ನಿರ್ಮಿಸಿದರು.[2] ಇವರು ಪಟಿಯಾಲ ರಾಜವಂಶದ ಸ್ಥಾಪಕರಾಗಿದ್ದರು. ನಂತರ, ಇದನ್ನು ಬೇಕ್ ಮಾಡಿದ ಇಟ್ಟಿಗೆಗಳಲ್ಲಿ ಪುನರ್ನಿರ್ಮಿಸಲಾಯಿತು. ಕಿಲಾ ಅಂದ್ರೂನ್ ಎಂದು ಕರೆಯಲ್ಪಡುವ ಕಿಲಾದ ಆಂತರಿಕ ಭಾಗವನ್ನು ಮಹಾರಾಜ ಅಮರ್ ಸಿಂಗ್ ನಿರ್ಮಿಸಿದ್ದಾರೆ.[3]
ಪಟಿಯಾಲಾದ ರಾಜ ಮನೆತನದ ನಿವಾಸದ ಅರಮನೆಯಾದ ಕಿಲಾ ಮುಬಾರಕ್ ಸಂಕೀರ್ಣವನ್ನು ೧೦ ಎಕರೆ ಮೈದಾನದಲ್ಲಿ ನಗರದ ಹೃದಯಭಾಗದಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣ ಸಂಕೀರ್ಣವು ರಣ್ ಬಾಸ್ (ಅತಿಥಿ ಮನೆ ) ಮತ್ತು ದರ್ಬಾರ್ ಹಾಲ್ (ದಿವಾನ್ ಖಾನೆ) ಅನ್ನು ಹೊಂದಿದೆ.[4] ಜೊತೆಗೆ ಕಿಲಾ ಅಂದ್ರೂನ್ ಇದೆ. ಕಿಲಾದಲ್ಲಿ ಭೂಗತ ಒಳಚರಂಡಿ ವ್ಯವಸ್ಥೆಯೂ ಇದೆ.[5]
ಕಿಲಾ ಅಂದ್ರೂನ್ 13 ಅರಸರ ಕೋಣೆಗಳನ್ನು ಹೊಂದಿದ್ದು ಇವುಗಳಲ್ಲಿ ಹಿಂದೂ ಪುರಾಣದ ದೃಶ್ಯಗಳನ್ನು ಪಟಿಯಾಲ ಕಲಾ ಶೈಲಿಯಲ್ಲಿ ಚಿತ್ರಿಸಲಾಗಿದೆ.[6]
ದರ್ಬಾರ್ ಹಾಲ್ ನಲ್ಲಿ ಗುರು ಗೋವಿಂದ್ ಸಿಂಗ್ರ ಅಪರೂಪದ ಫಿರಂಗಿಗಳು, ಖಡ್ಗಗಳು, ಗುರಾಣಿಗಳು ಮತ್ತು ಗದೆಗಳು, ಕಠಾರಿಗಳು ಮತ್ತು ನಾದಿರ್ ಶಾನ ಖಡ್ಗವಿದೆ.[7]
300 ವರ್ಷಗಳಷ್ಟು ಹಳೆಯದಾದ ಕಟ್ಟಡವಾದ[8] ಕಿಲಾ 'ಕೆಟ್ಟ ಸ್ಥಿತಿಯಲ್ಲಿ'ದೆ[9] ಎಂದು ವಿವರಿಸಲಾಗಿದೆ ಮತ್ತು ವ್ಯಾಪಕವಾಗಿ ಹಾನಿಗೊಳಗಾಗಿದೆ.[10] ಕೋಟೆಯನ್ನು ವಿಶ್ವ ಸ್ಮಾರಕಗಳ ನಿಧಿಯು 2004 ರಲ್ಲಿ ವಿಶ್ವದ 100 "ಅತ್ಯಂತ ಅಪಾಯದ ಸ್ಮಾರಕಗಳಲ್ಲಿ" ಒಂದು ಎಂದು ವಿವರಿಸಿದೆ.[8]
ಭಾರತದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ನ್ಯಾಸವು ಕಿಲಾದ ಮರುಸ್ಥಾಪನೆ ಕಾರ್ಯವನ್ನು ಕೈಗೊಂಡಿದೆ. ಇದಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಸರ್ಕಾರಗಳ ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಆರ್ಥಿಕ ಸಹಾಯವನ್ನು ನೀಡಿದೆ.[11][12] ಇದರ ಸಂರಕ್ಷಣೆಗೆ ವಿಶ್ವ ಸ್ಮಾರಕಗಳ ವೀಕ್ಷಣಾ ಸಂಸ್ಥೆ ಕೂಡ ಧನಸಹಾಯ ನೀಡಿದೆ.[13][14][15]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.