ಕೀಲು ಕುದುರೆ ಕುಣಿತ
From Wikipedia, the free encyclopedia
Remove ads
ಕೀಲು ಕುದುರೆ ಕುಣಿತವು ಒಂದು ಜನಪದ ಕಲೆಯಾಗಿದೆ.[೧] ಕೀಲುಕುದುರೆ ಕುಣಿತವನ್ನು ಕರ್ನಾಟಕದ ಬಿಜಾಪುರ, ಬಳ್ಳಾರಿ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ, ಕೊಡಗು ಮತ್ತು ಇನ್ನು ಹಲವಾರು ಜಿಲ್ಲೆಗಳಲ್ಲಿ ಕುಣಿಯಲಾಗುತ್ತದೆ.[೨] ಕೊಡಗಿನಲ್ಲಿ ಇದನ್ನು 'ಪೊಯ್ ಕುದುರೆ' ಎಂದು ಹೇಳಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಕೀಲು ಕುದುರೆ ಎನ್ನುತ್ತಾರೆ. ಇದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕೀಲು ಕುದುರೆಗೆ ಸಂಬಂಧಪಟ್ಟಂತಹ ಅನೇಕ ಜನಪದ ಕಥೆಗಳು ಇಂದಿಗೂ ಪ್ರಚಲಿತದಲ್ಲಿವೆ.[೩]
Remove ads
ವೇಷಭೂಷಣ
ಕಲಾವಿದರು ರಾಜರಾಣಿಯಂತೆ ಕಿರೀಟ, ಭುಜಕೀರ್ತಿ, ಎದೆಹಾರ, ಸೊಂಟಕ್ಕೆ ಡಾಬು, ವೀರಗಚ್ಚೆ, ಮೀಸೆ, ಕಿವಿಗೆ ಲೋಲಾಕು ಇತ್ಯಾದಿಗಳನ್ನು ಧರಿಸುತ್ತಾರೆ. ಕೀಲು ಕುದುರೆಯನ್ನು ಬಿದಿರಿನ ದಬ್ಬೆ, ಮರದ ತಿರುಳು, ಕಾಗದದ ಗಂಜಿ ಮತ್ತು ಜೇಡಿಮಣ್ಣು ಬಳಸಿ ತಯಾರಿಸುತ್ತಾರೆ. ತಲೆ ಮತ್ತು ಕತ್ತಿನ ಭಾಗವನ್ನು ಚಿತ್ರಗಾರರು ಅಥವಾ ಕಲಾವಿದರು ಬಿಡಿಸುತ್ತಾರೆ. ಕುಣಿಯುವಾಗ ಮಾತ್ರ ಬಣ್ಣಗಳನ್ನು ಹಚ್ಚುತ್ತಾರೆ. ದೇಹದ ಭಾಗವನ್ನು ಬಿಳಿ ಸ್ಯಾಟಿನ್ ವಸ್ತ್ರದಿಂದ ಇಳಿಬಿಟ್ಟಂತೆ ಮಾಡಿ ದೇಹಾಕಾರಕ್ಕೆ ಹೊದಿಸಿರುತ್ತಾರೆ. ಕೀಲು ಕುದುರೆಯನ್ನು ಕುಣಿವವನ ಸೊಂಟ ಭಾಗಕ್ಕೆ ಹಿಡಿಸುವಂತೆ ಮಾಡಿ ದೇಹಾಕಾರಕ್ಕೆ ಹೊಂದಿಸಿರುತ್ತಾರೆ. ಕುಣಿಯುವವನು ಸಾಧಾರಣವಾಗಿ ಮರಗಾಲು ಕಟ್ಟಿಕೊಂಡಿರುತ್ತಾನೆ. ಕೆಲವೊಮ್ಮೆ ಮರಗಾಲಿಲ್ಲದೆಯೂ ಕುಣಿಯುತ್ತಾರೆ.[೪]
Remove ads
ಕುಣಿತ
ಕೈಯಲ್ಲಿ ಲಗಾಮು ಹಿಡಿದು ಕುದುರೆಯ ತಲೆ, ಬಾಲವನ್ನು ಮೇಲೆ ಕೆಳಗೆ ಆಡಿಸುತ್ತ ಕುಣಿಯುತ್ತಾರೆ.
ನಾಗಸ್ವರ, ಡೋಲು, ತಮಟೆಗಳ ಹಿಮ್ಮೇಳದೊಂದಿಗಿನ ಕೀಲು ಕುದುರೆ ಕುಣಿತದಲ್ಲಿ ರಾಜನ ಪಾತ್ರಧಾರಿಗಳು ಇರುವಂತೆಯೇ ರಾಣಿಯರ ಪಾತ್ರಗಳೂ ಇದೆ. ಗಂಡಸರೇ ಸ್ತ್ರೀವೇಷವನ್ನು ಧರಿಸುತ್ತಾರೆ. ಕೆಲವೊಮ್ಮೆ ಇದರೊಂದಿಗೆ ನವಿಲು ನೃತ್ಯವೂ ಸೇರಿಕೊಂಡಿರುತ್ತದೆ.[೫][೬][೭]
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads