![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/55/Emblem_of_India.svg/langkn-640px-Emblem_of_India.svg.png&w=640&q=50)
ಕೇಂದ್ರ ಲೋಕ ಸೇವಾ ಆಯೋಗ
From Wikipedia, the free encyclopedia
ಇದು ಭಾರತದ ಒಂದು ಕೇಂದ್ರೀಯ ಸಂಸ್ಥೆಯಾಗಿದ್ದು ಸಾರ್ವಜನಿಕ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಿ ಲೋಕ ಸೇವಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗುವ ಅಧಿಕಾರವನ್ನು ಹೊಂದಿದೆ. ಭಾರತೀಯ ನಾಗರೀಕ ಸೇವಾ ಪರೀಕ್ಷೆ, ಇಂಜಿನಿಯರಿಂಗ್ ಸೇವಾ ಪರೀಕ್ಷೆ, ಕಂಬೈನ್ಡ್ ಡಿಫೆನ್ಸ್ ಸೇವಗಳ ಪರೀಕ್ಷೆ, ರಾಷ್ಟ್ರೀಯ ಸೇನಾ ಅಕಾಡೆಮಿ ಪರೀಕ್ಷೆ,ಜಲ ಸೇನಾ ಅಕಾಡೆಮಿ ಪರೀಕ್ಷೆ, ಭಾರತೀಯ ಅರಣ್ಯ ಸೇವೆ ಪರೀಕ್ಷೆ, ಭಾರತೀಯ ಅರ್ಥ ಸೇವೆ ಪರೀಕ್ಷೆ, ಭಾರತೀಯ ಸಂಖ್ಯಾ ಸೇವೆ ಪರೀಕ್ಷೆ, ಸಂಯೋಜಿತ ಭೂಗರ್ಭವಿಜ್ಞಾನ ಹಾಗು ಭೂಗರ್ಭ ತಜ್ಞರ ಪರೀಕ್ಷೆ ಹಾಗು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಗಳನ್ನು ಕೇಂದ್ರ ಲೋಕ ಸೇವಾ ಆಯೋಗವು ಕಾಲ ಕಾಲಕ್ಕೆ ತಕ್ಕಂತೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
![]() | |
ಸಂಕ್ಷಿಪ್ತ ಹೆಸರು | ಯು ಪಿ ಎಸ್ ಸಿ |
---|---|
ಸ್ಥಾಪನೆ | ೧ ಅಕ್ಟೊಬರ್ ೧೯೨೬ |
ಶೈಲಿ | ಭಾರತ ಸರ್ಕಾರ |
ಸ್ಥಳ |
|
ಪ್ರದೇಶ served | ಭಾರತ |
Chairman | [ಪ್ರದೀಪ್ ಕುಮಾರ್ ಜೋಶಿ] |
ಪೋಷಕ ಸಂಸ್ಥೆಗಳು | ಭಾರತ ಸರ್ಕಾರ |
ಅಂಗಸಂಸ್ಥೆಗಳು | ಭಾರತ ಸರ್ಕಾರ |
ಅಧಿಕೃತ ಜಾಲತಾಣ | upsc |
ಪರೀಕ್ಷೆಗಳು ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯ, ಭೌದ್ದಿಕ ಸಾಮರ್ಥ್ಯಗಳನ್ನು ಅಳೆಯುವ ಬಹು ಮುಖ್ಯ ಸಾಧನಗಳಾಗಿರುತ್ತವೆ. ಸೇನೆ , ಹಾಗು ಪೊಲೀಸ್ ಸೇವೆಗಳಂತಹ ಸೇವೆಗಳಿಗಾಗಿ ಅಭ್ಯರ್ಥಿಗಳು ಹಾಜರಾದರೆ ಅಂತಹ ಅಭ್ಯರ್ಥಿಗಳಿಗೆ ಮಾನಸಿಕ ಹಾಗು ಭೌದ್ಧಿಕ ಸಾಮರ್ಥ್ಯದ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಪರೀಕ್ಷಿಸಲಾಗುತ್ತದೆ.
ದೇಶದಾದ್ಯಂತ ನಾಗರೀಕ ಸೇವೆಗಳಿಗೆ ಪರೀಕ್ಷೆಗಳನ್ನು ನಡೆಸಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರ ಸಂವಿಧಾನದಲ್ಲೇ ಪ್ರಸ್ತಾಪವಾಗಿದೆ. ಸಂವಿಧಾನದ ಹದಿನಾಲ್ಕನೇ ವಿಭಾಗದ ಆರ್ಟಿಕಲ್ ೩೧೫ ರಿಂದ ೩೨೩ ರವರೆವಿಗೆ 'ಕೇಂದ್ರ ಹಾಗು ರಾಜ್ಯಗಳಡಿಯ ಸೇವೆಗಳು' ಎಂಬ ತಲೆಬರಹದಡಿಯಲ್ಲಿ ನಾಗರೀಕ ಹುದ್ದೆಗಳಿಗೆ ಕೇಂದ್ರ ಹಾಗು ರಾಜ್ಯಸರ್ಕಾರಗಳು ವ್ಯವಸ್ಥಿತ ಆಯೋಗವನ್ನು ಹೊಂದಬೇಕೆನ್ನುವುದು ನಮೂದಾಗಿದೆ. ಇದುವರೆವಿಗೂ ನಡೆದಿರುವ ಕೇಂದ್ರೀಯ ಲೋಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಸಫಲತಾ ಪ್ರಮಾಣ ೦.೧% ದಿಂದ ೦.೩% ಇದೆ.