ಕ್ಯೂಬ್ (ಘನಾಕೃತಿ)
From Wikipedia, the free encyclopedia
Lua error in package.lua at line 80: module 'Module:Pagetype/setindex' not found. ಟೆಂಪ್ಲೇಟು:Reg polyhedron stat table ರೇಖಾಗಣಿತದಲ್ಲಿ, ಒಂದು ಕ್ಯೂಬ್ (ಘನ)ಎಂಬುದು ಒಂದು ತ್ರಿವಿಮಿತೀಯ ಘನಾಕೃತಿಯ ವಸ್ತುವಾಗಿದೆ. ಇದು ಆರು ಚೌಕಾಕಾರದ ಮುಖಗಳು, ಪಾರ್ಶ್ವಗಳು ಅಥವಾ ಬದಿಗಳಿಂದ ಪರಿಮಿತಿಯನ್ನು ಹೊಂದಿದ್ದು, ಇದರಲ್ಲಿ ಮೂರು ಬದಿಗಳು ಪ್ರತಿ ಬಹುಭುಜದಲ್ಲಿ ಸೇರುತ್ತವೆ. ಘನವನ್ನು ಒಂದು ಸಾಮಾನ್ಯ ಷಣ್ಮುಖ (ಆರು ಮುಖಗಳಿರುವ ಒಂದು ಘನ ಕಾಯ)(ಹೆಕ್ಸಾಹೆಡ್ರಾನ್) ಎಂದೂ ಕರೆಯಬಹುದು ಜೊತೆಗೆ ಇದು ಐದು ಪ್ಲೇಟಾನಿಕ್ ಕಾಯಗಳಲ್ಲಿ ಒಂದೆನಿಸಿದೆ. ಇದೊಂದು ಆಯತಾಕೃತಿಯ ಸಮಾಂತರುಪರಿಪದಿ ಹಾಗು ತ್ರಿಕೋನೀಯ ಟ್ರಾಪೆಜೊಹೆಡ್ರಾನ್ ನ ವಿಶೇಷ ಬಗೆಯ ಚತುಷ್ಕೋನದ ಪ್ರಿಸಮ್(ಪಕ್ಕಗಳೆಲ್ಲವೂ ಸಮಾಂತರ ಚತುರ್ಭುಜಗಳಾಗಿಯೂ ಇರುವ ಘನ ಆಕೃತಿ) ಆಗಿದೆ. ಘನವು ಆಕ್ಟಹೆಡ್ರನ್(ಅಷ್ಟಮುಖಿಯ) ದ್ವಿರೂಪವಾಗಿದೆ. ಇದಕ್ಕೆ ಘನಾಕೃತಿಯ ಸಮಸೂತ್ರತೆಯಿದೆ (ಇದನ್ನು ಅಷ್ಟಮುಖೀಯ ಸಮಸೂತ್ರತೆ ಎಂದೂ ಕರೆಯಲಾಗುತ್ತದೆ).
ಒಂದು ಘನವು ಒಂದು ಹೈಪರ್ ಕ್ಯೂಬ್ ನ ಸಾಧಾರಣ ಕಲ್ಪನೆಯಲ್ಲಿ ಹೆಚ್ಚಿದ ತ್ರಿವಿಮಿತೀಯ ಮಾದರಿಯಾಗಿದೆ.
ಇದು 11 ಬಲೆಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ.[1] ಒಬ್ಬರು ಒಂದು ಘನಕ್ಕೆ ಬಣ್ಣ ಹಚ್ಚಬೇಕಾದರೆ, ಯಾವುದೇ ಎರಡು ಪಾರ್ಶ್ವ ಮುಖಗಳು ಒಂದೇ ಬಣ್ಣವನ್ನು ಹೊಂದಿರುವುದಿಲ್ಲ, ಅದಕ್ಕೆ ಬಣ್ಣ ತುಂಬಬೇಕಾದರೆ 3 ಬಣ್ಣಗಳ ಅಗತ್ಯವಿದೆ.
ಮೂಲ ಘನದ ಅಂಚಿನ ಉದ್ದವು 1 ಆಗಿದ್ದರೆ, ಅದರ ದ್ವಿರೂಪದ ಆಕ್ಟಹೆಡ್ರನ್(ಅಷ್ಟಮುಖಿ) ಅಂಚಿನ ಉದ್ಧವು ಆಗಿರುತ್ತದೆ.