ಖಾಂಡವಿ
From Wikipedia, the free encyclopedia
ಖಾಂಡವಿ (ಸುರಳೀಚಿ ವಡಿ) ಮಹಾರಾಷ್ಟ್ರ ಮತ್ತು ಗುಜರಾತ್ ನ ಪಾಕಶೈಲಿಯಲ್ಲಿನ ಒಂದು ಖಾರದ ಲಘು ಆಹಾರ.[2][3] ಇದು ಹಳದಿ, ಬಿಗಿಯಾಗಿ ಸುತ್ತಲಾದ ತುತ್ತು ಗಾತ್ರದ ತುಂಡುಗಳನ್ನು ಹೊಂದಿರುತ್ತದೆ ಮತ್ತು ಇದನ್ನು ಪ್ರಧಾನವಾಗಿ ಕಡಲೆಹಿಟ್ಟು ಮತ್ತು ಮೊಸರಿನಿಂದ ತಯಾರಿಸಲಾಗುತ್ತದೆ.
Quick Facts ಮೂಲ, ಮೂಲ ಸ್ಥಳ ...
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಗುಜರಾತ್, ಮಹಾರಾಷ್ಟ್ರ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಕಡಲೆ ಹಿಟ್ಟು, ಮೊಸರು[1] |
Close
ಖಾಂಡವಿ ಭಾರತದಾದ್ಯಂತ ಸುಲಭವಾಗಿ ಲಭ್ಯವಿದೆ ಮತ್ತು ಸಾಮಾನ್ಯವಾಗಿ ಕ್ಷುಧಾವರ್ಧಕ ಅಥವಾ ಲಘು ಆಹಾರವಾಗಿ ತಿನ್ನಲ್ಪಡುತ್ತದೆ. ಅನೇಕ ಜನರು ಇದನ್ನು ಮನೆಯಲ್ಲಿ ತಯಾರಿಸುವ ಬದಲು ಸ್ಥಳೀಯ ಅಂಗಡಿಗಳಿಂದ ಖರೀದಿಸಲು ಇಷ್ಟಪಡುತ್ತಾರೆ. ಇದನ್ನು ಕೆಲವೊಮ್ಮೆ ಬೆಳ್ಳುಳ್ಳಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.[4]