ಗುಲಗಂಜಿ
From Wikipedia, the free encyclopedia
ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು ಕೆಂಪು ಬಣ್ಣದ ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಚುಕ್ಕೆಯಿರುವ ಸಣ್ಣ ಬೀಜವೇ ಗುಲಗಂಜಿ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜಗಳನ್ನು ಬಳಸುತ್ತಿದ್ದರು.ಈಗಲೂ ಗ್ರಾಮೀಣ ಪ್ರದೇಶದಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗುತ್ತದೆ.ಗುಲಗಂಜಿ ಗಿಡ ಹಳದಿ ಬಣ್ಣದ್ದಾಗಿದ್ದು, ಕೆಂಪು ಹೂಗಳನ್ನು ಬಿಡುತ್ತದೆ.ಗುಲಗಂಜಿ ಬೀಜಗಳು ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದಿಂದ ಕೂಡಿರುತ್ತವೆ[1].ಗುಲಗಂಜಿಯಲ್ಲಿ `ಅಬ್ರಿನ್` ಎನ್ನುವ ಅಪಾಯಕಾರಿಯಾದ ಅಂಶವಿದೆ.ಇದು ನಾಗರಹಾವಿನ ವಿಷಕ್ಕಿಂತಲೂ ಹೆಚ್ಚು ತೀಕ್ಷ್ಣವಾಗಿದೆ[2].
Quick Facts ಗುಲಗಂಜಿ, Scientific classification ...
ಗುಲಗಂಜಿ | |
---|---|
Scientific classification | |
ಸಾಮ್ರಾಜ್ಯ: | ಸಸ್ಯಗಳು |
(ಶ್ರೇಣಿಯಿಲ್ಲದ್ದು): | ಆವೃತ ಬೀಜಿಗಳು |
(ಶ್ರೇಣಿಯಿಲ್ಲದ್ದು): | ಯೂಡಿಕೋಟ್ಸ್ |
(ಶ್ರೇಣಿಯಿಲ್ಲದ್ದು): | ರೋಸಿಡ್ಸ್ |
ಗಣ: | ಫಬೆಲ್ಸ್ |
ಕುಟುಂಬ: | ಫಭಾಸಿಯೆ |
ಕುಲ: | ಅಬ್ರಸ್ |
ಪ್ರಜಾತಿ: | ಎ.ಪ್ರೆಕಾಟೋರಿಯಸ್ |
Binomial name | |
ಅಬ್ರಸ್ ಪ್ರೆಕಾಟೋರಿಯಸ್ L., 1753 | |
Close
`ಏಬ್ರಸ್ ಪ್ರಿಕಟೋರಿಯಸ್`- ಗುಲಗಂಜಿಯ ಸಸ್ಯಶಾಸ್ತ್ರೀಯ ಹೆಸರು `ಏಬ್ರಸ್ ಪ್ರಿಕಟೋರಿಯಸ್`. ಇಂಗ್ಲೀಷ್ನಲ್ಲಿ ಇದಕ್ಕೆ `ಇಂಡಿಯನ್ ಲಿಕೋರಿಸ್` ಎನ್ನುತ್ತಾರೆ.
ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು.
ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ ಆಗಿದೆ.