ಗೂಗಲ್ ವಿಶ್ಲೇಷಣೆಗಳು
From Wikipedia, the free encyclopedia
ಗೂಗಲ್ ವಿಶ್ಲೇಷಣೆಗಳು (GA) ಎಂಬುದು ಗೂಗಲ್ ನವರು ಒದಗಿಸುತ್ತಿರುವ ಶುಲ್ಕರಹಿತ ಮುಕ್ತ ಸೇವೆ, ಇದರಲ್ಲಿ ಒಂದು ವೆಬ್ಸೈಟ್ ಗೆ ಭೇಟಿ ಕೊಡುವವರ ಬಗ್ಗೆ ವಿವರವಾದ ಅಂಕಿ ಅಂಶ ಗಳನ್ನು ವಿಕಾಸಗೊಳಿಸಿ ಕೊಡುತದೆ. ಗೂಗಲ್ ವಿಶ್ಲೇಷಣಾಕರ್ತರ ಗಮನ ವ್ಯಾಪಾರಸ್ಥರನ್ನು ಸೆಳೆವ ಉತ್ಪನ್ನಗಳ ಮೇಲೆಯೇ ಇರುತ್ತದೆ, ವೆಬ್ಮಾಸ್ಟರ್ಸ್ ಮತ್ತು ತಂತ್ರಜ್ಞರು ಇದನ್ನು ವಿರೋಧಿಸಿದರೂ ಅವರಿಂದಲ್ಲೇ ವೆಬ್ ಅನಾಲಿಟಿಕ್ಸ್ ಉದ್ಯಮ ಮೂಲಭೂತವಾಗಿ ಬೆಳೆಯುವುದು. ಇದೊಂದು, ವೆಬ್ಸೈಟ್ಗಳ ಬಗ್ಗೆ ಅದನ್ನು ಭೇಟಿ ಮಾಡುವವರ ಬಗ್ಗೆ ಅಂಕಿ ಅಂಶಗಳನ್ನು ನೀಡುವ ಸೇವೆಯಾಗಿರುತ್ತದೆ,[1] ಇದನ್ನು ವ್ಯಾಪಕವಾಗಿ ಬಳಸುವುದು ಕಂಡು ಬರುತ್ತದೆ, ಪ್ರಸ್ತುತ ಇದರ ಬಳಕೆ 10,000 ಜನಪ್ರಿಯ ವೆಬ್ಸೈಟ್ಗಳಲ್ಲಿ ಸುಮಾರು 57%ರಷ್ಟು ಇದೆ.[2]
This article contains content that is written like an advertisement. (March 2009) |
ಅಭಿವೃದ್ಧಿಪಡಿಸಿದವರು | |
---|---|
ಕಾರ್ಯಾಚರಣಾ ವ್ಯವಸ್ಥೆ | Cross-platform (web-based application) |
ವಿಧ | Statistics, Analysis |
ಅಧೀಕೃತ ಜಾಲತಾಣ | http://google.com/analytics |
ಎಲ್ಲಾ ರೀತಿಯ ಉಲ್ಲೇಖದಾರರಿಂದಲ್ಲೂ ವೆಬ್ಸೈಟ್ಗೆ ಭೇಟಿ ಕೊಡುವವರ ಬಗ್ಗೆ GAಯು ಜಾಡು ಹಿಡಿಯ ಬಲ್ಲುದಾಗಿರುತ್ತದೆ, ಅವುಗಳಲ್ಲಿ, ಸರ್ಚ್ ಇಂಜಿನ್ ಗಳಿಂದ, ಜಾಹೀರಾತು ಪ್ರದರ್ಶಕಗಳಿಂದ, ಪೇ-ಪರ್-ಕ್ಲಿಕ್ ಜಾಲಗಳಿಂದ, ಇಮೇಲ್ ಮಾರ್ಕೆಟಿಂಗ್ ಮತ್ತು ದಾಖಲೆಗಳೊಳಗಿನ PDF ಲಿಂಕ್ಗಳ ಡಿಜಿಟಲ್ ಕೊಲಾಟೆರಲ್ಗಳು ಮುಂತಾದ ಕಡೆಯಿಂದಲ್ಲೂ ಸೇರಿರುತ್ತದೆ.
ಆಡ್ಪದ ಗಳಿಂದ ಸಂಯೋಜಿಸಿರುವುದರಿಂದ, ಬಳಸುವವರು ಲ್ಯಾಂಡಿಂಗ್ ಪೇಜ್ ಕ್ವಾಲಿಟಿ ಮತ್ತು ಪರಿವರ್ತನೆಗಳು (ಗುರಿ)ಯನ್ನು ಬಳಸುತ್ತ ಆನ್ಲೈನ್ ವಿಮರ್ಶೆಯ ಅಭಿಯಾನವನ್ನು ಮಾಡಬಹುದಾಗಿದೆ. ಗುರಿಯೆಂದರೆ ಅದರಲ್ಲಿ ಮಾರಾಟ, ತಲೆಬರಹದ ವಿಕಾಸ, ಒಂದು ನಿರ್ದಿಷ್ಟ ಪುಟವನ್ನು ವೀಕ್ಷಿಸುವುದು ಅಥವಾ ನಿರ್ದಿಷ್ಟ ಫೈಲೊಂದನ್ನು ಡೌನ್ಲೋಡ್ ಮಾಡುವುದು-ಸೇರಿರುತ್ತದೆ. ಇವೆಲ್ಲವನ್ನು ನಾಣ್ಯೀಕರಿಸಲೂ ಬಹುದು. ಈ GA ಅನ್ನು ಬಳಸುವುದರಿಂದ ವ್ಯಾಪಾರಸ್ಥರು ಯಾವ ಜಾಹೀರಾತು ಹೇಗೆ ಕಾರ್ಯನಿರ್ವಹಸುತ್ತಿದೆ ಯಾವುದು ನಿರ್ವಹಿಸುತ್ತಿಲ್ಲ ಎಂದು ವಿವರ ಪಡೆಯಬಹುದು ಹೀಗೆ ಮಾಡುವುದರಿಂದ ಯಾವ ಅಭಿಯಾನಕ್ಕೆ ಭರವಸೆ ಇಡಬಹುದು ಅಥವಾ ಯಾವುದನ್ನು ತೆಗೆದು ಹಾಕಬಹುದೆಂದು ತೀರ್ಮಾನಕ್ಕೆ ಬರಲು ಅನುಕೂಲವಾಗುತ್ತದೆ.
ಸಮಾನ್ಯ ಬಳಕೆಯದಾರರಿಗೆ GAಯು ತೊಡಗಿಸಿಕೊಳ್ಳುವುದು ದೊಡ್ಡ ಮಟ್ಟದ ಡ್ಯಾಷ್ಬೋರ್ಡ್-ಶೈಲಿಯ ಮಾಹಿತಿಯನ್ನು ತೋರಿಸುವ ಉದ್ದೇಶದಿಂದ, ಮತ್ತು ವರದಿಯ ಭಾಗದಲ್ಲಿ ಆಳವಾದ ಮಾಹಿತಿಯನ್ನೂ ಕೊಡುವುದಾಗಿದೆ. GA ವಿಶ್ಲೇಷಣದ ಬಳಕೆಯಿಂದ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಟಗಳನ್ನು ಫನ್ನಲ್ ವಿಶ್ಯೂಲೈಜೇಷನ್ ತಂತ್ರಗಾರಿಕೆಯಿಂದ ಗುರುತಿಸಬಹುದಾಗಿದೆ ಜೊತೆಗೆ ಯಾವ (ಉಲ್ಲೇಖದಾರರ ಕಡೆಯಿಂದ) ವೆಬ್ಸೈಟ್ ಭೇಟಿಗಾರರು ಬಂದಿರುತ್ತಾರೆ, ಎಷ್ಟು ಹೊತ್ತು ಅಲ್ಲಿದ್ದರು ಮತ್ತು ಅವರ ಭೌಗೋಳಿಕ ಸ್ಥಾನವೇನು ಎಂದು ತಿಳಿಯಬಹುದು. ಇದು, ಗ್ರಾಹಕ ಯಾವ ವಿಭಾಗಕ್ಕೆ ಸೇರುತ್ತಾನೆ ಎಂಬಂತಹ ಉನ್ನತ ಗುಣಲಕ್ಷಣಗಳನ್ನೂ ಕೂಡ ಒದಗಿಸುತ್ತದೆ.
ಬಳಕೆದಾರರು ಅಧಿಕೃತವಾಗಿ 50 ವೆಬ್ಸೈಟ್ಗಳ ಪಾರ್ಶ್ವಚಿತ್ರವನ್ನು ಕೂಡಿಸಬಹುದು. ಪ್ರತಿಯೊಂದು ಪಾರ್ಶ್ವಚಿತ್ರವು ಸಾಮಾನ್ಯವಾಗಿ ಒಂದು ವೆಬ್ಸೈಟ್ ಗೆ ಹೊಂದಿಕೆಯಾಗಿರುತ್ತದೆ. ಆಡ್ವರ್ಡ್ಸ್ ಅಭಿಯಾನಕ್ಕೆ ನಂಟು ಮಾಡುವವರೆಗೂ, ಮಾಸವೊಂದರಲ್ಲಿ 5 ದಶಲಕ್ಷ ಪುಟಗಳ ವೀಕ್ಷಣೆಗೆ (ಅಂದರೆ ಪ್ರತಿ ಸೆಕೆಂಡಿಗೆ 2 ಪುಟಗಳ ವೀಕ್ಷಣೆ)ಯ ಸೈಟ್ಗಳಿಗೆ ಇದು ಸೀಮಿತಗೊಂಡಿದೆ.[3]