ಚಾಕು
From Wikipedia, the free encyclopedia
From Wikipedia, the free encyclopedia
ಚಾಕು (ಚೂರಿ) ಹಿಡಿಕೆಗೆ ಜೋಡಣೆಗೊಂಡ ಕತ್ತರಿಸುವ ಅಂಚು ಅಥವಾ ಅಲಗು ಇರುವ ಉಪಕರಣ. ಮಾನವಕುಲವು ಬಳಸಿದ ಅತ್ಯಂತ ಮುಂಚಿನ ಉಪಕರಣವಾದ ಚಾಕುವು ಕನಿಷ್ಠಪಕ್ಷ ಎರಡೂವರೆ ಮಿಲಿಯನ್ ವರ್ಷಗಳಷ್ಟು ಹಿಂದೆ ಕಾಣಿಸಿಕೊಂಡಿತು. ಓಲ್ಡೊವಾನ್ ಉಪಕರಣಗಳು ಇದಕ್ಕೆ ಸಾಕ್ಷಿ ಒದಗಿಸಿದೆ.[1][2] ಮೂಲತಃ ಇದನ್ನು ಕಟ್ಟಿಗೆ, ಮೂಳೆ ಮತ್ತು (ಚಕಮಕಿ ಕಲ್ಲು ಹಾಗೂ ಕಾರ್ಗಲ್ಲಿನಂತಹ) ಕಲ್ಲಿನಿಂದ ತಯರಿಸಲಾಗುತ್ತಿತ್ತು. ಶತಮಾನಗಳು ಕಳೆದಂತೆ, ಲೋಹಶಾಸ್ತ್ರ ಮತ್ತು ಉತ್ಪಾದನೆ ಎರಡರಲ್ಲಿನ ಸುಧಾರಣೆಗಳನ್ನು ಅನುಸರಿಸಿ, ಚಾಕುವಿನ ಅಲಗನ್ನು ತಾಮ್ರ, ಕಂಚು, ಕಬ್ಬಿಣ, ಉಕ್ಕು, ಪಿಂಗಾಣಿ ಮತ್ತು ಟೈಟೇನಿಯಮ್ನಿಂದ ತಯಾರಿಸಲಾಗಿದೆ. ಬಹುತೇಕ ಆಧುನಿಕ ಚಾಕುಗಳು ಸ್ಥಿರ ಅಥವಾ ಮಡಚಬಲ್ಲ ಅಲಗುಗಳನ್ನು ಹೊಂದಿರುತ್ತವೆ; ಅಲಗಿನ ಮಾದರಿಗಳು ಮತ್ತು ಶೈಲಿಗಳು ತಯಾರಕ ಹಾಗೂ ಉಗಮದ ದೇಶ ಬದಲಾದಂತೆ ಬದಲಾಗುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.