ಜಾನ್ ಟಿರೊಲ್
From Wikipedia, the free encyclopedia
ಡಾ. ಜಾನ್ ಟಿರೊಲ್ಶ (ಜ.೧೯೫೩,ಫ್ರಾನ್ಸ್ ದೇಶದ,ಟ್ರಾಯ್ಸ್, ನಲ್ಲಿ) [1] ರವರು ಫ್ರಾನ್ಸ್ ದೇಶದ ಫ್ರೆಂಚ್ ಅರ್ಥಶಾಸ್ತ್ರಜ್ಞ, ೨೦೧೪ ರ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ.[2] ಸರ್ಕಾರ, ವಾಣಿಜ್ಯ ಒಕ್ಕೂಟಗಳೊಂದಿಗೆ ಹೇಗೆ ವ್ಯವಹರಿಸಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ವಿಷಯದ ಬಗ್ಗೆ ಅವರು ಒಂದು ಹೊಸ ನೀತಿಯನ್ನು ಪ್ರಚಾರಕ್ಕೆ ಅನುವುಮಾಡಿಕೊಟ್ಟರು. ಇದು ಅರ್ಥ ಶಾಸ್ತ್ರಕ್ಕೆ ನೀಡುವ ಪಾರಿತೋಷಕವಾದರೂ, ವಿಶೇಷವಾಗಿ, ಮಾರುಕಟ್ಟೆ ಶಕ್ತಿ- ಸಾಮರ್ಥ್ಯ ಮತ್ತು ನಿಯಂತ್ರಣ ಕುರಿತು ಕೈಗೊಂಡ ಸಂಶೋಧನೆಗಾಗಿ 'ಸ್ವೀಡಿಷ್ ರಾಯಲ್ ಅಕ್ಯಾಡೆಮಿ' ಆವರಿಗೆ 'ಆಲ್ಫ್ರೆಡ್ ನೋಬೆಲ್' ನೆನಪಿಗಾಗಿ ಈ ಪ್ರಶಸ್ತಿಯನ್ನು ಪ್ರದಾನಮಾಡುವ ನಿರ್ಣಯ ತೆಗೆದುಕೊಂಡಿದೆ.[3]
Quick Facts ಜಾನ್ ಟಿರೋಲ್, ಜನನ ...
ಜಾನ್ ಟಿರೋಲ್ | |
---|---|
ಜನನ | ಆಗಸ್ಟ್,೯,೧೯೫೩ ಟ್ರಾಯ್ಸ್, ಫ್ರಾನ್ಸ್) |
ರಾಷ್ಟ್ರೀಯತೆ | ಫ್ರೆಂಚ್ ನಾಗರಿಕ |
Known for | ವರ್ಷ,೨೦೧೪ ರ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಪ್ರಶಸ್ತಿ, ಪುರಸ್ಕೃತ ಅರ್ಥಶಾಸ್ತ್ರಜ್ಞರು, [ಟೊಲೌಸ್ ಸ್ಕೂಲ್ ಆಫ್ ಎಕೊನಾಮಿಕ್ಸ್] |
Close