ಜೀವಭೌತಶಾಸ್ತ್ರವು ಜೈವಿಕ ವ್ಯವಸ್ಥೆಗಳ ಅಧ್ಯಯನಕ್ಕೆ ಭೌತವಿಜ್ಞಾನದ ವಿಧಾನ ಹಾಗೂ ಸಿದ್ಧಾಂತಗಳನ್ನು ಬಳಸುವ ಒಂದು ಅಂತರ್ ಶಾಸ್ತ್ರೀಯ ವಿಭಾಗವಾಗಿದೆ. ಜೀವಭೌತಶಾಸ್ತ್ರವು ಅಣ್ವಿಕ ಪ್ರಮಾಣದಿಂದ ಎಲ್ಲಾ ಜೀವಿಗಳ ಹಾಗೂ ಪರಿಸರ ವ್ಯವಸ್ಠೆಯ ಮಟ್ಟದವರೆಗೆ ವ್ಯಾಪಿಸಿದೆ.ಜೀವಭೌತಶಾಸ್ತ್ರದ ಸಂಶೋಧನೆಗಳು ಜೀವರಸಾಯನ ಶಾಸ್ತ್ರ,ಜೀವಶಿಲ್ಪಶಾಸ್ತ್ರ,ನ್ಯಾನೋತಂತ್ರಜ್ಞಾನ,ಕೃಷಿಭೌತಶಾಸ್ತ್ರ(Agro physics) ಮುಂತಾದ ಇತರ ವಿಭಾಗಗಳೊಂದಿಗೆ ಹರಡಿಕೊಂಡಿದೆ. ಸಾಮಾನ್ಯವಾಗಿ, ಜೀವಭೌತಶಾಸ್ತ್ರ ತನ್ನದೇ ಆದ ವಿಶ್ವವಿದ್ಯಾಲಯ ಮಟ್ಟದ ಇಲಾಖೆಗಳನ್ನು ಹೊಂದಿಲ್ಲದಿರಬಹುದು, ಆದರೆ ಅಣು ಜೀವಶಾಸ್ತ್ರ, ಜೀವರಸಾಯನಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಗಣಿತ, ವೈದ್ಯಕೀಯ, ಔಷಧ, ಶರೀರ, ಭೌತಶಾಸ್ತ್ರ, ಮತ್ತು ನರವಿಜ್ಞಾನ ಕ್ಷೇತ್ರಗಳಲ್ಲಿ ವಿಭಾಗಗಳ ಇರುವ ಗುಂಪುಗಳಲ್ಲಿ ತನ್ನ ಉಪಸ್ಥಿತಿ ಹೊಂದಿದೆ. ಈ ಕೆಳಗಿನ ಪಟ್ಟಯು ಈ ರೀತಿಯ ಇತರವಿಭಾಗಗಳೊಂದಿಗಿನ ಸಂಬಂಧವನ್ನು ಸೂಚಿಸುತ್ತದೆ.

  1. ಜೀವಶಾಸ್ತ್ರ ಮತ್ತು ಅಣುಜೀವಶಾಸ್ತ್ರ - ಜೀವಶಾಸ್ತ್ರ ವಿಭಾಗದಲ್ಲಿ ಜೀವಭೌತಶಾಸ್ತ್ರದ ಪ್ರಯತ್ನಗಳ ಎಲ್ಲಾ ಪ್ರಕಾರಗಳು ಯಾವುದಾದರೂ ಒಂದು ವಿಧದಲ್ಲಿ ಸೇರಿಕೊಂಡಿದೆ.ಉದಾಹರಣೆಗೆ. ಜೀನ್ ನಿಯಂತ್ರಣ, ಏಕ ಪ್ರೋಟೀನ್ ಕ್ರಿಯಾಶೀಲತೆ ,ಬೈಯೊಎನೆರ್ಜೆಟಿಕ್ಸ್, , ಜೀವ ತಾಂತ್ರಿಕ: ಇತ್ಯಾದಿಗಳು.
  2. ಜೀವರಚನಾಶಾಸ್ತ್ರ (Structural Biology) - ಪ್ರೋಟೀನ್‍ನ ಆಂಗ್‍ಸ್ಟಾರ್ಮ್ ಪೃಥಕ್ಕರಣ (Resolution)ರಚನೆಗಳು, ನ್ಯೂಕ್ಲಿಕ್ ಆಮ್ಲ, ಮೇದಸ್ಸು, ಕಾರ್ಬೋಹೈಡ್ರೇಟಗಳ ಸಂಕೀರ್ಣಗಳಲ್ಲಿ.
  3. ಜೀವರಾಸಾಯನಿಕ ಮತ್ತು ರಸಾಯನಶಾಸ್ತ್ರ - ಜೀವಪರಮಾಣುವಿನ ರಚನೆ, , ನ್ಯೂಕ್ಲಿಯಿಕ್ ಆಮ್ಲ ರಚನೆ, ರಚನೆ ಹಾಗೂ ಚಟುವಟಿಕೆ ಸಂಬಂಧಗಳ ಅಧ್ಯಯನದಲ್ಲಿ.
  4. ಕಂಪ್ಯೂಟರ್ ವಿಜ್ಞಾನ - ನ್ಯೂರಲ್ ನೆಟ್ವರ್ಕ್ ,ಜೀವಪರಮಾಣು (biomolecular) ಮತ್ತು ಔಷಧ ಡೇಟಾಬೇಸ್ ಗಳಲ್ಲಿ.
  5. ಕಾಂಪ್ಯುಟೇಶನಲ್ ರಸಾಯನಶಾಸ್ತ್ರ - ಪರಮಾಣುಗಳ ಕ್ರಿಯಾತ್ಮಕ ಛದ್ಮನ (ಸಿಮ್ಯುಲೇಶನ್), ಆಣ್ವಿಕ ಡಾಕಿಂಗ್, ಕ್ವಾಂಟಂ ರಾಸಾಯನಿಕ
  6. ಜೀವಮಾಹಿತಿಶಾಸ್ತ್ರ(ಬಯೋಇನ್ಫರ್ಮ್ಯಾಟಿಕ್ಸ್{) - ಸೀಕ್ವೆನ್ಸ್ ಅಲೈನ್ಮೆಂಟ್,ರಚನಾತ್ಮಕ ಜೋಡಣೆ,ಪ್ರೋಟೀನ್ ರಚನಾ ಭವಿಷ್ಯ
  7. ಗಣಿತ - ಗ್ರಾಫ್ / ಜಾಲಬಂಧ ಸಿದ್ಧಾಂತ, ಜನಸಂಖ್ಯೆಯ ಮಾಡೆಲಿಂಗ್, ಬದಲಾವಣೆಯ ವ್ಯವಸ್ಥೆಗಳನ್ನು, ,ಪಿಲೋಜೆನೆಟಿಕ್ಸ್
  8. ಔಷಧ ಮತ್ತು ನರವಿಜ್ಞಾನ - ನರವ್ಯೂಹಗಳ ಪ್ರಾಯೋಗಿಕ (ಮೆದುಳಿನ ಸ್ಲೈಸಿಂಗ್) ಹಾಗೂ ಸೈದ್ಧಾಂತಿಕವಾಗಿ (ಕಂಪ್ಯೂಟರ್ ಮಾದರಿಗಳು)ನಿಭಾವಣೆ, ಪೊರೆಯ permitivity, ಜೀನ್ ಚಿಕಿತ್ಸೆ, ಗೆಡ್ಡೆಗಳ ತಿಳುವಳಿಕೆ.
  9. ಔಷಧ ಮತ್ತು ಶರೀರ - ಚಾನೆಲ್ ಜೀವಶಾಸ್ತ್ರ, ಪರಮಾಣುಜೀವಶಾಸ್ತ್ರ ಹೊಂದಾಣಿಕೆ, ಸೆಲ್ಯುಲರ್ ಪೊರೆಗಳು,
  10. ಭೌತಶಾಸ್ತ್ರ -
  11. ಬೆಳೆ ವಿಜ್ಞಾನ ಮತ್ತು ಕೃಷಿ
Thumb
Photosynthetic reaction center

ಅನೇಕ ಜೀವಭೌತಶಾಸ್ತ್ರೀಯ ತಂತ್ರಗಳು ಈ ಕ್ಷೇತ್ರಕ್ಕೆ ವಿಶಿಷ್ಟವಾಗಿವೆ. ಅನೇಕ ಜೀವಭೌತಶಾಸ್ತ್ರ ಸಂಶೋಧನಾ ಪ್ರಯತ್ನಗಳು ತರಬೇತಿ ಹೊಂದಿದ ಸಾಂಪ್ರದಾಯಿಕ ಭೌತ, ರಸಾಯನ, ಮತ್ತು ಜೀವಶಾಸ್ತ್ರ ವಿಜ್ಞಾನಿಗಳಿಂದ ಪ್ರಾರಂಭಿಸಲ್ಪಟ್ಟಿವೆ.

ಬಾಹ್ಯ ಕೊಂಡಿಗಳು‌‌

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.