![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/ad/Orb_weaver_spider_day_web2.jpg/640px-Orb_weaver_spider_day_web2.jpg&w=640&q=50)
ಜೇಡ
From Wikipedia, the free encyclopedia
ಜೇಡ(ನ್ಯೂ ಲ್ಯಾಟಿನ್, ಫ್ರೆಂಚ್ - ಚೆಲಿಕೇರ್ನ, ಪ್ರಾಚೀನ ಗ್ರೀಕ್ನಿ χηλή (khēlḗ) 'ಕ್ಲಾವ್, ಚೇಲಾ' ಮತ್ತು κέρας (ಕೆರಾಸ್) 'ಹಾರ್ನ್')[1] ಆತ್ರ್ರಾಪೊಡ ವಿಭಾಗದ ಆರ್ಯಾಕ್ನಿಡ ವರ್ಗದ ಆರನೀಯಿಡ ಗಣಕ್ಕೆ ಸೇರಿದ ಒಂದು ಪ್ರಾಣಿ (ಸ್ಪೈಡರ್). ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗೆ (ಸಬ್ಫೈಲಮ್) ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್ಟಿಕದ ಹೊರತಾಗಿ ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ, ಮತ್ತು ಗಾಳಿ ಹಾಗೂ ಸಾಗರ ವಾಸದ ಹೊರತಾಗಿ ಹೆಚ್ಚುಕಡಮೆ ಪ್ರತಿಯೊಂದು ಜೀವಿ ಪರಿಸ್ಥಿತಿ ಆವರಣದಲ್ಲೂ ನೆಲೆಗೊಂಡಿವೆ. ೨೦೦೮ರ ವೇಳೆಗೆ, ವರ್ಗೀಕರಣ ವಿಜ್ಞಾನಿಗಳಿಂದ ಸುಮಾರು ೪೦,೦೦೦ ಜೇಡ ಜಾತಿಗಳು, ಮತ್ತು ೧೦೯ ಕುಟುಂಬಗಳನ್ನು ದಾಖಲಿಸಲಾಗಿದೆ.
ಜೇಡ Temporal range: ಕಾರ್ಬೊನಿಫೆರಸ್ ಇಂದ ಪ್ರಸಕ್ತ ಕಾಲ | |
---|---|
![]() | |
ಬಲೆ ನೇಯುತ್ತಿರುವ ಒಂದು ಜೇಡ | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ಉಪವಿಭಾಗ: | |
(ಶ್ರೇಣಿಯಿಲ್ಲದ್ದು): | |
ವರ್ಗ: | |
ಗಣ: | |
ಉಪಗಣಗಳು | |
Diversity | |
[[ಅರೇನಿಯ ಕುಟುಂಬಗಳು|109 families, c.40,000 species]] |
ಆರ್ಯಾಕ್ನಿಡ ವರ್ಗದಲ್ಲಿರುವ ಹನ್ನೊಂದು ಗಣಗಳಲ್ಲೆಲ್ಲ ಪ್ರಭೇದಗಳ ಸಂಖ್ಯೆಯ ದೃಷ್ಟಿಯಿಂದ ಮತ್ತು ವ್ಯಾಪ್ತಿಯ ದೃಷ್ಟಿಯಿಂದ ಜೇಗಳ ಗಣವೇ ಅತ್ಯಂತ ಪ್ರಮುಖವಾದ್ದು. ಅಂತೆಯೇ ಇವು ಹಲವಾರು ವಿಧಗಳಲ್ಲಿ ಅತ್ಯಂತ ಕುತೂಹಲಕಾರಿಗಳು ಮತ್ತು ಪರಿಚಿತವಾಗಿರುವಂಥವು. ಮುಂದೆ ಹೇಳುವ ಲಕ್ಷಣಗಳಿಂದ ಇವನ್ನು ಆತ್ರ್ರಾಪೊಡ ವಿಭಾಗದ ಇತರ ಸದಸ್ಯಗಳಿಂದ ಭಿನ್ನವಾಗಿ ಗುರುತಿಸಬಹುದು: ಜೇಡದ ದೇಹ ಪ್ರೋಸೋಮ ಅಥವಾ ಸೆಫಲೊತೋರ್ಯಾಕ್ಸ್ (ಶೀರೋವಕ್ಷ) ಮತ್ತು ಒಪಸ್ತೊಸೋಮ ಅಥವಾ ಉದರ ಎಂಬ ಎರಡು ವಲಯಗಳಾಗಿ ವಿಭಾಗವಾಗಿದೆ; ವಿಷಗ್ರಂಥಿಗಳು ಕೀಲಿಸೆರೀ ಎಂಬ ಉಪಾಂಗಗಳಲ್ಲಿ ಇವೆ. ಪ್ರತಿಯೊಂದು ಕೀಲಿಸೆರದಲ್ಲೂ ಮ್ಯಾಂಡಿಬಲ್ ಎಂಬ ಬುಡಭಾಗ ಮತ್ತು ನಖ ಎಂಬ ತುದಿಭಾಗ ಉಂಟು. ವಿಷ ಗ್ರಂಥಿಗಳಿಂದ ಹೊರಡುವ ನಾಲ ಕೀಲಿಸೆರದ ತುದಿಯಲ್ಲಿ ಹೊರತೆಗೆಯುತ್ತದೆ; ಸಾಧಾರಣವಾಗಿ ಒಪಿಸ್ತೊಸೋಮ ಮತ್ತು ಯಾವಾಗಲೂ ಪ್ರೋಸೋಮ ಅಖಂಡವಾಗಿವೆ; ಉಸಿರಾಟ ಪದರಫುಪ್ಫುಸ (ಬುಕ್ಲಂಗ್) ಮತ್ತು ಶ್ಯಾಸನಾಳ (ಟ್ರೇಕಿಯ) ಎರಡರಿಂದಲೂ ನಡೆಯುತ್ತದೆ; ಗಂಡು ಜೇಡದ ಪ್ಯಾಲ್ಟಿನ ಕೊನೆಯ ಖಂಡ ಶುಕ್ರಾಣು ವಾಹಕ ಅಂಗವಾಗಿ ಮಾರ್ಪಟ್ಟಿದೆ.