ಜೇಮ್ಸ್ ಬಾಂಡ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
- For a topical guide to this subject, see Outline of James Bond.
ಲೇಖಕರು | Ian Fleming |
---|---|
ದೇಶ | United Kingdom |
ಭಾಷೆ | English |
ವಿಷಯ | Spy fiction |
ಪ್ರಕಾರ | Action/Suspense |
ಪ್ರಕಾಶಕರು | Jonathan Cape |
ಪ್ರಕಟವಾದ ದಿನಾಂಕ | 1953–present |
ಜೇಮ್ಸ್ ಬಾಂಡ್ 007 ಎಂಬುದು 1953 ರಲ್ಲಿ ಲೇಖಕ ಇಯಾನ್ ಫ್ಲೆಮಿಂಗ್ನಿಂದ ಸೃಷ್ಟಿಯಾದ ಒಂದು ಕಾಲ್ಪನಿಕ ಪಾತ್ರ. ಹನ್ನೆರಡು ಕಾದಂಬರಿಗಳುಹಾಗೂ ಎರಡು ಸಣ್ಣ ಕಥೆಗಳಲ್ಲಿ ಇದು ಒಳಗೊಂಡಿದೆ. 1962ರಲ್ಲಿ ತಯಾರಾದ ಡಾ.ನೋ ದಿಂದ ಪ್ರಾರಂಭಗೊಂಡ ಈ ಪಾತ್ರವು ಆಂಗ್ಲ ಭಾಷೆಯ ಅತಿ ಹೆಚ್ಚು ಓಡಿದ ಹಾಗೂ ದುಡ್ಡು ಗಳಿಸಿದ ಚಿತ್ರ ಸರಣಿಯಾಗಿದೆ.[1][2][3]
1964 ರಲ್ಲಿ ಫ್ಲೇಮಿಂಗ್ನ ಸಾವಿನ ನಂತರ ಮುಂದಿನ ಜೇಮ್ಸ್ ಬಾಂಡ್ ಕಾದಂಬರಿಗಳು ಕಿಂಗ್ಸ್ಲೇ ಆಮಿಸ್ (ರಾಬರ್ಟ್ ಮಾರ್ಕಾಮ್), ಜಾನ್ ಪರ್ಸನ್, ರೇಮಂಡ್ ಬೆನ್ಸನ್, ಜಾನ್ ಗಾರ್ಡನ್ ಮತ್ತು ಸಬಾಸ್ಟಿಯನ್ ಫಾಕ್ಸ್ರಿಂದ ಬರೆಯಲ್ಪಟ್ಟವು. ಕ್ರಿಸ್ಟೋಫರ್ ವೂಡ್ಸ್ಕ್ರೀನ್ ಪ್ಲೇಗಳನ್ನು ಕಾದಂಬರಿಗಳನ್ನಾಗಿಸಿದ ಚಾರ್ಲಿ ಹಿಗ್ಸನ್ ಯುವ ಜೇಮ್ಸ್ ಬಾಂಡ್ಮೇಲೆ ಬರೆದನು, ಉಳಿದ ಲೇಖಕರು ಪಾತ್ರದ ಅನಧಿಕೃತ ಆವೃತ್ತಿಯನ್ನು ಬರೆದಿದ್ದಾರೆ.[4]
ಇ.ಓ.ಎನ್. ನಿರ್ಮಾಣದಚಿತ್ರಸರಣಿಗಳಲ್ಲಿ 22 ಚಲನಚಿತ್ರಗಳು ಹೊರಬ೦ದಿದ್ದು, ಇತ್ತೀಚಿನದೆಂದರೆ 31 ಅಕ್ಟೋಬರ್ 2008ರಲ್ಲಿ ಬಿಡುಗಡೆಯಾದ ಕ್ವಾಂಟಮ್ ಆಪ್ ಸೊಲೇಸ್ ಅಮೇರಿಕದ ದೂರದರ್ಶನದ ನಿರ್ಮಾಣಗಳು ಹಾಗೂ ಎರಡು ಪ್ರತ್ಯೇಕ ವಿಶೇಷ ನಿರ್ಮಾಣ ಇದರೊಂದಿಗೆ ಸೇರಿದೆ. ಚಲನಚಿತ್ರಗಳು ಹಾಗೂ ದೂರದರ್ಶನವನ್ನು ಹೊರತುಪಡಿಸಿ ರೇಡಿಯೋ ನಾಟಕಗಳು, ಕಾಮಿಕ್ಸ್ ಗಳು, ವೀಡಿಯೋ ಗೇಮ್ಸ್ ಮುಂತಾದವುಗಳಲ್ಲಿ ಕೂಡ ಜೇಮ್ಸ್ ಬಾಂಡ್ ಪಾತ್ರದ ಬಳಕೆಯಾಗಿದೆ.
ಇ.ಓ.ಎನ್ ನಿರ್ಮಾಣದ ಚಿತ್ರಗಳು ಸಾಮಾನ್ಯವಾಗಿ ಅಧಿಕೃತ ಚಿತ್ರಗಳೆಂದು ಪರಿಗಣಿಸಲ್ಪಡುತ್ತಿದ್ದು, ಜೇಮ್ಸ್ ಬಾಂಡ್ ಚಿತ್ರಗಳ ನಿರ್ಮಾಪಕ ಹ್ಯಾರಿ ಸಾಜ್ಮೆನ್ನಿಂದ 1950ರಲ್ಲಿ ಖರೀದಿಸಲ್ಪಟ್ಟಿವೆ.